ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸೆಂಟ್ರಲ್ ಮಾಲ್ ನಲ್ಲಿ ಕನ್ನಡ ಹಾಡು ಕೇಳಿಸಿ!

By Prasad
|
Google Oneindia Kannada News

Sampige Srinivas, Bengaluru
ಸ್ನೇಹಿತರೆ, ಕೆಲವು ವರ್ಷಗಳಿಂದೀಚೆಗೆ ನಮ್ಮ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಹೊಸ ಹೊಸ “ಮಾಲ್ “ಗಳು ತಲೆಯೆತ್ತುತ್ತಿರುವುದು ಎಲ್ಲರಿಗೂ ಗೊತ್ತು. ಈ ಮಾಲ್ ಗಳನ್ನು ಸ್ಥಾಪಿಸುವವರು ಹೆಚ್ಚಾಗಿ ಪರರಾಜ್ಯದವರು, ಅದರಲ್ಲೂ ಉತ್ತರ ಭಾರತೀಯರು. ಇವರಿಗೆ ಕನ್ನಡದ ಬಗ್ಗೆ ಇರುವ ಅಸಡ್ಡೆ ಗೊತ್ತಿರುವ ವಿಷಯವೇ.

ಹಿಂದಿಯೇ ಭಾರತದ ರಾಷ್ಟ್ರಭಾಷೆಯೆಂಬ ಸುಳ್ಳು ಹಮ್ಮಿನಿಂದ ಈ ಮಾಲ್ ಗಳಲ್ಲಿ ಹಿಂದಿಗೆ ಪ್ರಾಶಸ್ತ್ಯ ಕೊಟ್ಟು ಕನ್ನಡವನ್ನು ಕಡೆಗಣಿಸುತ್ತಿದ್ದಾರೆ. ಉದಾಹರಣೆಗೆ ಕನ್ನಡ ಹಾಡುಗಳನ್ನು ಈ ಮಾಲ್ ಗಳಲ್ಲಿ ಕೆಳಿಸದಿರುವುದು, ಇಲ್ಲಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಹಿಂದಿ ಸಿನಿಮಾಗಳಿಗೆ ಪ್ರಾಶಸ್ತ್ಯ ನೀಡುವುದು, ಕನ್ನಡದಲ್ಲಿ ನಾಮಫಲಕಗಳಿಲ್ಲದಿರುವುದು, ಇದ್ದರೂ ಕಾಟಾಚಾರಕ್ಕೆ ಎಂಬಂತೆ ಯಾರಿಗೂ ಕಾಣಿಸದಿರುವಂತೆ ನಾಮಫಲಕ ಬರೆಸುವುದು ಇತ್ಯಾದಿ.

ಈ ಮಾಲ್ ಗಳಿಂದ ಕನ್ನಡ ಸಂಸ್ಕೃತಿಗೆ ಸಂಚಕಾರ ಬರುತ್ತಿರುವುದನ್ನು ನೋಡಿಯೂ ಕನ್ನಡಿಗರು ಹಾಗೂ ನಮ್ಮ ಕನ್ನಡ ಸಂಘ-ಸಂಸ್ಥೆಗಳು ಸುಮ್ಮನಿರುವುದು ತುಂಬ ದುಃಖದ ವಿಷಯ. ಕೆಲವು ವರ್ಷಗಳ ಹಿಂದೆ ನಾವು ಕೆಲವು ಕನ್ನಡ ಪ್ರೇಮಿಗಳು ಸೇರಿಕೊಂಡು ಕೋರಮಂಗಲದಲ್ಲಿರುವ ಫೋರಮ್ ಮಾಲ್ ನಲ್ಲಿ ಕನ್ನಡ ನಾಮಫಲಕಗಳಿಲ್ಲದಿರುವುದು ಹಾಗೂ ಸಹಾಯ ಕೇಂದ್ರದಲ್ಲಿ ಕನ್ನಡದಲ್ಲಿ ಮಾಹಿತಿ ನೀಡದಿರುವುದರ ಬಗ್ಗೆ ಅಲ್ಲಿನ ವ್ಯವಸ್ಥಾಪಕರನ್ನು ಸೌಜನ್ಯದಿಂದ ಬೇಟಿ ಮಾಡಿ ದೂರು ನೀಡಿದ್ದೆವು. ಇದಾದ ಮೇಲೆ ಆ ಮಾಲಿನಲ್ಲಿ ಕನ್ನಡಕ್ಕೆ ತಕ್ಕ ಮಟ್ಟಿಗಿನ ಸ್ಥಾನ ದೊರೆತಿದ್ದು ನಮಗೆಲ್ಲ ಸಂತೋಷವಾಗಿತ್ತು.

