ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ ಉದ್ಯೋಗಿಗಳ ಕೂಟಕ್ಕೆ ಸೇರಿದ ಕಾಗ್ನಿಜೆಂಟ್

By Mahesh
|
Google Oneindia Kannada News

CTS enters one lakh employee league
ನವದೆಹಲಿ, ಡಿ.3: ಅಮೆರಿಕ ಮೂಲದ ಐಟಿ ಸಂಸ್ಥೆ ಕಾಗ್ನಿಜೆಂಟ್ ಟೆಕ್ನಾಲಜೀಸ್ ಸಲ್ಯೂಷನ್ಸ್(ಸಿಟಿಎಸ್) ಗುರುವಾರ ಮತ್ತೊಂದು ಸಾಧನೆ ಮೆರೆದಿದೆ. ಗುರುವಾರದಂದು ಅಮೆರಿಕದಲ್ಲಿ 100,000ನೇ ಉದ್ಯೋಗಿಯನ್ನು ಫೈನಾನ್ಸ್ ಸರ್ವಿಸ್ ವಿಭಾಗಕ್ಕೆ ನೇಮಕಾತಿ ಮಾಡುವ ಮೂಲಕ ಲಕ್ಷ ಉದ್ಯೋಗಿಗಳನ್ನು ಹೊಂದಿರುವ ದೊಡ್ಡ ದೊಡ್ಡ ಕಂಪೆನಿಗಳ ಸಾಲಿಗೆ ಸಿಟಿಸ್ ಕೂಡಾ ಸೇರ್ಪಡೆಯಾಗಿದೆ.

ಸಿಟಿಎಸ್ ನ ಒಂದು ಲಕ್ಷ ಉದ್ಯೋಗಿಗಳಲ್ಲಿ ಶೇ.70ರಷ್ಟು ಜನ ಭಾರತೀಯ ಉದ್ಯೋಗಿಗಳಿದ್ದಾರೆ. ಪ್ರಸ್ತುತ ಭಾರತದಲ್ಲಿ ಸಿಟಿಎಸ್ ನಾಲ್ಕನೇ ಅತಿದೊಡ್ಡ ಕಂಪೆನಿಯಾಗಿದ್ದು, ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋ ನಂತರದ ಸ್ಥಾನದಲ್ಲಿದೆ. ಟಿಸಿಎಸ್ ನಲ್ಲಿ ಸುಮಾರು 1.74ಲಕ್ಷ ಉದ್ಯೋಗಿಗಳು, ಇನ್ಫೋಸಿಸ್ ನಲ್ಲಿ 1.22 ಲಕ್ಷ ಹಾಗೂ ವಿಪ್ರೋದಲ್ಲಿ 1.15 ಲಕ್ಷ ಉದ್ಯೋಗಿಗಳಿದ್ದಾರೆ.

1994 ರಲ್ಲಿ 175 ಉದ್ಯೋಗಿಗಳನ್ನು ಹೊಂದಿದ್ದ ಸಿಟಿಎಸ್ 16 ವರ್ಷಗಳಲ್ಲಿ ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡ ಸಾಧನೆ ಮಾಡಿರುವುದು ಹರ್ಷ ತಂದಿದೆ ಎಂದು ಕಾಗ್ನಿಜೆಂಟ್ ನ ಸಿಇಒ ಫ್ರಾನ್ಸಿಸ್ಕೋ ಡಿ" ಸೋಜಾ ಹೇಳಿದ್ದಾರೆ.

ಕಂಪೆನಿಯ ಸಾಧನೆಯನ್ನು ಅರ್ಥಪೂರ್ಣವಾಗಿ ಆಚರಿಸಲು ವಿಶ್ವದಾದ್ಯಂತೆ 100,000 ಮರಗಳನ್ನು ನೆಟ್ಟು, ಪ್ರತಿಯೊಬ್ಬ ಉದ್ಯೋಗಿಗೆ ಗೌರವ ಸಲ್ಲಿಸಲಾಗುವುದು ಹಾಗೂ ಪರಿಸರ ಕಾಳಜಿ ಮೆರೆಯಲಾಗುವುದು ಎಂದು ಸಿಟಿಎಸ್ ಸಂಸ್ಥೆ ಘೋಷಿಸಿದೆ.

English summary
US-based IT and consulting firm Cognizant, on Thursday crossed the one-lakh employee mark . Cognizant’s 100,000th employee was hired in the United States for the Financial Services segment. With this CTS has now entered the league of technology giants like TCS, Infosys and IBM. Meanwhile CTS has announced that will plant 100,000 trees around the world to individually honor its employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X