ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಷರ್ರಫ್ ಗೆ ಭಾರತ ವೀಸಾ ನಿರಾಕರಣೆ

By Mrutyunjaya Kalmat
|
Google Oneindia Kannada News

Pakistan Flag
ನವದೆಹಲಿ ಡಿ 2 : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರಿಗೆ ವೀಸಾ ನೀಡಲು ಭಾರತ ನಿರಾಕರಿಸಿದೆ. ಇತ್ತೀಚಿಗೆ ಮುಷರ್ರಫ್ ನೀಡಿದ ಭಾರತ ವಿರೋಧಿ ಹೇಳಿಕೆಯಿಂದಾಗಿ ದೇಶ ಈ ನಿರ್ಧಾರ ತಳೆದಿದೆ ಎಂದು ಅಧಿಕೃತ ಮೂಲಗಳು ದೃಢ ಪಡಿಸಿವೆ. ಶನಿವಾರ (ಡಿ 4) ದೆಹಲಿಯಲ್ಲಿ ನಡೆಯಲಿರುವ ವಿಚಾರ ಸಂಕಿರಣವೊಂದರಲ್ಲಿ ಗೌರವ ಅತಿಥಿಯಾಗಿ ಮುಷರ್ರಫ್ ಪಾಲ್ಗೊಳ್ಳಬೇಕಿತ್ತು.

ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನದ ಪ್ರಾಂತ್ಯದಲ್ಲಿ ನಡೆಯುತ್ತಿರುವ ದಂಗೆಗೆ ಭಾರತ ಮತ್ತು ಅಫಘಾನಿಸ್ತಾನಗಳು ನೇರ ಹೊಣೆಯಾಗಿದ್ದು, ಅದಕ್ಕೆ ಬೇಕಾಗಿರುವ ಸಾಕ್ಷ್ಯಾಧಾರಗಳು ತಮ್ಮಲ್ಲಿವೆ ಎಂದು ಮುಷರ್ರಫ್ ಹೇಳಿಕೆ ನೀಡಿದ್ದರು. ಪಾಕ್ ಅಧ್ಯಕ್ಷ ಶನಿವಾರ ದೆಹಲಿಯಲ್ಲಿ ಯುತ್ ಪ್ರೆಸಿಡೆಂಟ್ಸ್ ಸಂಘಟನೆಯು ಹಮ್ಮಿಕೊಂಡಿರುವ ವಿಚಾರ ಸಂಕಿರಣದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಕಾರ್ಯಕ್ರಮವಿತ್ತು. ಕಾರ್ಗಿಲ್ ಉದ್ದದ ರೂವಾರಿಯಾಗಿರುವ ಮುಷರ್ರಫ್ ಪ್ರಸ್ತುತ ಸ್ವದೇಶ ಭ್ರಷ್ಟತೆಯನ್ನು ಹೊಂದಿ ಬ್ರಿಟನ್ ನಲ್ಲಿ ಆಶ್ರಯ ಪಡೆದಿದ್ದಾರೆ.

English summary
India has denied visa to former Pakistan president Pervez Musharraf who wanted to attend a seminar here this weekend. The decision to reject General Musharraf’s visa application was taken as the Home Ministry had serious reservations over allowing him to visit the Capital in view of his recent anti-India statements, The Home Ministry sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X