ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರದ ಬೆಲೆ 10 ಗ್ರಾಂಗೆ 21 ಸಾವಿರ ರು.

By Mrutyunjaya Kalmat
|
Google Oneindia Kannada News

Gold bangles
ನವದೆಹಲಿ, ಡಿ. 2 : ಬಡವರಿಂದ ಬಲು ದೂರ ಸಾಗಿರುವ ಬಂಗಾರದ ಬೆಲೆ ಇದೀಗ ಶ್ರೀಮಂತರಿಗೂ ಬಿಸಿ ಮುಟ್ಟಿಸತೊಡಗಿದೆ. ಮದುವೆ ಸೀಸನ್ ಇದಾಗಿದ್ದರಿಂದ ಬಂಗಾರಕ್ಕೆ ಚಿನ್ನದಂಥ ಬೆಲೆ ತಂದುಕೊಟ್ಟಿದೆ ಎಂದರೆ ಸುಳ್ಳಲ್ಲ. ನವದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 21 ಸಾವಿರ ರುಪಾಯಿಗೆ ಬಂದು ನಿಂತಿದೆ. ಇದು ಎಲ್ಲ ಕಾಲಕ್ಕೂ ದಾಖಲೆಯ ಬೆಲೆ.

ಬೆಳ್ಳಿಯ ಬೆಲೆಯೂ ಬಂಗಾರದ ಹಾದಿಯಲ್ಲೇ ಸಾಗುತ್ತಿದ್ದು, ಪ್ರತಿ ಕೆಜಿ ಬೆಳ್ಳಿಗೆ 43,950 ರುಪಾಯಿ ದಾಖಲಾಗಿದೆ. ಉದ್ಯಮ ವಲಯ ಮತ್ತು ನಾಣ್ಯ ತಯಾರಿಕರಿಂದ ಭಾರಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಬೆಳ್ಳಿಗೂ ದಾಖಲೆ ಬೆಲೆ ಬಂದಿದೆ.

ಶೇ.99.9 ರಷ್ಟು ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 200 ರುಪಾಯಿಗಳಷ್ಟು ಏರಿಕೆಯಾಗಿದೆ. ಹೀಗಾಗಿ ಚಿನ್ನಗ ಬೆಲೆ 21,020 ರುಪಾಯಿಗಳಷ್ಟು ದಾಖಲಾಗಿದೆ. ಚಿನಿವಾರ ಪೇಟೆಯಲ್ಲಿನ ಬೇಡಿಕೆಯಿಂದ ಚಿನ್ನದ ಬೆಲೆ ಮತ್ತಷ್ಟು ಮುಗಿಲು ಮುಟ್ಟತೊಡಗಿದೆ ಎಂದು ಚಿನಿವಾರ ಪೇಟೆ ವಿಶ್ಲೇಷಕರು ಹೇಳುತ್ತಾರೆ.

English summary
The gold price on Wednesday (01-12-10) crossed the all-time high level of Rs 21,000 per 10 grams in the national capital, Silver also spurted to the record high level of Rs 43,950 per kg, as demand from industrial units and coin makers went up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X