ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಹತ್ತು ಪ್ರಮುಖ ಬ್ರಾಂಡ್ ಗಳಲ್ಲಿ ಟಾಟಾ ಪ್ರಥಮ

By * ಕೋವರ್ ಕೊಲ್ಲಿ ಇಂದ್ರೇಶ್
|
Google Oneindia Kannada News

Ratan Tata
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪೆನಿಗಳ ಬ್ರಾಂಡ್ ಗಳು ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಬ್ರಾಂಡ್ ಗಳು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಗಳಿಸಿಕೊಂಡಿರುವ ಕಂಪೆನಿಗಳ ಬೌದ್ಧಿಕ ಆಸ್ತಿ. ಈ ಬ್ರಾಂಡ್ ಗೆ ಕೋಟಿಗಟ್ಟಲೆ ಬೆಲೆ. ಇತ್ತೀಚಿನ ಎಕನಾಮಿಕ್ ಟೈಮ್ಸ್ ಸಮೀಕ್ಷೆ ಪ್ರಕಾರ ದೇಶದ ಅತೀ ದೊಡ್ಡ ಸಮೂಹ ಟಾಟಾ ರಿಲಾಯನ್ಸನ್ನು ಹಿಂದಿಕ್ಕಿ ದೇಶದ ಅತೀ ಹೆಚ್ಚು ಮೌಲ್ಯಯುತ ಬ್ರಾಂಡ್ ಆಗಿ ಹೊರಹೊಮ್ಮಿದೆ. ಟಾಟಾ ಜಗ್ವಾರ್ -ಲ್ಯಾಂಡ್ ರೋವರ್ ಬ್ರಾಂಡ್ ಮೌಲ್ಯ 8.45 ಬಿಲಿಯನ್ ಡಾಲರ್ ಗಳಿಗೇರಿದ್ದು ಇದು 2009ರಲ್ಲಿ 3.1 ಬಿಲಿಯನ್ ಡಾಲರ್ ಇತ್ತು. ಟಾಟಾದ ಬ್ರಾಂಡ್ ಮೌಲ್ಯ ಶೇ.172ರಷ್ಟು ಏರಿಕೆ ದಾಖಲಿಸಿದ್ದು, ದೇಶದ ಪ್ರಮುಖ 50 ಕಂಪೆನಿಗಳ ಬ್ರಾಂಡ್ ಮೌಲ್ಯ ಶೇ.15ರಷ್ಟು ಹೆಚ್ಚಾಗಿದೆ.

2009ರಲ್ಲಿ ಮೊದಲ ಸ್ಥಾನದಲ್ಲಿದ್ದ ರಿಲಯನ್ಸ್ ನ ಬ್ರಾಂಡ್ ಮೌಲ್ಯ ಶೇ.10ರಷ್ಟು ಕುಸಿದಿದೆ. ಈಗ 7.4 ಬಿಲಿಯನ್ ಡಾಲರ್ ಗಳಿಗೆ ಕುಸಿದಿದೆ. ಪ್ರಮುಖ 50ಕಂಪೆನಿಗಳಲ್ಲಿ 16 ಬ್ರಾಂಡ್ ಗಳ ಮೌಲ್ಯದಲ್ಲಿ ಏರಿಕೆ ದಾಖಲಾಗಿದ್ದರೆ 19 ಕಂಪೆನಿಗಳು ಕುಸಿತ ಕಂಡಿವೆ.

ದೇಶದ ಅತೀ ದೊಡ್ಡ ಬ್ಯಾಂಕ್ ಅಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2009ರಲ್ಲಿ ದೇಶದ ಎರಡನೇ ಅತೀ ದೊಡ್ಡ ಬ್ರಾಂಡ್ ಆಗಿತ್ತು. ಈಗ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಇದರ ಬ್ರಾಂಡ್ ಮೌಲ್ಯ 5.8 ಬಿಲಿಯನ್ ಡಾಲರ್ ಗಳಾಗಿದ್ದು ಕಳೆದ ವರ್ಷ 6.4 ಬಿಲಿಯನ್ ಡಾಲರ್ ಗಳಾಗಿತ್ತು.

