ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ

By Rajendra
|
Google Oneindia Kannada News

Nicolas Sarkozy
ಬೆಂಗಳೂರು, ಡಿ.4: ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ನಾಲ್ಕು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದು ಶನಿವಾರ (ಡಿ.4) ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಫ್ರಾನ್ಸ್ ಅರ್ಥ ಸಚಿವ ಕ್ರಿಸ್ಟೈನ್ ಲಾಗರ್ಡೆ ಸೇರಿದಂತೆ 50 ಮಂದಿ ವಾಣಿಜ್ಯೋದ್ಯಮಿಗಳು ಅತ್ಯುನ್ನತ ದರ್ಜೆಯ ಸಚಿವ ಸಂಪುಟ ಅಧಿಕಾರಿಗಳು ಆಗಮಿಸುತ್ತಿದ್ದಾರೆ.

ಇಸ್ರೋ ಸ್ಯಾಟಲೈಟ್ ಕೇಂದ್ರಕ್ಕೆ ಸರ್ಕೋಜಿ ಭೇಟಿ ನೀಡಲಿದ್ದು ಮಧ್ಯಾಹ್ನ ಅವರು ನವದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಇಸ್ರೋದೊಂದಿಗೆ ಬಾಹ್ಯಾಕಾಶ ಕಾರ್ಯಕ್ರಮಗಳ ಎರಡೂ ದೇಶಗಳ ಸಹಭಾಗಿತ್ವ ಕುರಿತು ಸರ್ಕೋಜಿ ಚರ್ಚಿಸಲಿದ್ದಾರೆ. ಈಗಾಗಲೆ ಫ್ರಾನ್ಸ್‌ನೊಂದಿಗೆ ಮೆಗಾ ಟ್ರೊಫಿಕ್ಸ್ ಮತ್ತು ಸರಳ್ ಎಂಬ ಎರಡು ಜಂಟಿ ಯೋಜನೆಗಳು ಪ್ರಗತಿಯಲ್ಲಿವೆ.

ಡಿಸೆಂಬರ್ 6ರಂದು ದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಸರ್ಕೋಜಿ ಮಾತುಕತೆ ನಡೆಸಲಿದ್ದಾರೆ. ಡಿಸೆಂಬರ್ 7ರಂದು ದೇಶದ ವಾಣಿಜ್ಯ ಕೇಂದ್ರ ಮುಂಬೈಗೆ ಭೇಟಿ ನೀಡಲಿದ್ದಾರೆ.

English summary
French President Nicolas Sarkozy arrived here today by a special flight on a four day state visit to India. The President will visit the ISRO Satellite Centre of the state-run space agency in his only programme in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X