ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ದರ ಏರಿಕೆಗೆ ಯಡ್ಡಿ ತವರಲ್ಲಿ ಪ್ರತಿಭಟನೆ

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

Shimoga youth congress protests against power tariff hike
ಶಿವಮೊಗ್ಗ, ಡಿ. 10 : ರಾಜ್ಯ ಸರ್ಕಾರ ಏಕಾಏಕೀ ವಿದ್ಯುತ್‌ ದರ ಹೆಚ್ಚಿಸಿರುವುದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ (ಉತ್ತರಬ್ಲಾಕ್) ವತಿಯಿಂದ ನಗರದ ಗೋಪಿವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ವಿದ್ಯುತ್‌ ದರವನ್ನು ಹೆಚ್ಚಿಸಿ ರಾಜ್ಯದ ಶ್ರೀಸಾಮಾನ್ಯರಿಗೆ ಮತ್ತೊಮ್ಮೆ ಹೊರೆಹೊರಿಸಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನತೆಗೆ ದಿನದ 24 ಗಂಟೆಯೂ ವಿದ್ಯುತ್ ನೀಡುತ್ತೇವೆಂದು ಹೇಳಿದ್ದರು. ಆದರೆ, ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಸರಿಯಾಗಿ ವಿದ್ಯುತ್‌ನ್ನು ಪೂರೈಸದೆ ರಾಜ್ಯದ ಜನಸಾಮಾನ್ಯರಿಗೆ ಸುಳ್ಳು ಹೇಳುತ್ತಾ, ಸಮರ್ಪಕವಾಗಿ ವಿದ್ಯುತ್ ನೀಡುವಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಸಚಿವ ಸಂಪುಟದ ಸಹೋದ್ಯೋಗಿಗಳು ಭ್ರಷ್ಟಾಚಾರದಲ್ಲಿ ಕಾರ್ಯನಿಮಿತ್ತರಾಗಿ ರಾಜ್ಯವನ್ನು ಲೂಟಿ ಮಾಡಹೊರಟಿದ್ದರೆ, ಈಗ ಏಕಾಏಕೀ ವಿದ್ಯುತ್‌ ದರವನ್ನು ಹೆಚ್ಚಿಸಿ ರಾಜ್ಯದ ಕೆಳ-ಮಧ್ಯಮವರ್ಗದವರಿಗೂ, ಸಣ್ಣಪುಟ್ಟ ಕೈಗಾರಿಕೆಗಳಿಗೂ ಹಾಗೂ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ದರ ಏರಿಸಿರುವುದು ನಿಜಕ್ಕೂ ಖಂಡನೀಯವಾಗಿದೆ ಎಂದರು.

ಕೂಡಲೇ ಜನಸಾಮಾನ್ಯರಿಗೆ ಹೊರೆಯಾಗದಂತೆ ಮೊದಲಿನ ದರವನ್ನೇ ನಿಗದಿಪಡಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರಲ್ಲದೇ, ಹಿಂದಿನಂತೆ ದರ ನಿಗದಿಮಾಡದಿದ್ದಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಯೂತ್ ಕಾಂಗ್ರೆಸ್ ಉತ್ತರ ಬ್ಲಾಕ್‌ನ ಅಧ್ಯಕ್ಷ ಕೆ.ರಂಗನಾಥ್, ಟಿ.ವಿ.ರಂಜಿತ್, ಆರ್.ಕಿರಣ್, ಗಿರೀಶ್, ವಿನಯ್, ಶ್ರೀಧರ್, ಭರತ್, ಪ್ರವೀಣ್, ಧರ್ಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

English summary
Shimoga district unit of Congress protests against hike in power tariff. Shivamogga district news by KR Somanath, citizen journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X