ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಚಿವ ರಾಜಾ ನಿವಾಸದ ಮೇಲೆ ಸಿಬಿಐ ದಾಳಿ

By Mrutyunjaya Kalmat
|
Google Oneindia Kannada News

A raja
ನವದೆಹಲಿ, ಡಿ. 8 : 2 ಜಿ ಸ್ಪೆಕ್ಟ್ರಂ ಹಗರಣದ ರೂವಾರಿ ಕೇಂದ್ರದ ಮಾಜಿ ಟೆಲಿಕಾಂ ಸಚಿವ ಎ ರಾಜಾ ಅವರ ದಿಲ್ಲಿ ಮತ್ತು ಚೆನ್ನೈ ನಿವಾಸ ಹಾಗೂ ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ದಿಢೀರ್ ದಾಳಿ ಮಾಡಿದೆ.

ನವದೆಹಲಿಯಲ್ಲಿರುವ ರಾಜಾ ಅವರ ನಿವಾಸದ ಮೇಲೆ ಸಿಬಿಐ ತಂಡ ದಾಳಿ ನಡೆಸಿದ್ದು ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ರಾಜಾ ಅವರ ನಿಕಟವರ್ತಿಗಳ ಮನೆ, ಕಚೇರಿಗಳ ಮೇಲೂ ದಾಳಿ ನಡೆಸಲಾಗಿದ್ದು, ಕಡತಗಳ ಪರಿಶೀಲನೆ ಶುರುವಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಸಿಬಿಐ ದಾಳಿ ಆರಂಭಿಸಿದ್ದು, ರಾಜಾ ಅವರ ಆಪ್ತರು ಎನ್ನಲಾದ ಟೆಲಿಕಾಂ ಇಲಾಖೆಯ ಮಾಜಿ ಕಾರ್ಯದರ್ಶಿ ಬೆಹರಿಯಾ ಮತ್ತು ಇನ್ನೊಬ್ಬ ಆಪ್ತ ಚೆಂಡೂಲಿಯಾ ಅವರ ನಿವಾಸ, ಕಚೇರಿಗಳ ಮೇಲೆ ದಿಡೀರ್ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

2ಜಿ ಸ್ಪಕ್ಟ್ರಂ ಹಗರಣ ಹೊರಬಂದ ನಂತರ ಪ್ರತಿಪಕ್ಷಗಳಿಂದ ಬಂದ ಒತ್ತಡಕ್ಕೆ ಮಣಿದು ಎ ರಾಜಾ ಅವರು ಟೆಲಿಕಾಂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜಾ ಅವರ ರಾಜೀನಾಮೆ ಪಡೆದ ಪ್ರತಿಪಕ್ಷಗಳು ಜಂಟಿ ಸಂಸದೀಯ ತನಿಖೆಗೆ(ಜೆಪಿಸಿ) ಒತ್ತಾಯಿಸತೊಡಗಿವೆ. ಇದರ ಮಧ್ಯೆದಲ್ಲಿಯೇ ಇಂದು ರಾಜಾ ಹಾಗೂ ಅವರ ನಿಕಟವರ್ತಿಗಳ ಮೇಲೆ ಸಿಬಿಐ ದಾಳಿ ನಡೆದಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

English summary
Following the allegations of corruption in 2G spectrum, Central Bureau of Investigation (CBI) has started raids on former Union Telecom Minister A Raja and his aides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X