ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ದರ ನಿಯಂತ್ರಣ : ವಿಜಯ್ ಮಲ್ಯ ಟೀಕೆ

By Mrutyunjaya Kalmat
|
Google Oneindia Kannada News

Vijaya Mallya criticizes Airfare regulations
ನವದೆಹಲಿ, ಡಿ. 7 : ಕೊನೆಕ್ಷಣದಲ್ಲಿ ಖರೀದಿಸುವ ಟಿಕೆಟ್ ಗಳಿಗೆ ವಿಮಾನಯಾನ ಸಂಸ್ಥೆ ವಿಧಿಸುವ ದುಬಾರಿ ಪ್ರಯಾಣ ದರ ತಗ್ಗಿಸುವ ಸರಕಾರದ ಪ್ರಯತ್ನಗಳನ್ನು ಕಿಂಗ್ ಫಿಷರ್ ಏರ್ ಲೈನ್ಸ್ ನ ವಿಜಯ್ ಮಲ್ಯ ಟೀಕಿಸಿದ್ದಾರೆ.

ವಿಮಾನ ಪ್ರಯಾಣ ದರಗಳನ್ನು ಮಾರುಕಟ್ಟೆಯೇ ನಿಯಂತ್ರಿಸಬೇಕೇ ಹೊರತು ವಿಮಾನಯಾನ ಇಲಾಖೆ ಅಲ್ಲ. ಕನಿಷ್ಠ ಇಲ್ಲವೇ ಗರಿಷ್ಠ ದರಗಳ ಮೇಲೆ ನಿಯಂತ್ರಣಾ ಸಂಸ್ಥೆಗಳು ಮಿತಿ ವಿಧಿಸಬಾರದು. ಇಂತಹ ಪ್ರಯಾಣ ದರ ವ್ಯವಸ್ಥೆಯು ಪೂರೈಕೆ ಮತ್ತು ಬೇಡಿಕೆಯಿಂದ ನಿರ್ಧಾರಿತವಾಗಬೇಕು ಎಂದು ವಿಜಯ್ ಮಲ್ಯ ಅಬಿಪ್ರಾಯಪಟ್ಟಿದ್ದಾರೆ.

ಇಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು ಶೋಷಣೆ ಮಾಡುತ್ತಿಲ್ಲ. ಮಾರುಕಟ್ಟೆಯಲ್ಲಿ ತಮ್ಮ ಪಾಲು ಹೆಚ್ಚಿಸಿಕೊಳ್ಳಲು ಹೋರಾಟ ನಡೆಸುತ್ತಿವೆ. ಹೀಗಾಗಿ ಬೇಡಿಕೆ ಮತ್ತು ಪೂರೈಕೆ ಗೌರವಿಸಬೇಕು ಎಂದು ಮಲ್ಯ ಹೇಳಿದರು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ದುಬಾರಿ ಪ್ರಯಾಣ ದರ ವಿಧಿಸಿದ್ದರಿಂದ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿ ದರ ಪರಿಷ್ಕರಣೆ ಮಾಡಿತ್ತು.

Readers can buy airline ticket at an attractive from Oneindia!

English summary
Kingfisher Airlines chairman and Rajya Sabha MP Vijay Mallya on Monday once again hit out at the regulatory bodies for trying to ‘pressurize’ the airlines to slash ticket prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X