ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದರ್ ತೆರೆಸಾ ಸ್ಮರಣಾರ್ಥ ರೂ.5 ನಾಣ್ಯ ಬಿಡುಗಡೆ

By Mahesh
|
Google Oneindia Kannada News

MOther Teresa
ಮುಂಬೈ, ಡಿ.9: ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್ ತೆರೆಸಾರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ರು..5ರ ನಾಣ್ಯ ಬಿಡುಗಡೆ ಮಾಡಲು ನಿರ್ಧರಿಸಿದೆ.

23 ಮಿ.ಮಿ ವ್ಯಾಸದ ಮದರ್ ತೆರೆಸಾರ ಮುಖ ಹೊತ್ತ ದುಂಡನೆಯ ರು..5ರ ನಾಣ್ಯವನ್ನು ಶೀಘ್ರದಲ್ಲಿಯೇ ಚಲಾವಣೆಗೆ ತರಲಾಗುವುದು. ಪ್ರಸ್ತುತವಿರುವ ರು.5ರ ನಾಣ್ಯದ ಚಲಾವಣೆ ಕೂಡಾ ಮುಂದುವರೆಯಲಿದೆ ಈ ಬಗ್ಗೆ ಅಧಿಕೃತ ಪ್ರಕಟಣೆ ಸದ್ಯದಲ್ಲೇ ಹೊರ ಬೀಳಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಮಿಷನರೀಸ್ ಆಫ್ ಚಾರಿಟಿಸ್ ನ ಸಂಸ್ಥಾಪಕಿಯಾಗಿದ್ದ ಮದರ್ ತೆರೆಸಾ ಜನಿಸಿದ್ದು ಆಗಸ್ಟ್ 26, 1910ರಂದು ರಿಪಬ್ಲಿಕ್ ಆಫ್ ಮೆಸಿಡೋನಿಯಾದಲ್ಲಿ. ತೆರೆಸಾ ಅವರ ಮೂಲ ಹೆಸರು ಎಗ್ನೇಸ್ ಗೊನ್ ಕ್ಸಾ ಬೊಜಕ್ಸಿಯೋ(Agnes Gonxha Bojaxhiu). ಭಾರತಕ್ಕೆ ಆಗಮಿಸಿ ಅನಾಥ, ಅನಾರೋಗ್ಯ ಪೀಡಿತರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.

English summary
In order to celebrate birth centenary of Nobel laureate Mother Teresa, Reserve Bank of India (RBI) has decided to release new Rs.5 commemorate coins soon. The coins commemorating the founder of the Missionaries of Charity would be circular in shape with diameter of 23 millimeter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X