• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಿತ್ತಲ್ ಘಟಕ ಸ್ಥಾಪನೆಗಾಗಿ ರೈತರಿಗೆ ಪುಡಿಗಾಸು ಹಂಚಿಕೆ

By * ರೋಹಿಣಿ, ಬಳ್ಳಾರಿ
|
ಬಳ್ಳಾರಿ. ಡಿ.5: ಸರ್ಕಾರದ ಅಂತಿಮ ಅಧಿಸೂಚನೆ ಪ್ರಕಾರ ಮೆ: ಆರ್ಸೆಲ್ಲಾರ್ ಮಿತ್ತಲ್ ಕೈಗಾರಿಕೆ ಸ್ಥಾಪನೆಗಾಗಿ ಕುಡತಿನಿ - ಹರಗಿನಡೋಣಿ ಗ್ರಾಮಗಳ ವ್ಯಾಪ್ತಿಯಲ್ಲಿ ಸ್ವಾಧೀನ ಮಾಡಿಕೊಳ್ಳುತ್ತಿರುವ 4865.64 ಎಕರೆ ಭೂಮಿಗೆ ಪರಿಹಾರ ನೀಡಲು 50 ಕೋಟಿ ರುಪಾಯಿಯನ್ನು ಕೆಐಎಡಿಬಿ ಬಿಡುಗಡೆ ಮಾಡಿದೆ.

ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭುಸ್ವಾಧೀನಾಧಿಕಾರಿ ಮಹಾಂತೇಶ ಬೀಳಗಿ ಅವರು ಈ ಮಾಹಿತಿ ನೀಡಿದ್ದಾರೆ. ಈ ಹಣವನ್ನು ಭೂ ಮಾಲೀಕರಿಗೆ ಪರಿಹಾರವಾಗಿ ನೀಡಲು ಮೀಸಲು ಮಾಡಲಾಗಿದೆ. ಭೂಸ್ವಾಧೀನ ಮಾಡಿಕೊಂಡಿರುವ ಜಮೀನಿಗೆ ಸರ್ಕಾರ - ರೈತರು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಎನ್‌ಎ ಭೂಮಿಗೆ ತಲಾ 16 ಲಕ್ಷ ರುಪಾಯಿ, ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡು 500 ಮೀಟರ್ ವ್ಯಾಪ್ತಿ ವರೆಗಿನ ಭೂಮಿಗೆ ತಲಾ 12 ಲಕ್ಷ ರುಪಾಯಿ, ಉಳಿದ ಜಮೀನುಗಳಿಗೆ 8 ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತದೆ ಎಂದರು.


ಭೂಪರಿಹಾರ ವಿವಾದ ಕುರಿತು ಸ್ವೀಕರಿಸಲಾಗಿರುವ 89 ಪ್ರಕರಣಗಳ ಪೈಕಿ 74 ಪ್ರಕರಣಗಳನ್ನು ಪರಿಶೀಲಿಸಿ ವಿವಾದಿತ ಪ್ರಕರಣ ಹೊರತುಪಡಿಸಿ ಬಾಕಿ ಉಳಿದ 68 ಪ್ರಕರಣಗಳಲ್ಲಿ 257.60 ಎಕರೆ ಜಮೀನಿಗೆ ಒಟ್ಟು 19,71,93,480 ರೂ. ಭೂಪರಿಹಾರ ಪಾವತಿ ಮಾಡಲಾಗಿದೆ ಎಂದು ಅವರು ಹೇಳಿದರು.

ಭೂಮಾಲೀಕರು ಪರಿಹಾರ ಪಡೆಯಲು ಮಧ್ಯವರ್ತಿಗಳನ್ನು ಅವಲಂಬಿಸಬಾರದು. ಸೂಕ್ತ ದಾಖಲೆಗಳ ಜೊತೆ ಜಿಲ್ಲಾಡಳಿತ, ತಹಸೀಲ್ದಾರ್ ಅಥವಾ ಕೆಐಎಡಿಬಿ ಧಾರವಾಡ ಕಚೇರಿಯನ್ನು ಸಂಪರ್ಕ ಮಾಡಬೇಕು ಎಂದು ಅವರು ಕೋರಿದರು.

ರೈತರ ತೀವ್ರ ವಿರೋಧ:
ಕುಡತಿನಿ - ಹರಗಿನಡೋಣಿ ಭೂ ಸಂತ್ರಸ್ತರ ಹೋರಾಟ ಸಮಿತಿಯು ಪ್ರತಿ ಎಕರೆಗೆ 77 ಲಕ್ಷ ರುಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರು ಚಲೋ ಪಾದಯಾತ್ರೆ, ರಸ್ತೆ ತಡೆ, ದೀರ್ಘದಂಡ ನಮಸ್ಕಾರ, ಹೀಗೇ ನಾನಾ ರೀತಿಯ ಪ್ರತಿಭಟನೆಗಳನ್ನು ನಡೆಸಿದೆ.

ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವ ಸರ್ಕಾರ ಈಗಾಗಲೇ ನಿರ್ಧಾರ ಆಗಿರುವ ಬೆಲೆಯಲ್ಲೇ ಪರಿಹಾರವನ್ನು ವಿತರಣೆ ಮಾಡಲು ಮುಂದಾಗಿರುವುದು ಸಂತ್ರಸ್ತ ರೈತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ, ರೈತರನ್ನು ಒಡೆದು ಆಳುವ ಸರ್ಕಾರದ ನೀತಿ ಇದಾಗಿದೆ ಎಂದು ಟೀಕೆಗೆ ಗುರಿ ಆಗಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As per the instructions given by the Karnataka govt KIADB Bellary has released Rs.50 Cr to Farmers. Govt has acquires around 4865.64 acres of land Arcelor Mittal Steel Plant. But, Kudatini Haraginadoni Farmers are demanding 77 lakhs per acre as compensation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more