• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನತಾ ಪರಿವಾರ ಒಗ್ಗೂಡಲು ಸಕಾಲ : ಕುಮಾರ್

By * ಶ್ರೀನಿವಾಸಮೂರ್ತಿ, ಕೋಲಾರ
|
Google Oneindia Kannada News

ಶ್ರೀನಿವಾಸಪುರ (ಕೋಲಾರಜಿಲ್ಲೆ), ಡಿ. 17 : ರಾಜ್ಯವನ್ನು ಆಳುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಜನತಾಪರಿವಾರದ ಮುಖಂಡರು ಒಗ್ಗುಡುವ ಕಾಲ ಸನ್ನಿಹಿತವಾಗುತ್ತಿದೆ. ಇದು ಕೋಲಾರದಿಂದಲೇ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಅವರು ಕೋಲಾರ ನಗರದಲ್ಲಿ ಜಿಲ್ಲೆಯ ಪ್ರಭಾವಿ ಮುಖಂಡ ಹಾಗು ಮಾಜಿ ಸಚಿವ ಶ್ರೀನಿವಾಸಗೌಡ ಅವರ ಜೆಡಿಎಸ್ ಸೇರ್ಪಡೆ ಹಾಗು ಜಿಪಂ ಹಾಗು ತಾಪಂ ಚುನಾವಣಾ ಪ್ರಚಾರಸಭೆ ಉದ್ಘಾಟಿಸಿ ಮಾತನಾಡಿದರು. ನಾನು ಮುಖ್ಯಮಂತ್ರಿಯಾಗುವ ಆಸೆ ಉದ್ದೇಶ ಹೊಂದಿಲ್ಲ. ಆದರೆ, ಭ್ರಷ್ಟ ಸರ್ಕಾರವನ್ನು ತೊಲಗಿಸುವುದೇ ನನ್ನ ಗುರಿ ಎಂದರು.

ಬ್ರಹ್ಮ, ವಿಷ್ಣು, ಮಹೇಶ್ವರ : ಯಡಿಯೂರಪ್ಪ ತಮ್ಮ ತವರು ಜಿಲ್ಲೆ ಶಿವಮೊಗ್ಗದಲ್ಲಿ ಭರಪೂರ ಅಭಿವೃದ್ದಿ ಮಾಡಿರುವುದಾಗಿ ಹೇಳುತ್ತಿದ್ದುದನ್ನು ಕಣ್ಣಾರೆ ಕಾಣಲು ಕಳೆದವಾರ ಶಿವಮೊಗ್ಗಕ್ಕೆ ಹೊಗಿದ್ದೆ. ಅವರು ಅಲ್ಲಿ ಅಭಿವೃದ್ದಿಯಾಗುತ್ತಿರುವುದು ಜಿಲ್ಲೆಯಲ್ಲ, ಬ್ರಹ್ಮ, ವಿಷ್ಣು, ಮಹೇಶ್ವರ ಮಾತ್ರ. ಅಂದರೆ, ಅವರೇ ಮುಖ್ಯಮಂತ್ರಿಗಳ ಇಬ್ಬರು ಮಕ್ಕಳು ಹಾಗು ಅಳಿಯ ಎಂದು ವ್ಯಂಗ್ಯವಾಡಿದರು.

ಹಸಿರು ಶಾಲು ಹೆಗಲೇರಿಸಿಕೊಂಡು ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಗ್ರಾಮೀಣ ಜನರ, ದಲಿತರ ಹಾಗು ಅಲ್ಪಸಂಖ್ಯಾತರಿಗೆ ಹೊರೆಯಾಗುವಂತಹ ಅಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು. ರೈತಾಪಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಾಲದ ಮೇಲಿನ ಬಡ್ಡಿ ಮನ್ನಮಾಡುವಂತೆ ರೈತರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮನವಿ ಮಾಡಿದರೆ, ನಾನೇನು ನೋಟು ಪ್ರಿಂಟ್ ಮಾಡುತ್ತಿದ್ದೀನಾ ಎಂದು ಉದ್ಧಟತನದಿಂದ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಪಿಜಿಆರ್ ಸಿಂಧ್ಯ, ಅಬ್ದುಲ್ ಅಜೀಂ, ಜಮೀರ ಆಹ್ಮದ್ ಮುಂತಾದ ಮುಖಂಡರು ಹಾಜರಿದ್ದರು.

English summary
JD(S) state president HD Kumaraswamy said in Kolar that Janata Parivar unification is imminent and time is rife for brining down corrupt Yeddyurappa"s government in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X