ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ ಸಿಪಿಐ ಮಾವೋವಾದಿ ಬಂಧನ

By Mrutyunjaya Kalmat
|
Google Oneindia Kannada News

Naxal Flag
ಉಡುಪಿ, ಡಿ .2 : ತಮಿಳುನಾಡಿನ ಮೂಲದ ನಕ್ಸಲ್ ಮುಖಂಡನೊಬ್ಬನನ್ನು ಇಲ್ಲಿನ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಎಡಮೊಗ್ಗೆ ಗ್ರಾಮದ ಬಸವನಪಾಲು ಮೀಸಲು ಅರಣ್ಯ ಪ್ರದೇಶದಲ್ಲಿ ಉಡುಪಿ ಜಿಲ್ಲಾ ನಕ್ಸಲ್ ನಿಗ್ರಹ ದಳದ ಪೊಲೀಸರು ಗುರುವಾರ ಮಧ್ಯರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್, ಬಂಧಿತ ವ್ಯಕ್ತಿಯನ್ನು ತಮಿಳುನಾಡಿನ ನಿಷೇಧಿತ ಸಿಪಿಐ ಮಾವೋವಾದಿ ಸಂಘಟನೆಯ ಮಧುರೈ ಏರಿಯಾ ಕಮಾಂಡರ್ ಎನ್ ಶೇಖರ್ ಅಲಿಯಾಸ್ ರಂಜಿತ್ ಅಲಿಯಾಸ್ ರವಿ ಅಲಿಯಾಸ್ ಪ್ರೇಮ್ (25) ಎಂದು ಗುರುತಿಸಲಾಗಿದೆ ಎಂದರು.

ಆತ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಪಲ್ಲಿಪಟ್ಟು ತಾಲೂಕಿನ ಕುಮಾರಮಂಗಲಮ್‌ ನ ನಿವಾಸಿ ಎಸ್ ನಟರಾಜನ್ ಎಂಬವರ ಪುತ್ರ ಎಂದು ತಿಳಿದುಬಂದಿದೆ. ಶೇಖರ್ ತಮಿಳುನಾಡು ಹಾಗೂ ಇತರ ಕಡೆಗಳಲ್ಲಿ ನಕ್ಸಲ್ ಮುಖಂಡರ ಸಂಪರ್ಕ ಹೊಂದಿರುವ ಸಕ್ರಿಯ ನಕ್ಸಲ್ ಕಾರ್ಯಕರ್ತನೆಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಅಲೋಕ್ ಮೋಹನ್ ತಿಳಿಸಿದರು.

ಶೇಖರ್ ನಕ್ಸಲೀಯರಿಗೆ ಎಲ್ಲ ರೀತಿಯ ತರಬೇತಿ ನೀಡುವ ಪರಿಣತಿ ಹೊಂದಿದ ವ್ಯಕ್ತಿಯಾಗಿದ್ದು, ಆತನ ಕೈಯಲ್ಲಿದ್ದ ಬ್ಯಾಗ್‌ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಬಳಸುವ 10 ಡಿಟೋನೇಟರ್, 5 ಜಿಲೇಟಿನ್ ಕಡ್ಡಿಗಳು ಮತ್ತು ಬತ್ತಿಗಳು, ವೈದ್ಯಕೀಯ ಚೀಟಿಗಳು ಹಾಗೂ ನಿಷೇಧಿತ ಮಾವೋವಾದಿ ಸಂಘಟನೆಯ ಕರಪತ್ರಗಳು ಸಿಕ್ಕಿವೆ ಎಂದು ಐಜಿಪಿ ವಿವರಿಸಿದರು.

English summary
Anti Naxal Squad of Udupi Police has arrested an activist, (Sekhar alias Ranjit alias Ravi aliyas Prem (25), hailing from Madurai District in Tamil Nadu) who belongs to the banned CPI Maoist organization during Anti Naxal operation in the deep forest of Basavanpalu, Yedammoge Village, Kundapura Taluk of Udupi district, said IGP (Western Range) Alok Mohan on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X