ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಬಿಕ್ಕಟ್ಟಿನ ಎಚ್ಚರಿಕೆ ಗಂಟೆ ಬಾರಿಸಿದ ಇನ್ಫಿ ಸಿಇಓ

By Prasad
|
Google Oneindia Kannada News

Gopalakrishnan
ಬೆಂಗಳೂರು, ಡಿ. 15 : ಈಗಲೆ ಎಚ್ಚೆತ್ತುಕೊಳ್ಳದಿದ್ದರೆ 2008ರಲ್ಲಿ ಅನೇಕ ರಾಷ್ಟ್ರಗಳನ್ನು ಬಡತನಕ್ಕೆ ನೂಕಿದ ಆರ್ಥಿಕ ಬಿಕ್ಕಟ್ಟು ಮತ್ತೆ ಸಂಭವಿಸಬಹುದು ಮತ್ತು ಅದರ ಪರಿಣಾಮ ಹಿಂದಿಗಿಂತಲೂ ಭೀಕರವಾಗಿರುತ್ತದೆ ಎಂದು ಇನ್ಫೋಸಿಸ್ ಸಿಇಓ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಎಸ್. ಗೋಪಾಲಕೃಷ್ಣನ್ ಎಚ್ಚರಿಸಿದ್ದಾರೆ.

ಪ್ರಸ್ತುತ ಜಾಗತಿಕ ಆರ್ಥಿಕ ಸ್ಥಿತಿಗತಿ ಎರಡು ವರ್ಷಗಳ ಹಿಂದಿನಂತೆ ಇದ್ದು, ಅನಿಶ್ಚಿತತೆಯಿಂದ ಕೂಡಿದ್ದು ಅನಿರೀಕ್ಷಿತ ವಿದ್ಯಮಾನಗಳು ಸಂಭವಿಸಬಹುದು. ಪ್ರತಿ ವಾರ, ಪ್ರತಿ ತಿಂಗಳು ಆರ್ಥಿಕ ವಲಯದಲ್ಲಿ ಅನೇಕ ಸವಾಲುಗಳು ಎದುರಾಗುತ್ತಿವೆ. ಯುರೋಪ್ ರಾಷ್ಟ್ರಗಳಲ್ಲಿ ಪರಿಸ್ಥಿತಿ ತೀರ ಆತಂಕಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಒಂದು ಬ್ಯಾಂಕ್ ಮುಚ್ಚಿದರೂ ಸಾಕು ಯಾವುದೇ ದೇಶದ ಆರ್ಥಿಕ ಸ್ಥಿರತೆಯನ್ನು ಅಲ್ಲಾಡಿಸಿಬಿಡುತ್ತದೆ. ಹಿಂದಿನ ಆರ್ಥಿಕ ಮುಗ್ಗಟ್ಟು ವ್ಯಾಪಾರಕ್ಕೆ ಭಾರೀ ಧಕ್ಕೆ ಉಂಟುಮಾಡಿದ್ದರೆ, ಈಗ ಸಂಭವಿಸಬಹುದಾದ ಬಿಕ್ಕಟ್ಟು ಇಡೀ ರಾಷ್ಟ್ರವನ್ನೇ ಅತಂತ್ರವನ್ನಾಗಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜಾಗತಿಕವಾಗಿ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಕೂಡ ಗೋಪಾಲಕೃಷ್ಣನ್ ಆತಂಕ ವ್ಯಕ್ತಪಡಿಸಿದ್ದಾರೆ. ಯುಕೆಯಲ್ಲಿ ಉದ್ಭವಿಸಿರುವ ನಿರುದ್ಯೋಗದಿಂದಾಗಿ ಸರಕಾರ ಭಾರತದಿಂದ ಬರುವ ನಿಪುಣ ಕಾರ್ಮಿಕರ ವೀಸಾ ದರವನ್ನು ಹೆಚ್ಚಿಸಬೇಕಾಯಿತು ಎಂದು ತಿಳಿಸಿದ್ದಾರೆ. ನಿನ್ನೆ ತಾನೆ ಯಾಹೂ ಕಂಪನಿ ಸುಮಾರು 600 ನೌಕರರನ್ನು ಮನೆಗೆ ಕಳಿಸುವುದಾಗಿ ಹೇಳಿದ್ದು ಒಂದು ಉದಾಹರಣೆಯಷ್ಟೆ.

English summary
CEO and Managing Director of Infosys has warned of 2nd global recession. He has said global economic crisis occur again if the unpredictability continues globally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X