ಆದರೆ ಇತ್ತೀಚೆಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ “ಬೆಂಗಳೂರು ಸೆಂಟ್ರಲ್" ಮಾಲ್ ಗೆ ಹೋದಾಗ ಅಲ್ಲಿ ಹಿಂದಿ ಹಾಡು ಪ್ರಸಾರ ಮಾಡುತ್ತಿರುವುದನ್ನು ಕಂಡು ಬೇಸರವಾಯಿತು. ತಕ್ಷಣ ಡಿ.ಜೆ ಬಳಿ ಹೋಗಿ ಕನ್ನಡ ಹಾಡು ಹಾಕಲು ಕೇಳಿಕೊಂಡೆ. ಆದರೆ ಕನ್ನಡ ಸಿ.ಡಿ ಇಲ್ಲ ಎಂಬ ಉತ್ತರ ಸಿಕ್ಕಿತು. ಬೆಂಗಳೂರಿನಲ್ಲ್ಲಿ ಕನ್ನಡ ಹಾಡುಗಳ ಸಿ.ಡಿ ಸಿಗುವುದಿಲ್ಲವೇ ಎಂದು ದಬಾಯಿಸಿದೆ. ಅಲ್ಲಿನ ಸಹಾಯಕ ವ್ಯವಸ್ಥಾಪಕರನ್ನು ಕರೆಸಿ ಈ ಬಗ್ಗೆ ದೂರು ನೀಡಿದೆ. ವ್ಯವಸ್ಥಾಪಕರು ಇನ್ನು ಮುಂದೆ ಕನ್ನಡ ಹಾಡುಗಳನ್ನು ಕೇಳಿಸುತ್ತೇವೆ ಎಂದು ಸಮಜಾಯಿಷಿ ನೀಡಿದರು.

ಜೆ.ಪಿ.ನಗರ ಹಾಗೂ ಜಯನಗರದಲ್ಲಿ ಕನ್ನಡಿಗರಿಗೆ ಬರವಿಲ್ಲ. ಇಲ್ಲಿನ ಬಿಗ್ ಬಜಾರ್ ಹಾಗೂ ಬೆಂಗಳೂರು ಸೆಂಟ್ರಲ್ ಮಾಲ್ ಗಳಿಗೆ ಬಹಳಷ್ಟು ಕನ್ನಡಿಗರು ವ್ಯಾಪಾರ ಮಾಡಲು ಬರುತ್ತಾರೆ. ಆದರೆ ಯಾರೊಬ್ಬರೂ ಕನ್ನಡ ಹಾಡು ಪ್ರಸಾರ ಮಾಡಿ ಎಂದು ಕೇಳುವುದಿಲ್ಲ. ಆಲ್ಲಿನ ವ್ಯಾಪಾರಿಗಳೊಂದಿಗೆ ಕನ್ನಡದಲ್ಲೇ ಮಾತನಾಡುವ ಕನ್ನಡಿಗರು ಕೆಲವೇ ಮಂದಿ. ಬಹಳಷ್ಟು ಕನ್ನಡಿಗರು ತಾವು ಬಹುಬಾಷಾ ಪ್ರವೀಣರೆಂದು ತೋರಿಸಿಕೊಳ್ಳಲು ಅಲ್ಲಿನ ಸಿಬ್ಬಂದಿಯೊಂದಿಗೆ ಇಂಗ್ಲಿಷ್, ಹಿಂದಿ ಭಾಷೆಯಲ್ಲೇ ವ್ಯವಹರಿಸುವುದನ್ನು ನೋಡಿ ದುಃಖವಾಗುತ್ತದೆ.

ಯಾರೊ ಒಂದಿಬ್ಬರು ಕನ್ನಡಿಗರು ಹೋಗಿ ಕನ್ನಡದ ಹಾಡು ಪ್ರಸಾರ ಮಾಡಿ, ಕನ್ನಡ ನಾಮಫಲಕ ಹಾಕಿ ಎಂದು ಎಲ್ಲಾ ಮಾಲುಗಳಿಗೂ ಹೋಗಿ ಒತ್ತಾಯಿಸುವುದು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗರು ತಾವಿರುವ ಪ್ರದೇಶದ ಮಾಲುಗಳಿಗೆ ಬೇಟಿ ನೀಡಿದಾಗ, ಕನ್ನಡಕ್ಕೆ ಒತ್ತಾಯಿಸಿದರೆ ಆಗ ಮಾಲ್ ಗಳಲ್ಲಿ ಕನ್ನಡ ನುಡಿ ಪಸರಿಸಬಹುದು. ಇಲ್ಲಿನ ವ್ಯವಸ್ಥಾಪಕರ ಹಾಗೂ ಗ್ರಾಹಕ ಸೇವೆಯ ಮಿಂಚೆ(ಇ-ಮೇಲ್) ವಿಳಾಸಕ್ಕೆ ([email protected]; [email protected]) ದಯವಿಟ್ಟು ನೀವೆಲ್ಲ ಮಿಂಚಿಸಿ ಕನ್ನಡ ಹಾಡು ಪ್ರಸಾರ ಮಾಡಲು, ಕನ್ನಡಕ್ಕೆ ಪ್ರಾಶಸ್ತ್ಯ ನೀಡಲು ಒತ್ತಾಯಿಸಬೇಕೆಂದು ಕೋರುತ್ತೇನೆ. ನಾನು ಕಳುಹಿಸಿದ್ದ ಮಿಂಚೆ ನಿಮ್ಮ ಅವಗಾಹನೆಗಾಗಿ ಕೆಳಗೆ ನೀಡಿದ್ದೇನೆ.

ವಂದನೆಗಳು,
ಸಂಪಿಗೆ ಶ್ರೀನಿವಾಸ, ಬೆಂಗಳೂರು

English summary
Have you ever heard of kannada songs in Bangalore malls? No way. Kannada is being neglected and kannada language is at the receiving ends in bengaluru, writes Sampige Srinivas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X