ದೇಶದ ಅತೀ ದೊಡ್ಡ ಸಾಫ್ಟ್ ವೇರ್ ಕಂಪೆನಿ ಟಾಟಾ ಕನ್ಸಲ್ಟನ್ಸಿ ಸರ್ವೀಸ್ ಕಳೆದ ವರ್ಷದಿಂದ ತನ್ನ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ. ಇದರ ಬ್ರಾಂಡ್ ಮೌಲ್ಯ 4.17 ಬಿಲಿಯನ್ ಡಾಲರ್ ಗಳಿಂದ 4.36 ಬಿಲಿಯನ್ ಡಾಲರ್ ಗೆ ತಲುಪಿದೆ.

ದೇಶದ ಅತೀ ದೊಡ್ಡ ತೈಲ ಮಾರಾಟ ಹಾಗೂ ಸಂಸ್ಕರಣಾ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಳೆದ ವರ್ಷ 3ನೇ ಸ್ಥಾನದಲ್ಲಿತ್ತು. ಈ ವರ್ಷ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದರ ಬ್ರಾಂಡ್ ಮೌಲ್ಯ 4.8 ಬಿಲಿಯನ್ ಡಾಲರ್ ಗಳಿಂದ 4.3 ಬಿಲಿಯನ್ ಡಾಲರ್ ಗಳಿಗೆ ಕುಸಿದಿದೆ.

ದೇಶದ ಅತೀ ದೊಡ್ಡ ಟೆಲಿಕಾಂ ಕಂಪೆನಿ ಭಾರ್ತಿ ಏರ್ ಟೆಲ್ ಈ ವರ್ಷ 6ನೇ ಸ್ಥಾನಕ್ಕೆ ಏರಿದೆ. ಇದರ ಬ್ರಾಂಡ್ ಮೌಲ್ಯ ಕಳೆದ ವರ್ಷ 2.51 ಬಿಲಿಯನ್ ಡಾಲರ್ ಇದ್ದಿದ್ದು ಈಗ 3.15 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ.

ಸರಕಾರೀ ಸ್ವಾಮ್ಯದ ತೈಲ ಕಂಪೆನಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ 7ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದು ಇದರ ಮೌಲ್ಯ 2009ರಲ್ಲಿ 2.62 ಬಿಲಿಯನ್ ಡಾಲರ್ ಆಗಿದ್ದು ಈಗ 2.94 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ.

ಟಾಟಾ ಕುಟುಂಬದ ಮೂರನೇ ಕಂಪೆನಿಯಾಗಿರುವ ಟಾಟಾ ಸ್ಟೀಲ್ ತನ್ನ ಬ್ರಾಂಡ್ ಮೌಲ್ಯದಲ್ಲಿ ತೀವ್ರ ಏರಿಕೆ ದಾಖಲಿಸಿದ್ದು 2009ರಲ್ಲಿ 12ನೇ ಸ್ಥಾನದಲ್ಲಿದ್ದುದು ಈಗ 8ನೇ ಸ್ಥಾನಕ್ಕೆ ಏರಿ ಕುಳಿತಿದೆ. ಇದರ ಮೌಲ್ಯ 2.26 ಬಿಲಿಯನ್ ಡಾಲರ್ ಗಳಿಂದ 2.94 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ.

10 ಬ್ರಾಂಡ್ ಗಳಲ್ಲಿ ದೇಶದ ಮೂರನೇ ಅತೀ ದೊಡ್ಡ ಸಾಪ್ಟ್ ವೇರ್ ಕಂಪೆನಿ ವಿಪ್ರೋ 9ನೇ ಸ್ಥಾನದಲ್ಲಿದ್ದು ಇದರ ಮೌಲ್ಯ 2.37 ಬಿಲಿಯನ್ ಡಾಲರ್ ಗಳಿಂದ 2.49 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ.

ಸರಕಾರೀ ಸ್ವಾಮ್ಯದ ತೈಲ ಕಂಪೆನಿ ಹಿಂದುಸ್ಥಾನ್ ಪೆಟ್ರೋಲಿಯಂ ಬ್ರಾಂಡ್ ಮೌಲ್ಯದಲ್ಲಿ ಹತ್ತನೇ ಸ್ಥಾನದಲ್ಲಿದ್ದು, ಇದರ ಬ್ರಾಂಡ್ ಮೌಲ್ಯ 2.27 ಬಿಲಿಯನ್ ಡಾಲರ್ ಗಳಿಂದ 2.23 ಬಿಲಿಯನ್ ಡಾಲರ್ ಗಳಿಗೆ ಕುಸಿದಿದೆ.

English summary
Brand value of Tata group of companies is higher than any other company in india. Here is comparative study of companies who have increased or decreased brand values.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X