ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ಅನುದಾನಿತ ಶಾಲೆಯಲ್ಲಿ 'ಸೀಟು ಲಭ್ಯವಿಲ್ಲ'!

By Prasad
|
Google Oneindia Kannada News

Nightmare for parents admitting their kids for school
ಬೆಂಗಳೂರು, ಡಿ. 11 : ಸಿಬಿಎಸ್ಇ ಮತ್ತು ಐಸಿಎಸ್ಇ ಶಿಕ್ಷಣ ಸಂಸ್ಥೆಗಳೊಂದಿಗೆ ರಾಜ್ಯ ಸರಕಾರ ಅನುದಾನಿತ ಶಾಲೆಗಳೂ ಸ್ಪರ್ಧೆಗೆ ಇಳಿದಿವೆ. ಶಿಕ್ಷಣ ಮಟ್ಟವನ್ನು ಸುಧಾರಿಸುವ ಸ್ಪರ್ಧೆಗಲ್ಲ, ನರ್ಸರಿ ಮಕ್ಕಳಿಗೆ ಶಾಲಾ ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ. ಈ ಮುಖಾಂತರ ಅನುದಾನ ಪಡೆದ ಶಾಲೆಗಳೂ ನೇರವಾಗಿ 'ವ್ಯಾಪಾರ'ಕ್ಕಿಳಿದಿವೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಯಾವ ಶಾಲೆಗೆ ಮಗುವನ್ನು ಸೇರಿಸಬೇಕು ಎಂದು ತಲೆಕೆಡಿಸಿಕೊಳ್ಳುತ್ತಿದ್ದ ಪಾಲಕರು ಈಗ ಅಕ್ಟೋಬರ್, ನವೆಂಬರ್ ತಿಂಗಳಲ್ಲಿಯೇ ಅನುದಾನಿತ ಶಾಲೆಗಳ 'ವ್ಯವಹಾರ' ನೋಡಿ ಬೇಸ್ತುಬಿದ್ದಿದ್ದಾರೆ. ಏಕೆಂದರೆ, ಅನೇಕ ಶಾಲೆಗಳು ತಮ್ಮ ಶಾಲಾ ಗೇಟಿಗೆ 'ಸೀಟು ಲಭ್ಯವಿಲ್ಲ' ಎಂಬ ಬೋರ್ಡನ್ನು ಲಗ್ಗತ್ತುಹಾಕಿವೆ.

ಕೆಲ ಶಾಲೆಗಳು ಸಂದರ್ಶನ ಮತ್ತು ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವ ಕಾರ್ಯವನ್ನು ಸಂಪನ್ನಗೊಳಿಸಿದ್ದು, ಸೀಟು ಬೇಕಾದರೆ ಮಾರ್ಚಿಗೆ ಬನ್ನಿ ಎಂದು ಪಾಲಕರನ್ನು ಸಾಗಹಾಕುತ್ತಿವೆ. ಇದರಿಂದ ಅನೇಕ ಪಾಲಕರು ರೊಚ್ಚಿಗೆದ್ದಿದ್ದಾರೆ. ಮಾರ್ಚಿಗೆ ಹೋದರೆ, ಅಷ್ಟು ಕೊಡಿ, ಇಷ್ಟು ಕೊಡಿ ಎಂದು ಕೇಳುತ್ತವೆ, ಹೀಗಾದರೆ ನಾವು ಯಾವ ಶಾಲೆಗೆ ಮಕ್ಕಳನ್ನು ಸೇರಿಸಿಕೊಳ್ಳೋಣ ಅಂತಾರೆ ಕೆಂಗೇರಿಯ ಪ್ರಸನ್ನ ಅವರು.

ನಿಯಮಗಳ ಪ್ರಕಾರ, ಅನುದಾನಿತ ಶಾಲೆಗಳು ಶೈಕ್ಷಣಿಕ ಕ್ಯಾಲೆಂಡರನ್ನು ಬಿಡುಗಡೆ ಮಾಡುವ ಮುನ್ನ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಂತಿಲ್ಲ. ಹೀಗೆ ಮಾಡಿದರೆ ಅನುದಾನ ರದ್ದು ಮಾಡುವ ಹಕ್ಕು ಸರಕಾರಕ್ಕಿದೆ. ಆದರೂ, ಕೆಲ ಶಾಲೆಗಳು ಪ್ರವೇಶ ಪ್ರಕ್ರಿಯೆಯನ್ನು ಮುಂದುವರಿಸಿವೆ.

English summary
Many schools affiliated to Karnataka govt have completed admission process even before November in the present academic year. State affiliated schools in Karnataka are not suppose to admit children before academic calendar is released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X