ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರುದ್ರಹೋಮ ಶಾಪ ವಿಮೋಚನೆಗಾಗಿಯೇ?

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Chamarajeshwara Temple Homam
ಚಾಮರಾಜನಗರ, ಡಿ.6: ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಾಲಯದಲ್ಲಿ ಭಾನುವಾರ ಮಹಾರುದ್ರ ಹೋಮವನ್ನು ನಡೆಸಲಾಗಿದ್ದು, ಮೇಲ್ನೋಟಕ್ಕೆ ಇದನ್ನು ಲೋಕ ಕಲ್ಯಾಣಕ್ಕೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಇದರ ಒಳಮರ್ಮವೇನು ಎಂಬುವುದು ರಹಸ್ಯವಾಗಿಯೇ ಉಳಿದಿದೆ.

ಮೊದಲಿನಿಂದಲೂ ಚಾಮರಾಜನಗರ ಶಾಪಗ್ರಸ್ಥ ಜಿಲ್ಲೆ ಎಂಬ ಮೂಢನಂಬಿಕೆಗೊಳಗಾಗಿದ್ದು, ಇಲ್ಲಿಗೆ ಭೇಟಿ ನೀಡಿದ ಸಚಿವರು, ಮುಖ್ಯಮಂತ್ರಿಗಳು ತಮ್ಮ ಪದವಿ ಕಳೆದುಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಶಾಪ ವಿಮೋಚನೆಗಾಗಿ ಮಹಾರುದ್ರಹೋಮ ಮಾಡಲಾಗಿದೆಯೇ ಎಂಬ ಸಂಶಯ ಸಾರ್ವಜನಿಕರನ್ನು ಕಾಡುತ್ತಿದೆ.

ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಹೋಮ ಹವನಾದಿಗಳು ನಡೆದಿದ್ದು, ನಂಜನಗೂಡಿನ ವಿಶ್ವೇಶ್ವರಜ್ಯೋತಿಷಿ ಮತ್ತು ಅವರ 11 ಮಂದಿ ಋತ್ವಿಜರು ಹಾಗೂ ಚಾಮರಾಜೇಶ್ವರ ದೇವಾಲಯದ 10 ಮಂದಿ ಅರ್ಚಕರು ಈ ಮಹಾರುದ್ರ ಹೋಮದಲ್ಲಿ ಪಾಲ್ಗೊಂಡು ಗಣಪತಿ ಪೂಜೆ, ನವಗ್ರಹ ಪೂಜೆ, ಗಣಪತಿ ಪೂರ್ವ ರುದ್ರಹೋಮ, ಈಶ್ವರಿ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿಕೊಟ್ಟರು.

ಚಾಮರಾಜೇಶ್ವರ ದೇವಾಲಯದಲ್ಲಿ ಮಹಾರುದ್ರ ಹೋಮ ನಡೆದು 30 ವರ್ಷಗಳಾಗಿತ್ತು ಎನ್ನಲಾಗಿದ್ದು, ಇದೀಗ ದಿಢೀರ್ ಹೋಮ ನಡೆಸಲು ಕಾರಣ ಏನಿರಬಹುದು ಎಂಬ ಪ್ರಶ್ನೆಗೆ ಇತ್ತೀಚೆಗೆ ದೇವಾಲಯದಲ್ಲಿ ಅರ್ಚಕರೊಬ್ಬರು ಸಾವನ್ನಪ್ಪಿದ್ದರು ಈ ಹಿನ್ನಲೆಯಲ್ಲಿ ನಡೆದಿದೆ ಎಂಬ ಮಾತು ಕೂಡ ಕೇಳಿ ಬಂದಿದೆ. ಆದರೆ ಸತ್ಯಾಂಶ ಚಾಮರಾಜೇಶ್ವರನೇ ಹೇಳಬೇಕು.

English summary
On Sunday (Dec.5) Maha Rudra Yagnam conducted by Nanjungud Visheshwar jyotishi and 11 Rithwiks. Chamarajeshwara Temple has not conducted any rituals of this kind in past 30 years. And it is said that Homam conducted to resolve the curse on Karnataka CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X