ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಪಿಎಲ್ ಕಾರ್ಡುದಾರಿಗೆ ಅಕ್ಕಿಯ ಉಡುಗೂರೆ

By Mrutyunjaya Kalmat
|
Google Oneindia Kannada News

Minister V Somanna
ಬೆಂಗಳೂರು, ಡಿ. 11 : ಜಿಲ್ಲಾ ಪಂಚಾಯತಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯ ಸರಕಾರ ಜನವರಿ ತಿಂಗಳಿನಿಂದ ಎಪಿಎಲ್ ಕಾರ್ಡುದಾರರಿಗೆ ನೀಡುತ್ತಿದ್ದ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಪಿಎಲ್ ಕಾರ್ಡುದಾರರಿಗೆ ಮಾಸಿಕ 10 ಕೆಜಿ ಅಕ್ಕಿಯನ್ನು 9.49 ರುಪಾಯಿ ದರದಲ್ಲಿ ನೀಡಲಾಗುತ್ತಿದೆ. ಇದನ್ನು ಜನವರಿಯಿಂದ 15 ಕೆಜಿ ಗೆ ಹೆಚ್ಚಿಸಲಾಗುವುದು ಎಂದರು. ಇದೊಂದು ಘೋಷಿತ ಕಾರ್ಯಕ್ರಮವಾಗಿದ್ದರಿಂದ ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಅಲ್ಲದೇ ರಾಜ್ಯದಲ್ಲಿ ಲಕ್ಷಾಂತರ ಮಂದಿಗೆ ಬಿಪಿಎಲ್ ಕಾರ್ಡ್ ದೊರೆಕಿಲ್ಲ ಎಂಬ ದೂರಿದೆ. ಇಂತಹ ಕುಟುಂಬ ಗುರುತಿಸಲು ಸರ್ವೆ ಕಾರ್ಯ ನಡೆದಿದೆ. ಈಕಾರ್ಯ ಮಾರ್ಚ್ ವೇಳೆಗೆ ಮುಗಿಯಲಿದೆ. ಬಳಿಕ ಎಲ್ಲ ಅರ್ಹರಿಗೂ ಬಿಪಿಎಲ್ ಕಾರ್ಡ್ ನೀಡುವುದಾಗಿ ಸೋಮಣ್ಣ ವಿವರಿಸಿದರು. ಆದರೆ, ಅನರ್ಹರು ಗಿಟ್ಟಿಸಿರುವ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಕುರಿತು ನೇರ ಉತ್ತರ ನೀಡದ ಅವರು, ಮೊದಲು ಅರ್ಹರಿಗೆ ಕಾರ್ಡ್ ನೀಡಿ ನಂತರ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

English summary
On account of a huge stock of rice in state godowns, a decision has been taken to increase supply of rice to each APL card-holders from 10 kg to 15 kg a month at a subsidised price of Rs 9.40 per kg, said Food and Civil Supply Minister V Somanna in Bangalore on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X