ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

600 ಉದ್ಯೋಗಿಗಳಿಗೆ ಯಾಹೂ ಪಿಂಕ್ ಸ್ಲಿಪ್!

By Mrutyunjaya Kalmat
|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಡಿ. 14 : ಆರ್ಥಿಕ ಕುಸಿತದ ನಂತರ ಜಾಗತಿಕ ಮಾರುಕಟ್ಟೆ ಗಮನಾರ್ಹ ರೀತಿಯಲ್ಲಿ ಚೇತರಿಕೆ ಕಂಡು ಅನೇಕ ಕಂಪನಿಗಳ ಗಣನೀಯ ಪ್ರಮಾಣದಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದು ಗೊತ್ತಿರುವ ಸಂಗತಿ. ಆದರೆ, ಯಾಹೂ ಕಂಪನಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದು, ಕಂಪನಿಯದಲ್ಲಿ ಕೆಲಸ ಮಾಡುತ್ತಿರುವ ಸುಮಾರು 600 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಚಿಂತನೆ ನಡೆಸಿದೆ.

ಕಂಪನಿಯ ವೆಬ್ ಸೈಟ್ ಪ್ರಕಾರ. ಯಾಹೂ ಕಂಪನಿಯು ಜಾಗತಿಕ ಮಟ್ಟದಲ್ಲಿ ಒಟ್ಟು 14,100 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ ಶೇ.4ರಿಂದ 5ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ತೀರ್ಮಾನಿಸಿದೆ ಎಂದು ಕಂಪನಿಯ ವಿಶ್ವಸನೀಯ ಮೂಲಗಳು ತಿಳಿಸಿವೆ. ಕರೋಲ್ ಬರ್ಟ್ಜ್ ಅವರು ಕಂಪನಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಗೂಗಲ್ ಮತ್ತು ಫೇಸ್ ಬುಕ್ ನ ಪ್ರಬಲ ಪೈಪೋಟಿ ನಡುವೆಯೂ ಉತ್ತಮ ಸಾಧನೆ ಮಾಡಿತ್ತು ಎನ್ನುವುದು ವಿಶೇಷ.

ಪಿಂಕ್ ಸ್ಲಿಪ್ ಕುರಿತ ಹಾಸ್ಯ ಪುರಾಣ : ಯಮಲೋಕದ ಸಿಇಓ ಯಮಣ್ಣ

ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುವ ಸಂಗತಿಯ ಬಗ್ಗೆ ಪ್ರತಿಕ್ರಿಯಿಸಲು ಯಾಹೂ ಕಂಪನಿ ನಿರಾಕರಿಸಿದೆ. ಡಿಸೆಂಬರ್ ಆರಂಭದಲ್ಲಿ ದಿನಗಳಲ್ಲಿ ಯಾಹೂ ಕಂಪನಿ ಸುಮಾರು 650 ಉದ್ಯೋಗಿಗಳನ್ನು ಕೈಬಿಡಲಿದೆ ಎಂದು ತಾಂತ್ರಿಕ ವೆಬ್ ಸೈಟೊಂದು ವರದಿ ಮಾಡಿತ್ತು ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಯಾಹೂ ಕಂಪನಿಯೂ ತನ್ನ ಉತ್ಪಾದನಾ ಸೇವೆಯಲ್ಲಿರುವ(ಪ್ರಾಡೆಕ್ಟ್ ಗ್ರೂಪ್) 600ರಿಂದ 700 ಉದ್ಯೋಗಿಗಳನ್ನು ಕೈಬಿಡಲು ನಿರ್ಧರಿಸಿದೆ ಎಂದು ರಾಯಿಟರ್ ಸಹ ಪ್ರಕಟಿಸಿದೆ.

English summary
Yahoo Inc plans to lay off more than 600 employees as early as Tuesday, two sources familiar with the situation said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X