ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ದರ ಏರಿಸಿದ ರಾಜ್ಯ ಸರಕಾರ

By Mrutyunjaya Kalmat
|
Google Oneindia Kannada News

ಬೆಂಗಳೂರು, ಡಿ. 7 : ರಾಜ್ಯ ಸರಕಾರ ವಿದ್ಯುತ್ ದರ ಏರಿಸುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಮತ್ತೆ ಬರೆ ಎಳೆದಿದೆ. ಪರಿಷ್ಕೃತ ನೂತನ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದ್ದು, ಸರಾಸರಿ ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ ಮಾಡಲಾಗಿದೆ.

ವಿದ್ಯುತ್ ಉತ್ಪಾದನೆ ಹಾಗೂ ವಿತರಣಾ ವೆಚ್ಚವನ್ನು ಸರಿದೂಗಿಸಿ ಕಂಪನಿಗಳ ನಷ್ಟವನ್ನು ಕಡಿಮೆ ಮಾಡಲು ಸರಾಸರಿ 75 ಪೈಸೆ ಯೂನಿಟ್ ಗೆ ದರವನ್ನು ಏಕರೂಪ ರೀತಿಯಲ್ಲಿ ಹೆಚ್ಚಳ ಮಾಡಬೇಕೆಂದು ಎಲ್ಲ ಕಂಪನಿಗಳ ಕೆಇಆರ್ ಸಿಗೆ ದುಂಬಾಲು ಬಿದ್ದಿದ್ದವು. ಈ ಸಂಬಂಧ ಸಾರ್ವಜನಿಕರ ಅಹವಾಲು ಪರಿಶೀಲಿಸಿದ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರವನ್ನು ಹೆಚ್ಚಳ ಮಾಡಿದೆ.

ಆದರೆ, ಏಕರೂಪ ದರ ಹೆಚ್ಚಳವನ್ನು ತಿರಸ್ಕರಿಸಿ ಬೇರೆ ಬೇರೆ ಗ್ರಾಹಕರಿಗೆ ಬೇರೆ ಬೇರೆ ರೀತಿಯ ದರಗಳನ್ನು ನಿಗದಿ ಮಾಡಿದೆ ಎಂದು ಮಂಡಳಿಯ ಅಧ್ಯಕ್ಷ ಎಂ ಆರ್ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

ಹೆಸ್ಕಾಂ-28.64 ಪೈಸೆ, ಮೆಸ್ಕಾಂ-26.63 ಪೈಸೆ, ಚೆಸ್ಕಾಂ-30.75 ಪೈಸೆ ದರವನ್ನು ನಿಗದಿ ಮಾಡಲಾಗಿದೆ ಮತ್ತು ಕಾರ್ಪೋರೇಟ್ ವ್ಯಾಪ್ತಿಯ ಪ್ರದೇಶಗಳಲ್ಲಿ 5 ಪೈಸೆಯಿಂದ 60 ಪೈಸೆವರೆಗೆ ಯೂನಿಟ್ ದರ ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ 1 ರಿಂದ 10 ಪೈಸೆ ಏರಿಕೆ, ಜೊತೆಗೆ ಗೃಹ ಬಳಕೆ ವಿದ್ಯುತ್ ಗೆ 10 ರಿಂದ 15 ಪೈಸೆ ಏರಿಕೆ ಮಾಡಲಾಗಿದೆ.

ನಗರ ಪ್ರದೇಶದ ವಾಣಿಜ್ಯ ಬಳಕೆಗೆ 30 ರಿಂದ 45 ಪೈಸೆ, ಪಟ್ಟಣ ಪ್ರದೇಶದಲ್ಲಿ 25 ರಿಂದ 40 ಹಾಗೂ ಗ್ರಾಮೀಣ ಪ್ರದೇಶದಲ್ಲಿ 30 ರಿಂದ 35 ಪೈಸೆ ಏರಿಕೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಂಜೆ 6 ರಿಂದ ಬೆಳಗಿನ 6 ಗಂಟೆ ವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುವುದು ಎಂದು ಶ್ರೀನಿವಾಸಮೂರ್ತಿ ವಿವರಿಸಿದರು.

ಸೌರಶಕ್ತಿಯನ್ನು ಪ್ರೋತ್ಸಾಹಿಸಲು ಜನಸಾಮಾನ್ಯರು ಬಳಕೆ ಮಾಡುವ ವಿದ್ಯುತ್ ಬಿಲ್ ನಲ್ಲಿ 50 ರುಪಾಯಿ ವಿನಾಯಿತಿ ನೀಡುವುದನ್ನು ಮುಂದುವರೆಸಲಾಗಿದೆ. ಆದರೆ, ದರ ಏರಿಕೆಯಿಂದ ಭಾಗ್ಯಜ್ಯೋತಿ, ಕುಟೀರಜ್ಯೋತಿ ಹಾಗೂ 10 ಎಚ್ ಪಿ ಪಂಪ್ ಸೆಟ್ ಗಳನ್ನು ಹೊರಗಿಡಲಾಗಿದೆ. ದರ ಏರಿಕೆ ಇವುಗಳಿಗೆ ಅನ್ವಯವಾಗುವುದಿಲ್ಲ. ಲೋಡ್ ಶೆಡ್ಡಿಂಗ್ ಮಾಡುವಾಗ ಸಾರ್ವಜನಿಕ ಪ್ರಕಟಣೆ ನೀಡಬೇಕು ಹಾಗೂ ಹೆಚ್ಚುವರಿ ವಿದ್ಯುತ್ ಬಿಲ್ ಖರೀದಿ ಮಾಡುವ ಸಂದರ್ಭದಲ್ಲಿ ಮಂಡಳಿ ಗಮನಕ್ಕೆ ತರಲಾಗುವುದು ಎಂದು ಮೂರ್ತಿ ಹೇಳಿದರು.

English summary
Hardly a day after the announcement of Panchayat polls, the electricity supply companies have increased power tariffs with immediate effect, which could be a great shock to the common man and rural population. Karnataka Electricity Regulatory Commission (KERC) issued an official notification in this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X