ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಫೈ ವಿಕಿರಣಗಳು ಮರಗಳಿಗೆ ಮಾರಕವೇ?

By Mahesh
|
Google Oneindia Kannada News

Wageningen University
ಹಾಲೆಂಡ್, ಡಿ.2 : ಇತ್ತೀಚೆಗೆ ಹಾಲೆಂಡಿನ Wageningen University ನೀಡಿದ ಸಂಶೋಧನಾ ವರದಿಯಂತೆ ವೈ ಫೈ ನೆಟ್ ವರ್ಕ್ ನಿಂದ ಮರಗಳು ನಾಶವಾಗುತ್ತದೆ ಎಂಬುದರಲ್ಲಿ ಅರ್ಥವಿಲ್ಲ ಎಂದು ಯಾಹೂ ಸುದ್ದಿ ಸಂಪಾದಕರು, ತಂತ್ರಜ್ಞರು ಹಾಗೂ ಕೆಲ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಎಲೆಕ್ಟ್ರೋ ಮ್ಯಾಗ್ನೇಟಿಕ್ ರೇಡಿಯೇಷನ್ ನಿಂದ ನೆದರ್ ಲ್ಯಾಂಡ್ ಪಶ್ಚಿಮ ಭಾಗದಲ್ಲಿರುವ ಮರಗಳು ನಾಶವಾಗುತ್ತಿದೆ. ಮರಗಳ ತೊಗಟೆ ಉದುರುತ್ತಿದೆ, ಬಣ್ಣ ಬದಲಾವಣೆಯಾಗುತ್ತಿದೆ, ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡು ಮರ ಕೊರೆದುಕೊಂಡು ನಾಶವಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ವೈಫೈ ಹಾಟ್ ಸ್ಪಾಟ್ ಎನ್ನಲಾಗುವ ಜಾಗದ ಸುತ್ತಮುತ್ತಲಿರುವ ಮರ ಗಿಡಗಳ ಮೇಲೆ ಮೂರು ತಿಂಗಳ ಕಾಲ ವಿಶ್ವವಿದ್ಯಾಲಯದವರು ಅಧ್ಯಯನ ನಡೆಸಿದರು. ಎಲೆಗಳ ಬಣ್ಣ ಪ್ರಮುಖವಾಗಿತ್ತು. ದ್ಯುತಿ ಸಂಶ್ಲೇಷಣಾ ಕ್ರಿಯೆ ಕೂಡಾ ನಿಧಾನಗತಿಯಲ್ಲಿತ್ತು ಗಿಡಗಳ ಬೆಳವಣಿಗೆ ಕೂಡಾ ಕುಂಠಿತವಾಗಿದೆ ಎಂದು ತಿಳಿದು ಬಂದಿದೆ.

ಲಭ್ಯವಿರುವ ಮಾಹಿತಿಯಂತೆ ಇದು ಅಪಾಯಕಾರಿ ಬೆಳವಣಿಗೆ. ಆದರೆ, ಈ ಅಧ್ಯಯನವನ್ನು ಮತ್ತೆ ಮತ್ತೆ ವಿವಿಧ ಪರಿಸರದಲ್ಲಿ ನಡೆಸಿ ಅಂತಿಮ ತೀರ್ಮಾನಕ್ಕೆ ಬರಬೇಕಿದೆ ಎಂದು ಇನ್ನೊಂದು ತಂಡ ಅಭಿಪ್ರಾಯಪಟ್ಟಿದೆ. ಆದರೆ, ವೈ ಫೈ ನಿಂದ ಮರಗಳಿಂದ ಹಾನಿ ಇಲ್ಲವೇ ಇಲ್ಲ ಎಂದು ತಳ್ಳಿ ಹಾಕುವಂತಿಲ್ಲ.

ಆದರೆ, ಸದ್ಯಕ್ಕೆ ಈ ಅಧ್ಯಯನ ನಿರ್ಣಾಯಕ ಎಂದು ಹೇಳಲಾಗುವುದಿಲ್ಲ. ಹೆಚ್ಚಿನ ಮಾಹಿತಿ ಸಂಗ್ರಹ ಮಾಡಿ, ಈ ಬಗ್ಗೆ ಚರ್ಚಿಸಲು ವಿಜ್ಞಾನಿಗಳು, ಪರಿಸರ ತಜ್ಞರು ಫೆಬ್ರವರಿ 2011ರಲ್ಲಿ ಒಂದೆಡೆ ಸೇರುತ್ತಿದ್ದಾರೆ. ಫಲಿತಾಂಶ ಏನಾಗುತ್ತದೆಯೋ ಕಾದು ನೋಡಬೇಕು. ತಂತ್ರಜ್ಞಾನ ಬೆಳೆದಂತೆಲ್ಲಾ ಅದರ ದುಷ್ಪರಿಣಾಮಗಳು ಸಹ ಜೊತೆ ಜೊತೆಗೆ ಬೆಳೆಯುತ್ತದೆ ಎಂಬ ಮಾತಿಗೆ ಮೇಲಿನ ಪ್ರಕರಣ ನಿರ್ದರ್ಶನವಾಗಲೂಬಹುದು. ವೈಫೈ ನಿಂದ ಪರಿಸರಕ್ಕೆ ಹಾನಿ ಎಂದು ಸಾಬೀತಾದರೆ, ಮುಂದುವರಿದ ರಾಷ್ಟ್ರಗಳಲ್ಲಿ ಹಲವಾರು ಬದಲಾವಣೆಗಳಾಗುವುದನ್ನು ಕಾಣಬಹುದು.

English summary
Yahoo News reports, some experts, including the scientists have turn down the claims by Wageningen University Holland about Wi-Fi radiation killing trees. Recently a report carried by Wageningen University suggested that Wi-Fi was killing ash trees in areas where networks were present in large numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X