ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಒಬ್ಬರಿಂದ ಗೆಲ್ಲಲು ಸಾಧ್ಯವಿಲ್ಲ : ಧೋನಿ

By Mrutyunjaya Kalmat
|
Google Oneindia Kannada News

MS Dhoni in Johannesburg
ಜೊಹಾನ್ಸ್ ಬರ್ಗ್, ಡಿ. 14 : ಕ್ರಿಕೆಟ್ ಒಬ್ಬರ ಮೇಲೆ ನಿಂತಿರುವ ಆಟವಲ್ಲ. ಒಂದಿಡಿ ತಂಡ ಒಟ್ಟಾರೆಯಾಗಿ ಉತ್ತಮ ಪ್ರದರ್ಶನ ನೀಡದರೆ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

ಡಿ 16 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಮಹತ್ವದ್ದಾಗಿದೆ. ಟೆಸ್ಟ್ ಜೀವನದಲ್ಲಿ 49 ಶತಕ ಗಳಿಸಿದ್ದು, 50 ನೇ ಟೆಸ್ಟ್ ಶತಕದ ತವಕದಲ್ಲಿದ್ದಾರೆ. ಡಿ.16ರಿಂದ ಸೆಂಚುರಿಯನ್ ಪಾರ್ಕ್ ನಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದ್ದು, ದಕ್ಷಿಣ ಆಫ್ರಿಕಾದಲ್ಲಿ ಸಚಿನ್ ಮತ್ತೆ ಮ್ಯಾಜಿಕ್ ಮಾಡಲಿದ್ದಾರೆ ಎಂದು ಮಾಧ್ಯಮಗಳು ಗುಣಗಾನ ಮಾಡುತ್ತಿರುವುದಕ್ಕೆ ಧೋನಿ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಜೋಹಾನ್ಸ್ ಬರ್ಗ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಧೋನಿ, ಕ್ರಿಕೆಟ್ ಒಬ್ಬರ ಆಟವಲ್ಲ, ಒಬ್ಬರ ಆಟದಿಂದ ಉತ್ತಮ ಫಲಿತಾಂಶ ಅಸಾಧ್ಯ. ಸಚಿನ್ ಶ್ರೇಷ್ಟ ಆಟಗಾರ ಅದರಲ್ಲಿ ಎರಡು ಮಾತಿಲ್ಲ. ಆದರೆ, ಅವರೊಬ್ಬರಿಂದಲೇ ತಂಡದ ಗೆಲುವು ಅಸಾಧ್ಯ. ಇಡೀ ತಂಡ ಒಟ್ಟಾಗಿ ಉತ್ತಮ ಪ್ರದರ್ಶನ ನೀಡದರೆ ಮಾತ್ರ ಜಯಗಳಿಸಲು ಸಾಧ್ಯ ಎಂದಿದ್ದಾರೆ.

ಯುವ ಕ್ರಿಕೆಟಿಗರು ತಂಡದಲ್ಲಿದ್ದಾರೆ. ಎಲ್ಲರೂ ಉತ್ತಮ ಫಾರ್ಮನಲ್ಲಿ ಇರುವುದರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದೇವೆ. ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ನಾವುಗಳು ಅವರಿಗೆ ಉತ್ತಮ ಪೈಪೋಟಿ ನೀಡುವುದರಲ್ಲಿ ಸಂದೇಹವಿಲ್ಲ. ಜೊತೆಗೆ ದಕ್ಷಿಣಾ ಆಫ್ರಿಕಾದ ಪ್ರತಿ ಆಟಗಾರ ಆಟದ ಶೈಲಿಯನ್ನು ಗಮನಿಸುತ್ತಿದ್ದು, ಉತ್ತಮ ತಂತ್ರ ರೂಪಿಸಲಾಗುವುದು ಎಂದು ಧೋನಿ ವಿವರಿಸಿದರು.

ಡಿ.16 ರಂದು ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಪಾರ್ಕ್ ನಲ್ಲಿ ಮೊದಲ ಟೆಸ್ಟ್ ನಡೆಯಲಿದೆ. ಒಟ್ಟು 3 ಟೆಸ್ಟ್, 5 ಏಕದಿನ ಪಂದ್ಯ ಹಾಗೂ 1 ಟ್ವೆಂಟಿ-20 ಪಂದ್ಯಗಳನ್ನು ಭಾರತ ಆಡಲಿದೆ. ಫೆ. 19 ರಿಂದ ಐಸಿಸಿ ವಿಶ್ವಕಪ್ 2011 ರಂದು ಆರಂಭವಾಗಲಿದೆ.

English summary
India captain MS Dhoni downplayed the role of batting superstar Sachin Tendulkar on Monday ahead of a three-Test series against South Africa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X