ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ನಲ್ಲಿ ವಿಕಿಲೀಕ್ಸ್ ಜನಕ ಅಸ್ಸೇಂಜ್ ಬಂಧನ

By Prasad
|
Google Oneindia Kannada News

Wikileaks founder Julian Assange
ಲಂಡನ್, ಡಿ. 7 : ಭ್ರಷ್ಟಾಚಾರವನ್ನು ಬಯಲು ಮಾಡುವ ವೆಬ್ ತಾಣ ವಿಕಿಲೀಕ್ಸ್ ನ ಜನಕ ಜೂಲಿಯನ್ ಅಸ್ಸೇಂಜ್ ಅವರನ್ನು, ಸ್ವೀಡನ್ನಿನಿಂದ ಬಂದ ಬಂಧನದ ವಾರೆಂಟ್ ಮೇರೆಗೆ, ಬ್ರಿಟಿಷ್ ಪೊಲೀಸರು ಮಂಗಳವಾರ, ಡಿಸೆಂಬರ್ 7ರಂದು ಬಂಧಿಸಿದ್ದಾರೆ.

ಸ್ವೀಡನ್ನಿನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಡಿ.6ರಂದು ಸ್ಕಾಟ್ ಲ್ಯಾಂಡ್ ಪೊಲೀಸರಿಗೆ ಅಸ್ಸೇಂಜ್ ಅವರನ್ನು ಬಂಧಿಸಲು ಸ್ವೀಡನ್ ನಿಂದ ವಾರೆಂಟ್ ಬಂದಿತ್ತು. ಜೂಲಿಯನ್ ಅಸ್ಸೇಂಜ್ ಮೇಲೆ ಅತ್ಯಾಚಾರ ಮಾಡಿದ, ಲೈಂಗಿಕ ದೌರ್ಜನ್ಯ ನಡೆಸಿದ ಮತ್ತು ಅಕ್ರಮವಾಗಿ ಬಲಪ್ರಯೋಗ ಮಾಡಿದ ಆರೋಪಗಳಿವೆ.

ಈ ಬಂಧನದ ಹಿನ್ನೆಲೆಯಲ್ಲಿ ವಿಕಿಲೀಕ್ಸ್ ವೆಬ್ ಸೈಟ್ ನಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ರಹಸ್ಯ ದಾಖಲೆಗಳ ಪ್ರಕಟಣೆಯನ್ನು ನಿಲ್ಲಿಸಲಾಗಿದೆ. ಆದರೆ, ತಮಗೆ ದೊರೆತಿರುವ ವಿಕಿಲೀಕ್ಸ್ ದಾಖಲೆಗಳನ್ನು ಪ್ರಕಟಿಸುವುದನ್ನು ದಿ ಗಾರ್ಡಿಯನ್ ಮತ್ತು ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗಳು ಮುಂದುವರಿಸಿವೆ.

ಕಳೆದ ನವೆಂಬರ್ ತಿಂಗಳಲ್ಲಿಯೇ ಅಸ್ಸೇಂಜ್ ಅವರನ್ನು ಬಂಧಿಸಲು ವಾರೆಂಟ್ ನೀಡಲಾಗಿತ್ತು. ನಂತರ, ಸ್ವೀಡನ್ನಿನ ಸ್ಟಾಕ್ ಹೋಮ್ ನ್ಯಾಯಾಲಯ ಅಸ್ಸೇಂಜ್ ಅವರನ್ನು ಬಂಧಿಸಲು ಎರಡನೇ ವಾರೆಂಟ್ ನೀಡಿತ್ತು. ಅದು ಯುಕೆ ಪೊಲೀಸರಿಗೆ ತಲುಪಿದ ನಂತರ ಭ್ರಷ್ಟಾಚಾರ ವಿರೋಧಿ ಚಳವಳಿಗಾರನನ್ನು ಬಂಧಿಸಿದೆ. ಇಂಟರ್ ಪೋಲ್ ಕೂಡ ಜೂಲಿಯನ್ ಅಸ್ಸೇಂಜ್ ಅವರನ್ನು ವಾಂಟೆಡ್ ಪಟ್ಟಿಗೆ ಸೇರಿಸಿದ್ದು, 'ರೆಡ್ ನೋಟೀಸ್' ಜಾರಿ ಮಾಡಿದೆ.

English summary
Scotland Yard police have arrested Wikileaks founder Julian Assange on Dec 7, following arrest warrant issued by Sweden court. After that Whistle-blowing website WikLeaks has stopped publishing cables.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X