ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕೊಲ್ಲಲು ಲಷ್ಕರ್ ಸಂಚು : ವಿಕಿಲೀಕ್ಸ್

By Mrutyunjaya Kalmat
|
Google Oneindia Kannada News

Lashkar planned to kill Narendra Modi Wikileaks
ನವದೆಹಲಿ, ಡಿ. 6 : ಪಾಕಿಸ್ತಾನದ ಲಷ್ಕರೆ ತಯ್ಬಾ ಭಯೋತ್ಪಾದಕ ಸಂಘಟನೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹತ್ಯೆ ನಡೆಸಲು ಸಂಚು ರೂಪಿಸಿತ್ತು ಎಂಬ ಅಂಶ ವಿಕಿಲೀಕ್ಸ್ ಮತ್ತೆ ಬಿಡುಗಡೆ ಮಾಡಿರುವ ಸ್ಫೋಟಕ ಮಾಹಿತಿಯಿಂದ ಬೆಳಕಿಗೆ ಬಂದಿದೆ.

ಎಲ್‌ಇಟಿಯ ನಾಯಕರಲ್ಲಿ ಒಬ್ಬನಾದ ಶಫೀಕ್ ಖಾಫಾ ಎಂಬಾತ ಮೋದಿ ಹತ್ಯೆಗೆ ಸಂಚು ರೂಪಿಸುತ್ತಿದ್ದ. ಇದರ ಜತೆ ದಕ್ಷಿಣ ಭಾರತದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಲು ಕೇರಳ ಮತ್ತು ತಮಿಳುನಾಡು ರಾಜ್ಯ ಗಳನ್ನು ನೆಲೆಯಾಗಿಸಲು ಎಲ್‌ಇಟಿ ಯೋಜನೆ ರೂಪಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದಲ್ಲಿ ಕೇಂದ್ರವೊಂದನ್ನು ಸ್ಥಾಪಿಸಿದ ಭಯೋತ್ಪಾದಕ ಸಂಸ್ಥೆ ನಂತರ ಈ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಿತ್ತು ಎಂದು ವಿಕಿಲೀಕ್ಸ್ ಬಿಡುಗಡೆ ಮಾಡಿರುವ 2009ರ ಜೂನ್ 19ರ ದಿನಾಂಕದ ದಾಖಲೆ ಬಹಿರಂಗ ಪಡಿಸಿದೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ನೇಪಾಳದಲ್ಲಿ ಭಯೋತ್ಪಾದಕ ಸಂಘಟನೆಯ ಕಾರ್ಯಚಟುವಟಿಕೆ ವಿಸ್ತರಿಸುವುದರ ಜತೆ ಕರ್ನಾಟಕ, ತಮಿಳು ನಾಡು ಮತ್ತು ಕೇರಳದಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡುವ ತಾಣಗಳ ಹುಡುಕಾಟದಲ್ಲಿದ್ದ ಖಾಫಾ, ದಕ್ಷಿಣ ಭಾರತದಲ್ಲಿ ದಾಳಿ ನಡೆಸಲು ತಾಣಗಳ ಆಯ್ಕೆಗೆ ಪ್ರಯತ್ನ ನಡೆಸಿದ್ದ ಎಂದು ಈ ಮಾಹಿತಿ ಬೆಳಕು ಚೆಲ್ಲಿದೆ.

English summary
The United States diplomatic cables released by whistle-blowing website WikiLeaks revealed that the terrorist group Lashkar-e-Taiba (LeT) had planned an attack on Gujarat Chief Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X