• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರದುರ್ಗ ಐಐಎಸ್ಸಿ ಕ್ಯಾಂಪಸ್ಸಿಗೆ 2 ಕೋಟಿ ರು.

By Prasad
|

ಚಿತ್ರದುರ್ಗ, ಡಿ. 01 : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿನ 300 ಎಕರೆ ಕುರಿ ಮೇಯುವ ಹುಲ್ಲುಗಾವಲು ಈಗ ಪ್ರೌಢಶಾಲಾ ಶಿಕ್ಷಕರಿಗೆ ಮೂಲ ವಿಜ್ಞಾನ ಮತ್ತು ತಂತ್ರಜ್ಞಾನದ ಪಾಠ ಹೇಳುವ ಆಲಯವಾಗಿ ಬದಲಾಗಿದೆ.

ವಿಜ್ಞಾನ ನಗರಿ ಎಂದು ಮಾರ್ಪಾಡಾಗುತ್ತಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಈ ಪ್ರಯೋಜನಕ್ಕೆ ಬಾರದಿದ್ದ ಜಮೀನಿನಲ್ಲಿನ 32 ಕಟ್ಟಡಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಗೆ ಬಿಟ್ಟುಕೊಡಲಾಗಿದೆ. ಮತ್ತು 2 ಕೋಟಿ ರು. ಹಣವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಅಗತ್ಯಗಳಿಗೆ ತಕ್ಕಂತೆ ಕಟ್ಟಡಗಳನ್ನು ಮಾರ್ಪಾಡುಪಡಿಸಲು ಅನುದಾನ ನೀಡಲಾಗಿದೆ. ಇದಲ್ಲದೆ ಐಐಎಸ್ ಸಿ ಕ್ಯಾಂಪಸ್ ಗಾಗಿ ಸುಮಾರು 1500 ಎಕರೆ ಜಮೀನನ್ನು ನೀಡಲಾಗಿದೆ.

ಇದು ಸಾಧ್ಯವಾದದ್ದು ಸ್ವತಃ ಸಾಫ್ಟ್ ವೇರ್ ಇಂಜಿನಿಯರಾಗಿದ್ದ ಚಿತ್ರದುರ್ಗದ ಸಂಸದ ಜನಾರ್ಧನ ಸ್ವಾಮಿ ಅವರು ಸತತ ಪ್ರಯತ್ನದಿಂದ. ಅವರಿಗೆ ಹೆಗಲು ನೀಡಿದವರು ಐಐಎಸ್ ಸಿಯ ವಿಶೇಷ ಅಧಿಕಾರಿಯಾಗಿರುವ ಎಚ್ಎಸ್ ಜಗದೀಶ್ ಅವರ ಕಾರ್ಯತತ್ಪರತೆಯಿಂದ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನ ಶಿಕ್ಷಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಇನ್ನಷ್ಟು ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ಚಳ್ಳಕೆರೆ ಐಐಎಸ್ಸಿ ಕ್ಯಾಂಪಸ್ಸಿನಲ್ಲಿ ಇಂಟೆನ್ಸೀವ್ ಟ್ಯಾಲೆಂಟ್ ಡೆವಲಪ್ಮೆಂಟ್ ಸೆಂಟರ್ ಆರಂಭಿಸಲಾಗುತ್ತಿದೆ. ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮ 2011ರ ಫೆಬ್ರವರಿಯಲ್ಲಿ ಆರಂಭವಾಗುತ್ತಿದೆ ಎಂದು ಎಚ್ಎಸ್ ಜಗದೀಶ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government has alloted 32 buildings and sanctioned Rs. 2 cr to set up Intensive Talent Development Centre at IISc campus in Challakere, Chitradurga dist, for training teachers in science and technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more