ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧನದ ಸುದ್ದಿ ನಡುವೆಯೇ ಹೊಸ ವಿಕಿಲೀಕ್ಸ್!

By Prasad
|
Google Oneindia Kannada News

Wikileaks founder Julian Assange
ವಾಷಿಂಗ್ಟನ್, ಡಿ. 07 : ಜೀವ ಬೆದರಿಕೆ ಮತ್ತು ಬಂಧಿತನಾಗುವ ಸುದ್ದಿ ಎದ್ದಿರುವ ಹಿನ್ನೆಲೆಯಲ್ಲಿಯೇ ಜಾಗತಿಕ ಭ್ರಷ್ಟಾಚಾರದ ಕೊಳಕನ್ನು ವಿಕಿಲೀಕ್ಸ್ ವೆಬ್ ಸೈಟ್ ಮುಖಾಂತರ ಬುಡಮೇಲು ಮಾಡುತ್ತಿರುವ ಜೂಲಿಯನ್ ಅಸ್ಸೇಂಜ್ ಹೊಸ ಹಗರಣಗಳನ್ನು ಬಯಲಿಗೆಳೆಯುವ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಯುಕೆಯಲ್ಲಿ ತಲೆಮರೆಸಿಕೊಂಡಿರುವ ಜೂಲಿಯನ್ ಅನ್ನು ಸ್ವೀಡನ್ ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಪೊಲೀಸ್ ಅಧಿಕಾರಿಗಳು ಬಂಧಿಸಲಿದ್ದಾರೆ ಎಂದು ಯುರೋಪ್ ನ ಮಾಧ್ಯಮಗಳು ವರದಿ ಮಾಡಿದ್ದವು. ಸ್ವೀಡನ್ ನಿಂದ ಬಂಧನದ ವಾರೆಂಟ್ ಬಂದಿರುವುದಾಗಿ ಸ್ಕಾಟ್ ಲ್ಯಾಂಡ್ ಪೊಲೀಸರು ಹೇಳಿದ್ದರು. ಸ್ಕಾಟ್ ಲ್ಯಾಂಡ್ ಪೊಲೀಸರೆದಿರುವ ಅಸ್ಸೇಂಜ್ ಅವರೇ ಶರಣಾಗತರಾಗಲಿದ್ದಾರೆ ಎಂಬ ಗಾಳಿಸುದ್ದಿಯೂ ಹಬ್ಬಿತ್ತು.

ಈ ನಡುವೆ, ಅಮೆರಿಕಾದ ಭದ್ರತೆಗೆ ಪ್ರಮುಖವೆನಿಸುವ ಜಾಗತಿಕ ತಾಣಗಳನ್ನು ಗುರುತಿಸುವಂತೆ ಅಮೆರಿಕಾದ ಅಧಿಕಾರಿಗಳಿಗೆ ಕೇಳಿ ಹೊಸ ಕಡತವನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ. ಪ್ರಮುಖ ನಗರಗಳು, ಬಂದರುಗಳು, ಸಂಪರ್ಕ, ಖನಿಜ ಮೂಲಸಂಪತ್ತು ಮುಂತಾದವುಗಳು ಇರುವ ತಾಣಗಳ ಪಟ್ಟಿಯನ್ನು ವಿಕಿಲೀಕ್ಸ್ ನೀಡಿದೆ.

English summary
Amid surrender rumour whistle blower website wikileaks founder Julian Assange, who is facing arrest warrant in sweden for rape, has released new cables.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X