ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರ ಮೊದಲು, ಎಲೆಕ್ಟಾನಿಕ್ ಸಿಟಿ ಕೊನೆ: ಸಮೀಕ್ಷೆ

By Mahesh
|
Google Oneindia Kannada News

Jayanagar voted best DNA survey
ಬೆಂಗಳೂರು, ಡಿ.16: ಬೆಂಗಳೂರಿನಲ್ಲಿ ವಾಸಿಸಲು ಎಲ್ಲ ರೀತಿಯಿಂದಲೂ ಯೋಗ್ಯವಾದ ಪ್ರದೇಶ ಯಾವುದು? ಎಂಬ ಪ್ರಶ್ನೆ ಹೊತ್ತುಕೊಂಡು ಡಿಎನ್ ಎ-ಎಜಡ್ ಜಂಟಿ ಸಂಶೋಧನಾ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಬೆಂಗಳೂರಿಗರಿಗೆ ಮಿಕ್ಕ ಎಲ್ಲಾ ಬಡಾವಣೆಗಳಿಗಿಂತ ಜಯನಗರ ಅಚ್ಚುಮೆಚ್ಚಿನ ತಾಣವಾಗಿದೆ. ಟೆಕ್ಕಿಗಳ ಆವಾಸ ಸ್ಥಾನ ಎಲೆಕ್ಟ್ರಾನಿಕ್ ಸಿಟಿ ಅತಿ ಕಡಿಮೆ ವೋಟು ಗಳಿಸಿ ಕೊನೆ ಸ್ಥಾನ ಗಳಿಸಿದೆ.

ಮೂಲಸೌಕರ್ಯ, ಆರೋಗ್ಯ ಅನುಕೂಲಗಳು(ಆಸ್ಪತ್ರೆ), ಮನರಂಜನೆ(ರೆಸ್ಟೋರೆಂಟ್, ಶಾಪಿಂಗ್ ಮಾಲ್ ಗಳು, ಥೇಟರ್ ಗಳು..ಇತ್ಯಾದಿ), ಆರೋಗ್ಯಕರ ಹಾಗೂ ಸುರಕ್ಷಿತ ಜೀವನ ಗುಣಮಟ್ಟ, ಶೈಕ್ಷಣಿಕ ವ್ಯವಸ್ಥೆ ಹಾಗೂ ವಸತಿ ಅನುಕೂಲಗಳ ಕುರಿತು ಜನರಿಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿರುವ ನಮ್ಮ ಬೆಂಗಳೂರಿನ ಜನರು ಜಯನಗರ ವಾಸಿಸಲು ಎಲ್ಲ ರೀತಿಯಿಂದಲೂ ಯೋಗ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಯನಗರದ ನಂತರದ ಸ್ಥಾನದಲ್ಲಿ ಕೋರಮಂಗಲ, ಇಂದಿರಾನಗರ, ಮಲ್ಲೇಶ್ವರ, ಎಚ್ ಆರ್ ಬಿಆರ್ ಲೇಔಟ್, ಜೆಪಿ ನಗರ, ಬನಶಂಕರಿ, ಬಿಟಿಎಂ ಲೇಔಟ್, ಸಿಬಿಡಿ(Central Business District) ಹಾಗೂ ಯಲಹಂಕ ಬಡಾವಣೆಗಳಿವೆ.

ಕಳೆದ ಬಾರಿ ಅಗ್ರಸ್ಥಾನದಲ್ಲಿದ್ದ ಇಂದಿರಾನಗರ ಈ ಬಾರಿ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದೆ. ಎಚ್ ಆರ್ ಬಿಆರ್ ಲೇಔಟ್, ಜಯನಗರ(ಜೆಪಿ ನಗರ ಹಾಗೂ ಬನಶಂಕರಿ ಸೇರಿ), ಮಲ್ಲೇಶ್ವರ(ಸದಾಶಿವ ನಗರ ಸೇರಿ) ಹಾಗೂ ಕೋರಮಂಗಲ ನಂತರದ ಸ್ಥಾನದಲ್ಲಿದ್ದವು. ಎಲೆಕ್ಟ್ರಾನಿಕ್ ಸಿಟಿ ಇನ್ನೂ ಮೂಲಸೌಕರ್ಯಗಳ ಕೊರತೆ ಅನುಭವಿಸುತ್ತಿದ್ದು, ಬೆಂಗಳೂರಿಗರ ಕೋಪಕ್ಕೆ ಮತ್ತೊಮ್ಮೆ ತುತ್ತಾಗಿದೆ.

English summary
Jayangar is the best livable locality in Bengaluru according to DNA AZ survey. Bangalore residents voted Koramangala, Indiranagar, Malleswaram after Jayanagar which got best votes in all parameters such as education, infrastructure, health, transport.. etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X