ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್ ಸೈಟಿನಲ್ಲಿ ವೇದಾಂತ ಪಾಠ ಬೇಕೇನು

By Shami
|
Google Oneindia Kannada News

Adi Shankaracharya spiritual discource online
ಬೆಂಗಳೂರು, ಡಿ. 7 : ಇವತ್ತು ಎಲ್ಲಿ ನೋಡಿದರೂ ಹಿಂಸೆ, ಅಶಾಂತಿ, ಅತೃಪ್ತಿ, ದ್ವೇಷ ಮತ್ತು ಭಯದ ವಾತಾವರಣ. ಭಯ ಹೊರಗೂ ಇದೆ. ಒಳಗೂ ಇದೆ. ಇದನ್ನು ಗೆಲ್ಲುವ ಮಾರ್ಗೋಪಾಯಗಳನ್ನು ವ್ಯಕ್ತಿ ತಾನೇ ಕಂಡುಕೊಳ್ಳಬೇಕಾದ ಆವಶ್ಯಕತೆ ಎಂದಿಗಿಂತ ಇಂದು ಹೆಚ್ಚೇ ಕಂಡುಬಂದಿದೆ. ನೆಮ್ಮದಿ ಪಡೆಯಲು ನಮಗಿರುವ ಸುಲಭವಾದ ಒಂದು ಪರಿಹಾರವೆಂದರೆ "ವೇದಾಂತ ವಿಚಾರ ಚಿಂತನೆ ".

ವಿದ್ಯೆಯನ್ನು, ಜ್ಞಾನವನ್ನು, ಶಾಂತಿ ಸಮಾಧಾನಗಳನ್ನು ಗುರುಕುಲ ಕ್ರಮದಿಂದ ಅಧ್ಯಯನ ಮಾಡುವುದಕ್ಕೆ ಇವತ್ತು ಯಾರಿಗೂ ಪುರುಸೊತ್ತಿಲ್ಲ. ಅಂಥ ವಾತಾವರಣವೂ ಇಲ್ಲ. ಇಂದಿನ ಯುಗ ಕಂಪ್ಯೂಟರ್ ಯುಗ. ಕಳ್ಳಕಾಕರ ಯುಗ. ದೊರೆಯೇ ಧೂರ್ತನಾಗುವ ಯುಗ. ವೈಜ್ಞಾನಿಕ ಯುಗ. ವೇಗದ ಯುಗ. ಆವೇಗದ ಯುಗ. ಉದ್ವೇಗದ ಯುಗ. ಪ್ರಮುಖವಾಗಿ ಈಗಿನ ಯುವಕ ಯುವತಿಯರು, ಮಧ್ಯವಯಸ್ಕರು ಮತ್ತು ಹಿರಿಯ ನಾಗರಿಕರು ಐಹಿಕ ಸುಖಕ್ಕೆ ಮತ್ತು ವಸ್ತು ಭೋಗಕ್ಕೆ ತುತ್ತಾಗಿ ಬಳಲಿದ್ದಾರೆ. ತಮ್ಮನ್ನು ಕಾಡುತ್ತಿರುವ ಕಾಯಿಲೆ ಯಾವುದು ಎನ್ನುವುದು ನರಳುತ್ತಿರುವ ವ್ಯಕ್ತಿಗೇ ತಿಳಿಯದಾಗಿದೆ.

ಇದನ್ನು ಗಮನದಲ್ಲಿ ಇಟ್ಟುಕೊಂಡು "ವೇದಾಂತ ಸತ್ಸಂಗ ಕೇಂದ್ರ"ದ ವತಿಯಿಂದ "ಶಂಕರಹೃದಯಂ" ಎಂಬ ಅಂತರ್ಜಾಲ ತಾಣವನ್ನು ತೆರೆಯಲಾಗುತ್ತಿದೆ. ವೇದಾಂತ ಪಾಠಗಳನ್ನು ಪ್ರಚುರ ಪಡಿಸುವುದು ಈ ವೆಬ್ ಸೈಟಿನ ಉದ್ದೇಶವಾಗಿರುತ್ತದೆ. ಬರುವ ಭಾನುವಾರ 12 ಡಿಸೆಂಬರ್ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಶಂಕರಪುರದ ಶೃಂಗೇರಿ ಶಂಕರಮಠದಲ್ಲಿ ಡಾ. ಎಸ್. ರಂಗನಾಥ್ ಅವರು ಈ ತಾಣಕ್ಕೆ ಚಾಲನೆ ನೀಡಲಿದ್ದಾರೆ. ಅಂತರ್ಜಾಲಕ್ಕೆ ಮಹಾಮಹೋಪಾಧ್ಯಾಯ ವಿದ್ವಾನ್ ಕೆ.ಜಿ.ಸುಬ್ರಾಯ ಶರ್ಮರು ಪ್ರಧಾನ ಆಚಾರ್ಯರಾಗಿರುತ್ತಾರೆ.

ಶೃಂಗೇರಿ ಮಹಾಸಂಸ್ಥಾನದ ಗೌರವ ಆಡಳಿತಾಧಿಕಾರಿ ವಿ.ಆರ್. ಗೌರೀಶಂಕರ್ ರವರು ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ. ಸಿ.ಏ.ಸಂಜೀವ ಮೂರ್ತಿಗಳು ಹಾಡಿರುವ, ಹೊಳೆನರಸೀಪುರದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ಕನ್ನಡದಲ್ಲಿ ರಚಿಸಿರುವ ಹಾಡುಗಳ "ಶ್ರೀ ಶಂಕರವಚನ ಗಾನ ರಸಾಯನ " ಎಂಬ ಸಿ.ಡಿ ಯನ್ನೂ ಲೋಕಾರ್ಪಣೆ ಮಾಡುವವರಿದ್ದಾರೆ.( ಸಿ.ಡಿ.ಬೆಲೆ ರೂ.80 ).
ವೆಬ್ ಸೈಟ್ ವಿಳಾಸ : http://www.satchidanandendra.org

ಶಂಕರ ಭಗವತ್ಪಾದರು ತೋರಿದ ಆದರ್ಶಗಳನ್ನು ಮನಸಾ ಮೆಚ್ಚುವವರು ಮತ್ತು ನೆಮ್ಮದಿ ಅರಸುತ್ತಿರುವವರು ಈ ತಾಣದ ಪ್ರಯೋಜನ ಪಡೆಯಬಹುದೆಂದು ವೇದಾಂತ ಸತ್ಸಂಗ ಕೇಂದ್ರದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಗಳಿಗೆ : 98860 51222 ದೂರವಾಣಿ ಸಂಖ್ಯೆಯನ್ನು ತಲುಪಿರಿ. ಇಮೇಲ್ : [email protected]

English summary
A website to disseminate Adi Shankaracharyas philosophy. Defeat the enemy outside and inside. Sri Shankaravacahna Gana Rasayana CD collection of vedic hymns by Sri Satchidanandendra Swamiji will be released on this occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X