ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ವೆಬ್ ಸೈಟ್ ಇನ್ನೂ ಸರಿಹೋಗಿಲ್ಲ!

By Mahesh
|
Google Oneindia Kannada News

CBI fails to restore website
ನವದೆಹಲಿ, ಡಿ.5: 'ಪಾಕಿಸ್ತಾನಿ ಸೈಬರ್ ಆರ್ಮಿ' ಎಂಬ ಹ್ಯಾಕರ್ ಗಳಿಂದ ಹಾಳಗಿರುವ ಭಾರತದ ಪ್ರತಿಷ್ಠಿತ ತನಿಖಾ ಸಂಸ್ಥೆ ಸೆಂಟರ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಅಧಿಕೃತ ವೆಬ್ ತಾಣವನ್ನು ಪುನರ್ ಚಾಲನೆಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಕಲಮ್ ಗಳಡಿ ಅನಾಮಧೇಯ ವ್ಯಕ್ತೈಯ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ವೆಬ್‌ಸೈಟ್‌ನ್ನು ಶೀಘ್ರದಲ್ಲೇ ಮರುಸ್ಥಾಪಿಸುವ ಪ್ರಯತ್ನಗಳು ನಡೆದಿವೆಯೆಂದು ಸಿಬಿಐ ವಕ್ತಾರರೊಬ್ಬರು ತಿಳಿಸಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯ ಅಧಿಕೃತ ವೆಬ್‌ಸೈಟ್‌ಗೆ ಕನ್ನ ಹಾಕಿದ್ದ ಪಾಕ್ ಸೈಬರ್ ಆರ್ಮಿ ಸಿಬಿಐನ ವೆಬ್‌ಸೈಟ್‌ (http://cbi.nic.in/)ನ ಪ್ರಧಾನ ಪುಟದಲ್ಲಿ ಭಾರತೀಯ ಸೈಬರ್ ಆರ್ಮಿಯು, ಪಾಕಿಸ್ತಾನದ ವೆಬ್‌ಸೈಟ್‌ಗಳ ಮೇಲೆ ದಾಳಿ ನಡೆಸಕೂಡದೆಂದು ಎಚ್ಚರಿಕೆ ಸಂದೇಶವನ್ನು ನೀಡಿತ್ತು. ಭಾರತದ ಇತರ ವೆಬ್‌ಸೈಟ್‌ಗಳನ್ನು ಕೂಡಾ ಸಾಮೂಹಿಕವಾಗಿ ವಿರೂಪಗೊಳಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದರು. ಮುಂಬೈ ದಾಳಿಯ ನಂತರ ಪಾಕ್ ವೆಬ್ ಸೈಟ್ ಮೇಲೆ ಭಾರತ ಪದೇ ಪದೇ ದಾಳಿ ಮಾಡಿದ್ದರಿಂದಲೇ ಈ ರೀತಿ ಹ್ಯಾಕ್ ಮಾಡಿದ್ದೇವೆ ಎಂದು ಹ್ಯಾಕರ್ ಗಳು ಹೇಳಿಕೊಂಡಿದ್ದಾರೆ.

ಜಾಗತಿಕ ಪೊಲೀಸ್ ಸಂಘಟನೆಯಾಗಿರುವ ಇಂಟರ್‌ಪೋಲ್-24X7 ಕಮಾಂಡ್ ಕೇಂದ್ರದ ಜೊತೆಗೆ ಸಿಬಿಐ ವೆಬ್‌ಸೈಟ್ ನೇರವಾದ ಸಂಪರ್ಕವನ್ನು ಹೊಂದಿದೆ. ವೆಬ್ ಸೈಟ್ ನ ಮೂಲಕ್ಕೆ(root level) ಕೈ ಹಾಕಿರುವುದರಿಂದ ವೆಬ್ ಸೈಟ್ ಪುನರ್ ಸ್ಥಾಪನೆ ಕಷ್ಟವಾಗಿದೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ ಹಾಗೂ ಸೈಬರ್ ರಕ್ಷಣಾ ತಜ್ಞರು ವೆಬ್ ಸೈಟ್ ಸರಿಪಡಿಸಲು ಹರಸಾಹಸ ಪಡುತ್ತಿದ್ದಾರೆ.

ಭಾರತಕ್ಕೆ ತೀವ್ರ ಮುಜುಗರ: ಭಾರತದ ಮಹತ್ವದ ಇಲಾಖೆಗಳ ವೆಬ್‌ಸೈಟ್‌ಗಳು ಸಮರ್ಪಕವಾದ ಸುರಕ್ಷತೆಯನ್ನು ಹೊಂದಿಲ್ಲವೆಂದು ಗುಪ್ತಚರ ಸಂಸ್ಥೆಗಳು ಈ ಮೊದಲೇ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದವು. ಸೈಬರ್ ವಾರ್ ನಡೆಸಲು ದುಷ್ಕರ್ಮಿಗಳು ಕಾದು ಕೂತಿದ್ದಾರೆ ಎಂಬ್ಬ ಎಚ್ಚರಿಕೆಯ ಮಾತುಗಳನ್ನು ಸಿಬಿಐ ನಿರ್ಲಕ್ಷಿಸಿತ್ತು. ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದ ಈ ವೆಬ್ ತಾಣವನ್ನು ಪಾಕಿಸ್ತಾನಿ ಸೈಬರ್ ಆರ್ಮಿ ಅಜ್ಞಾತ ವ್ಯಕ್ತಿಗಳ ಗುಂಪು ಅತಿಕ್ರಮಿಸುವ ಮೂಲಕ ಭಾರತದ ಪ್ರತಿಷ್ಠೆಗೆ ಭಂಗ ತಂದು ತೀವ್ರ ಮುಜುಗರಕ್ಕೆ ಈಡು ಮಾಡಿದ್ದಾರೆ.

English summary
India"s premier investigative agency, Central Bureau of Investigation (CBI), has failed to restart its official website after the cyber attack by Pakistan hackers. The hackers have infiltrated up to the root level, which makes it difficult to fix the issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X