ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಪಂ ಚುನಾವಣೆ : ಶಿವಮೂಗ್ಗ ಜಿಲ್ಲಾ ಅಭ್ಯರ್ಥಿಗಳ ಪಟ್ಟಿ

By * ಕೆ ಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

Voters
ಶಿವಮೊಗ್ಗ, ಡಿ. 13 : ಶಿವಮೊಗ್ಗ ಜಿಲ್ಲಾ ಪಂಚಾಯತಿ ಚುನಾವಣೆಯ 31 ಸ್ಥಾನಗಳ ಪೈಕಿ ಭಾರತೀಯ ಜನತಾ ಪಕ್ಷ 23 ಜಿಲ್ಲಾ ಪಂಚಾಯತಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇಂದು ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿಯ ಜಿಲ್ಲಾಧ್ಯಕ್ಷ ಆರ್ ಕೆ ಸಿದ್ದರಾಮಣ್ಣ ಮಾತನಾಡಿ, ಜಿಪಂ ಹಾಗೂ ತಾಪಂ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಬಿಜೆಪಿಯು ಕಳೆದ ಎರಡು ದಿನಗಳಿಂದ ಪ್ರಾರಂಭಿಸಿದೆ. ಇಡೀ ರಾಜ್ಯದಲ್ಲಿ 30 ಜಿಲ್ಲೆಗಳ ಪೈಕಿ ಕನಿಷ್ಠ 22 ಜಿಲ್ಲೆಗಳಲ್ಲಿ ಬಿಜೆಪಿ ಜಿಪಂನಲ್ಲಿ ಅಧಿಕಾರ ಪಡೆಯಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಸೂಚಿಸಿದ್ದಾರೆ ಎಂದರು.

ಹಾಗೆಯೇ, ಜಿಲ್ಲೆಯಲ್ಲಿಯೂ ಜಿಪಂನ 31 ಸ್ಥಾನಗಳಿಗೆ ಸೂಕ್ತ ಅಭ್ಯರ್ಥಿಯ ಹುಡುಕಾಟ ಒಂದು ಹಂತದಲ್ಲಿ ಪೂರ್ಣಗೊಂಡಿದ್ದು, 31 ಸ್ಥಾನಗಳಲ್ಲಿ ಕನಿಷ್ಠ 25 ಸ್ಥಾನ ಗೆಲ್ಲುವಂತಹ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಸೂಕ್ತ ಅಭ್ಯರ್ಥಿಯನ್ನು ಗುರುತಿಸಲಾಗಿದೆ ಎಂದರು. ಈಗಾಗಲೇ ಜಿಪಂಗೆ 23 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಉಳಿದ 8 ಸ್ಥಾನಗಳಿಗೆ ಇನ್ನೊಂದು ಸುತ್ತಿನ ಸಮಾಲೋಚನೆ ನಡೆಸಿ, ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮ ಗೊಳಿಸಲಾಗುವುದು ಎಂಬ ಮಾಹಿತಿಯನ್ನು ನೀಡಿದರು.

ಹಾಗೆಯೇ, ತಾಲ್ಲೂಕು ಪಂಚಾಯತ್ ಚುನಾವಣೆ ಯಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಜೊತೆಗೆ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಜಿಪಂ ಅಭ್ಯರ್ಥಿಗಳ ಪಟ್ಟಿ

ತೀರ್ಥಹಳ್ಳಿ ತಾಲ್ಲೂಕಿನ ಆರಗ ಕ್ಷೇತ್ರಕ್ಕೆ ಬ್ಯಾಡನಬೈಲು ಬಿಎಸ್ ಯಲ್ಲಪ್ಪ(ಎಸ್.ಸಿ. ಮೀಸಲು), ಕುಪ್ಪಳ್ಳಿ ಜಿಪಂ ಕ್ಷೇತ್ರಕ್ಕೆ ಮಾಜಿ ಜಿಪಂ ಸದಸ್ಯ ಅಶೋಕ್‌ಮೂರ್ತಿ (ಸಾಮಾನ್ಯ), ಲಿಂಗಾಪುರ ಕ್ಷೇತ್ರಕ್ಕೆ ಗೀತಾ(ಸಾಮಾನ್ಯ ಮಹಿಳೆ), ಮೇಗರವಳ್ಳಿ ಕ್ಷೇತ್ರಕ್ಕೆ ಮಾಜಿ ಜಿಪಂ ಸದಸ್ಯ ಬಿ ಲಕ್ಷ್ಮಣ್ (ಬಿಸಿ ಎಂ-ಎ), ಹೊಸನಗರ ತಾಲ್ಲೂಕಿನ ಹೊಸನಗರ ಕ್ಷೇತ್ರಕ್ಕೆ ವಜ್ರೇಶ್ವರಿ (ಬಿಸಿಎಂ-ಬಿ ಮಹಿಳೆ), ನಗರ ಕ್ಷೇತ್ರಕ್ಕೆ ಶುಭ(ಸಾಮಾನ್ಯ ಮಹಿಳೆ), ರಿಪ್ಪನ್ ಪೇಟೆ ಕ್ಷೇತ್ರಕ್ಕೆ ದಿನೇಶ್ ಬಂಡಿ (ಸಾಮಾನ್ಯ), ಸಾಗರ ತಾಲ್ಲೂಕಿನ ಆನಂದಪುರ ಕ್ಷೇತ್ರಕ್ಕೆ ಮಾಜಿ ಜಿಪಂ ಸದಸ್ಯ ರವಿ ಕುಗ್ವೆ (ಬಿಸಿಎಂ-ಎ), ಆವಿನಹಳ್ಳೀ ಕ್ಷೇತ್ರಕ್ಕೆ ಭಾಗ್ಯ(ಎಸ್ ಸಿ ಮಹಿಳೆ), ಕೆಳದಿ ಕ್ಷೇತ್ರಕ್ಕೆ ವೀಣಾ ಬೆಳೆಯೂರು(ಸಾಮಾನ್ಯ ಮಹಿಳೆ).

