ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಸಂವಿಧಾನಾತ್ಮಕ ಸಂಸ್ಥೆಯಾಗಲಿ

By Mrutyunjaya Kalmat
|
Google Oneindia Kannada News

Santosh Hegde
ನವದೆಹಲಿ, ಡಿ. 10 : ಲೋಕಾಯುಕ್ತ ಸಂವಿಧಾನಾತ್ಮಕ ಸಂಸ್ಥೆಯಾದರೆ ಮಾತ್ರ ಯಾರೂ ಸವಾರಿ ಮಾಡಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಎನ್ ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಐಸಿ ಸೆಂಟರ್ ಫಾರ್ ಗವರ್ನನ್ಸ್ ಸಂಸ್ಥೆ ಗುರುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸುವ ಅಧಿಕಾರ ಲೋಕಾಯುಕ್ತಕ್ಕೆ ಇದೆ. ಆದರೆ, ಸಂವಿಧಾನದ 144ನೇ ಕಲಂ ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿರುವುದರಿಂದ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿದೆ ಎಂದರು.

ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಲಯಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣ ಬದಲಾಗಬೇಕು. ದೋಷಾರೋಪ ಪಟ್ಟಿ ಸಲ್ಲಿಸಿದ ಆರು ತಿಂಗಳೊಳಗೆ ಶಿಕ್ಷೆ ಆಗಬೇಕು. ಮೊದಲ ಹಂತದಲ್ಲೇ ಎಂಟು ಹತ್ತು ವರ್ಷ ಕಳೆದರೆ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ ಎಂದು ಹೆಗ್ಡೆ ಹೇಳಿದರು.

ಭ್ರಷ್ಟಾಚಾರ ವಿಷಯದಲ್ಲಿ ರಾಜಕಾರಣಿ ಮತ್ತು ಅಧಿಕಾರಿಗಳು ಸಯಾಮಿ ಶಿಶುಗಳು. ಇವೆರಡನ್ನು ಬೇರ್ಪಡಿಸುವುದು ಕಷ್ಟ. ಈ ಹಾವಳಿಯನ್ನು ಹತ್ತಿಕ್ಕಲು ಲೋಕಾಯುಕ್ತ ಅಸಹಾಯಕವಾಗಿಲ್ಲ. ಕರ್ನಾಟಕದ ಭೂಹಗರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಮಗ ಕಟ್ಟಾ ಜಗದೀಶ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಸಂತೋಷ ಹೆಗ್ಡೆ ವಿವರಿಸಿದರು.

English summary
Karnataka Lokayukta Justice Santosh Hegde said that the institution of Lokayukta should be brought under the ambit of the Constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X