ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಔಟ್ ಲುಕ್ ನಿಂದ ಮತ್ತಷ್ಟು ನೀರಾ ರಾಡಿ ಬಿಡುಗಡೆ

By Mrutyunjaya Kalmat
|
Google Oneindia Kannada News

Nira Radia
ನವದೆಹಲಿ, ಡಿ. 12 : 2ಜಿ ಹಗರಣದ ಕೇಂದ್ರಬಿಂದು ನೀರಾ ರಾಡಿಯಾ ಅವರು ಉದ್ಯಮಿಗಳು, ರಾಜಕಾರಣಿಗಳು ಹಾಗೂ ಪತ್ರಕರ್ತರ ಜತೆ ನಡೆಸಿದ 800ಕ್ಕೂ ಹೆಚ್ಚು ಸಂಭಾಷಣೆಯ ಹೊಸ ತುಣುಕುಗಳನ್ನು ಔಟ್‌ಲುಕ್ ಪತ್ರಿಕೆ ಬಹಿರಂಗಪಡಿಸಿದೆ.

ಪತ್ರಿಕೆಯ ನೂತನ ಸಂಚಿಕೆಯಲ್ಲಿ ಈ ವಿಷಯಗಳು ಬಹಿರಂಗಗೊಂಡಿವೆ. ಭಾರತೀಯ ಕೈಗಾರಿಕಾ ಒಕ್ಕೂಟದ ಈ ಹಿಂದಿನ ಅಧ್ಯಕ್ಷರಾಗಿದ್ದ ತರುಣ್ ದಾಸ್ ಹಾಗೂ ತಮಿಳುನಾಡಿನ ಮಹಿಳಾ ರಾಜಕಾರಣಿಯೊಬ್ಬರ ನಡುವಣ ಸಂಭಾಷಣೆಗಳನ್ನು ಈ ನೂತನ ಟೇಪ್ ಒಳಗೊಂಡಿದೆ. ಈ ಹಿಂದೆ ನೀರಾ ಜತೆಗಿನ ಸಂಭಾಷಣೆಯ 120 ಟೇಪ್‌ಗಳು ಬಹಿರಂಗವಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿ ಎದ್ದು ರಾಜಾ ಅವರು ರಾಜೀನಾಮೆ ನೀಡಬೇಕಾಯಿತು.

2009ರ ಮೇನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಯಾವ ರೀತಿಯಲ್ಲಿ ಹಂಚಿಕೆ ಮಾಡಲಾಯಿತು. ಈ ದಿಸೆಯಲ್ಲಿ ಟಾಟಾ, ಅಂಬಾನಿಯಂತಹ ದೊಡ್ಡ ಉದ್ಯಮಿಗಳು ಯಾವ ರೀತಿಯಲ್ಲಿ ಪ್ರಭಾವ ಬೀರಿದರು ಎಂಬುದರ ಬಗ್ಗೆಯೂ ಇದು ಬೆಳಕು ಚೆಲ್ಲಿದೆ. ಅದರಲ್ಲೂ ವಿಶೇಷವಾಗಿ ಎ. ರಾಜಾ ಅವರನ್ನು ದೂರಸಂಪರ್ಕ ಸಚಿವರನ್ನಾಗಿ ನೇಮಕ ಮಾಡಲು ನಡೆದ ಲಾಬಿಯ ಬಗ್ಗೆ ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸಲಿದೆ.

ರಾಜಾ ದಲಿತ ವರ್ಗದಿಂದ ಬಂದವರು ಎಂಬ ಕಾರಣಕ್ಕಾಗಿ ಕರುಣಾನಿಧಿ ಅವರ ಸೇರ್ಪಡೆಗೆ ಒತ್ತಡ ಹೇರಿದ್ದರು. ಇದಕ್ಕೆ ಪ್ರಧಾನಿ ವಿರೋಧ ಇರಲಿಲ್ಲ. ಹಿಂದಿನ ಅಧಿಕಾರದ ಅವಧಿಯಲ್ಲಿ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡ ಟಿಆರ್ ಬಾಲು ಮಾತ್ರ ಸಂಪುಟ ಸೇರುವುದು ಬೇಡ ಎಂಬುದು ಪ್ರಧಾನಿ ಒತ್ತಾಸೆಯಾಗಿತ್ತು ಎಂದು ರಾಡಿಯಾ ಸಂಭಾಷಣೆ ವೇಳೆ ಬಹಿರಂಗಪಡಿದ್ದಾರೆ.

English summary
The English weekly magazine "Outlook" on Saturday released lobbyist Nira Radia 800 tapped conversations. As per information the today released 800 tapped conversations were the part of the over 5,800 conversations now in the custody of the Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X