ಸೊರಬ ತಾಲ್ಲೂಕಿನ ಆನವಟ್ಟಿ ಕ್ಷೇತ್ರಕ್ಕೆ ಗೀತಾ (ಸಾಮಾನ್ಯ ಮಹಿಳೆ), ಜಡೆ ಕ್ಷೇತ್ರಕ್ಕೆ ಅರುಣಾ (ಎಸ್ ಸಿ ಮಹಿಳೆ), ತತ್ತೂರು ಕ್ಷೇತ್ರಕ್ಕೆ ಕೋಮ ಲಾ(ಬಿಸಿಎಂ-ಎ), ಚಂದ್ರಗುತ್ತಿ ಕ್ಷೇತ್ರಕ್ಕೆ ಗುರುಕುಮಾರ್ ಪಾಟೀಲ್ (ಬಿಸಿ ಎಂ-ಬಿ), ಉಳವಿ ಕ್ಷೇತ್ರಕ್ಕೆ ಉಣವಳ್ಳಿ ಗಂಗಾಧರಪ್ಪ(ಸಾಮಾನ್ಯ), ಶಿಕಾರಿಪುರ ತಾಲ್ಲೂಕಿನ ಈಸೂರು
ಕ್ಷೇತ್ರಕ್ಕೆ ಸುರೇಶ್(ಬಿಸಿಎಂ-ಎ), ಹೊಸೂರು ಕ್ಷೇತ್ರಕ್ಕೆ ಶಾಂತಮ್ಮ(ಸಾಮಾನ್ಯ ಮಹಿಳೆ), ತೊಗರ್ಸಿ ಕ್ಷೇತ್ರಕ್ಕೆ ಡಿ ರುದ್ರಪ್ಪ ದಾನೇರ(ಸಾಮಾನ್ಯ), ಕಪ್ಪನಹಳ್ಳಿ ಕ್ಷೇತ್ರಕ್ಕೆ ಬಂಗಾರಿ ನಾಯ್ಕ (ಎಸ್.ಸಿ), ಸುಣ್ಣದಕೊಪ್ಪ ಕ್ಷೇತ್ರಕ್ಕೆ ಹೆಚ್ ಈಶ್ವರಪ್ಪ (ಸಾಮಾನ್ಯ).

ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಕ್ಷೇತ್ರಕ್ಕೆ ಶಶಿಕಲಾ(ಎಸ್ ಸಿ ಮಹಿಳೆ), ಶಿವಮೊಗ್ಗ ತಾಲ್ಲೂಕಿನ ಹಾರ್‍ನಹಳ್ಳಿ ಕ್ಷೇತ್ರಕ್ಕೆ ರೇಣುಕಮ್ಮ(ಎಸ್ ಟಿ ಮಹಿಳೆ), ಹಾಗೂ ಕುಂಸಿ ಕ್ಷೇತ್ರಕ್ಕೆ ಪ್ರೇಮ(ಬಿಸಿಎಂ-ಎ ಮಹಿಳೆ) ರವರನ್ನು ಆಯ್ಕೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ ಜಿ ಕುಮಾರಸ್ವಾಮಿ, ಮುಖಂಡರಾದ ಜ್ಯೋತಿಪ್ರಕಾಶ್, ಚನ್ನಬಸಪ್ಪ, ಗಿರೀಶ್ ಪಟೇಲ್, ದತ್ತಾತ್ರಿ, ನಟ ರಾಜ್, ಡಿ ಎಸ್ ಅರುಣ್, ಮಧುಸೂಧನ ಉಪಸ್ಥಿತರಿದ್ದರು.

English summary
Shivamogga BJP District unit president RK Siddaramanna has released 23 candidiate list for Zilla Panchayat polls. Elections to the 31-member Shivamogga zilla panchayat scheduled for December 26, MLA KG Kumaraswamy, leaders like Jyotiprakash, Channabasappa were present in press meet, in Shivamogga on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X