ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8846 ಕೋ.ರು.ಗಳ ದಾನ ನೀಡಿದ ಪ್ರೇಮ್ ಜೀ

By Mrutyunjaya Kalmat
|
Google Oneindia Kannada News

Azim Premji
ಬೆಂಗಳೂರು, ಡಿ. 2 : ಭಾರತದ ಪ್ರತಿಷ್ಠಿತ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ಬೆಂಗಳೂರು ಮೂಲದ ವಿಪ್ರೋ ಕಂಪನಿಯ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಅವರು ಗ್ರಾಮೀಣ ವಲಯದ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು 8,846 ಕೋಟಿ ರುಪಾಯಿಗಳನ್ನು ದಾನದ ರೂಪದಲ್ಲಿ ನೀಡಲು ನಿರ್ಧರಿಸಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ಕಂಪನಿಯ ನಡೆಸುತ್ತಿರುವ ಅಜೀಂ ಪ್ರೇಮ್ ಜೀ ಫೌಂಡೇಷನ್ ಟ್ರಸ್ಟ್ ಗೆ ಡಿಸೆಂಬರ್ 7 ರೊಳಗೆ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾರೆ.

ಒಬ್ಬ ಉದ್ಯಮಿ ಹಳ್ಳಿಗಳ ಉದ್ಧಾರಕ್ಕಾಗಿ ಇಷ್ಟು ದೊಡ್ಡ ಮೊತ್ತವನ್ನು ಒಂದೇ ಕಂತಿನಲ್ಲಿ ಹಣವನ್ನು ದಾನವಾಗಿ ಘೋಷಣೆ ಮಾಡಿದ ಉದಾಹರಣೆ ಇಲ್ಲ. ಭಾರತದಲ್ಲಿರುವ ಶಾಲೆಗಳು ಸುಧಾರಣೆಯಾಗಬೇಕು. ಗುಣಮಟ್ಟದ ಶಿಕ್ಷಣ ಭಾರತೀಯ ಬಡಮಕ್ಕಳಿಗೆ ಸಿಗಬೇಕು ಎಂಬ ಉದ್ದೇಶದ ಜೊತೆಗೆ ಶಿಕ್ಷಣವೇ ದೇಶದ ಭವಿಷ್ಯವನ್ನು ನಿರ್ಧರಿಸಬಲ್ಲದು.

ಇದನ್ನು ಕೊಟ್ಟರೆ ಮಕ್ಕಳೆ ದೇಶಕ್ಕೆ ದೊಡ್ಡ ಆಸ್ತಿಯಾಗಬಲ್ಲರು ಎಂಬ ನಂಬಿಕೆ ಇಟ್ಟುಕೊಂಡು ಒಂದೇ ಕಂತಿನಲ್ಲಿ ಶಿಕ್ಷಣದ ಉದ್ಧಾರಕ್ಕಾಗಿ 8,846 ಕೋಟಿ ರುಪಾಯಿಗಳನ್ನು ನೀಡುತ್ತಿರುವುದಾಗಿ ಪ್ರೇಮ್ ಜೀ ತಿಳಿಸಿದ್ದಾರೆ. ಡಿಸೆಂಬರ್ 7ರೊಳಗೆ ಅಜೀಂ ಪ್ರೇಮ್ ಜೀ ಟ್ರಸ್ಟ್ ಗೆ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

2001ರಲ್ಲಿ ಅಜೀಂ ಪ್ರೇಮ್ ಜೀ ಫೌಂಡೇಷನ್ ಟ್ರಸ್ಟ್ ಸ್ಥಾಪಿಸಲಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈವರೆಗೆ ಸುಮಾರು 25 ಸಾವಿರ ಶಾಲೆಗಳೊಂದಿಗೆ ಟ್ರಸ್ಟ್ ನಿಕಟ ಸಂಪರ್ಕ ಹೊಂದಿದ್ದು, ಎರಡೂವರೆ ಲಕ್ಷ ವಿದ್ಯಾರ್ಥಿಗಳು ಕಂಪನಿಯ ಧನ ಸಹಾಯ ಪಡೆದುಕೊಂಡಿದ್ದಾರೆ. ಕರ್ನಾಟಕ ಸರಕಾರ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯ ಸ್ಥಾಪಿಸಲು ಅನುಮತಿ ನೀಡಿದ್ದು, ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಸುಮಾರು 75 ಜಾಗದಲ್ಲಿ ವಿಶ್ವವಿದ್ಯಾಲಯ ಆರಂಭಿಸಲಾಗುವುದು.

2011ಕ್ಕೆ ವಿಶ್ವವಿದ್ಯಾಲಯ ಶುರು ಮಾಡಲಾಗುವುದು. ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಸಹ ವಿಶ್ವವಿದ್ಯಾಲಯ ನೀಡಲಿದೆ ಎಂದು ಅಜೀಂ ಪ್ರೇಮ್ ಜೀ ವಿವರಿಸಿದರು. ಅಜೀಂ ಪ್ರೇಮ್ ಜೀ ಭಾರತದ ಮೂರನೇ ಸಿರಿವಂತ ವ್ಯಕ್ತಿಯಾಗಿದ್ದಾರೆ.

English summary
Azim Premji, chairman of India"s third largest IT services firm, Wipro, will transfer Rs 8,846 crore (two billion rupees) equity shares of the company to a trust controlled by him, which will use the money for charitable causes. The transfer to Azim Premji Trustee Company Pvt. Ltd will be effective December 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X