ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಯೋತ್ಪಾದನೆ : ಪಾಕ್ ವಿರುದ್ಧ ಎಂಟನಿ ಆಕ್ರೋಶ
ಡಿ.16 ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಅವರ ಮಾತನಾಡುತ್ತಿದ್ದರು. ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕ ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡುತ್ತಿದೆ. ಮುಖ್ಯವಾಗಿ ತಾಲಿಬಾನ್ ಉಗ್ರರ ಅಟ್ಟಹಾಸವನ್ನು ಮಟ್ಟ ಹಾಕಲು ಈ ಹಣವನ್ನು ಅಮೆರಿಕ ನೀಡುತ್ತಿದೆ. ಆದರೆ, ಪಾಕಿಸ್ತಾನ ಆ ಹಣವನ್ನು ಪಡೆದುಕೊಂಡು ಭಾರತದ ವಿರುದ್ಧ ಭಯೋತ್ಪಾದನೆ ಆರಂಭಿಸಿದೆ. ಇದರ ವಿರುದ್ಧ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದು ಅಂಟನಿ ಭವರಸೆ ನೀಡಿದರು.
ಅಮೆರಿಕದ ಅನುದಾನವನ್ನು ಪಾಕಿಸ್ತಾನ ಅನ್ಯ ಕಾರ್ಯ ಬಳಸುತ್ತಿರುವ ಸಂಗತಿ ಗಂಭೀರವಾಗಿದ್ದು, ಈ ಬಗ್ಗೆ ಈಗಾಗಲೇ ನಾವು ಅಮೆರಿಕದ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಪರಿಹಾರವನ್ನು ಕಂಡುಕೊಳ್ಳುವುದಾಗಿ ಎಂಟನಿ ಹೇಳಿದರು.
Comments
English summary
Indian Defence Minister AK Antony reiterated that Pakistan continued to use the aid delivered by the United States against Indian and not against Taliban or any other terror activities.
Story first published: Thursday, December 16, 2010, 16:01 [IST]