• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವದೇಶಿ ಚಳವಳಿ ಹರಿಕಾರ ರಾಜೀವ್ ದೀಕ್ಷಿತ್ ಅಸ್ತಂಗತ

By Mahesh
|

ಬೆಂಗಳೂರು, ನ.30: ಸ್ವದೇಶಿ ಚಳವಳಿ ಹರಿಕಾರ, ವಿಜ್ಞಾನಿ, ವಾಗ್ಮಿ ಶ್ರೇಷ್ಠ ರಾಷ್ಟ್ರಪ್ರೇಮಿ ರಾಜೀವ್ ದೀಕ್ಷಿತ್(43) ನಿಧನರಾಗಿದ್ದಾರೆ. ಭಿಲಾಯ್ ನಲ್ಲಿದ್ದ ಅವರು ನಿನ್ನೆ ತಡರಾತ್ರಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು ಎಂದು ಅವರ ಆಪ್ತರು ಹೇಳಿದ್ದಾರೆ. ಬಾಬಾ ರಾಮ್ ದೇವ್ ಆರಂಭಿಸಿರುವ ಭಾರತ್ ಸ್ವಾಭಿಮಾನ್ ಆಂದೋಳನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ರಾಜೀವ್ ಸೇವೆ ಸಲ್ಲಿಸುತ್ತಿದ್ದರು.

ಭಾರತೀಯತೆಯಲ್ಲಿ ಬಲವಾದ ನಂಬಿಕೆ ಇಟ್ಟುಕೊಂಡು ಪ್ರಚಾರ ನಡೆಸುತ್ತಿದ್ದ ರಾಜೀವ್, ಭಾರತದ ಚರಿತ್ರೆ, ಸಂವಿಧಾನ ಹಾಗೂ ಆರ್ಥಿಕ ನೀತಿಗಳಲ್ಲಿನ ಲೋಪ ದೋಷಗಳನ್ನು ಜನರ ಮುಂದೆ ಮಂಡಿಸುತ್ತಿದ್ದರು. ಜನ ಸಾಮಾನ್ಯರು ಸ್ವದೇಶಿ ವಸ್ತುಗಳ ಬಳಸುವುದರಿಂದ ದೇಶಕ್ಕೆ ಆಗುವ ಲಾಭದ ಬಗ್ಗೆ ಹಲವಾರು ಪ್ರವಚನಗಳನ್ನು ನೀಡಿದ್ದರು. ಸ್ವದೇಶಿ ಚಳವಳಿ ಹಾಗೂ ಆಜಾದಿ ಬಚಾವ್ ಆಂದೋಳನಗಳ ಮೂಲಕ ಜನತೆಯಲ್ಲಿ ದೇಶಪ್ರೇಮದ ಕಿಡಿ ಹಚ್ಚಿದರು.

ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಜನಿಸಿದ ರಾಜೀವ್ ದೀಕ್ಷಿತ್, ಆರಂಭದಿಂದಲೇ ಹೋರಾಟ ಮನೋಭಾವವನ್ನು ಬೆಳಸಿಕೊಂಡಿದ್ದರು. ಮಾಜಿ ರಾಷ್ಟ್ರಪತಿ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರೊಡನೆ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಫ್ರಾನ್ಸ್ ನಲ್ಲಿ ದೂರಸಂಪರ್ಕ ಇಲಾಖೆಯಲ್ಲೂ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಕಳೆದ 20 ವರ್ಷಗಳಿಂದ ಸ್ವದೇಶಿ ಚಳವಳಿಯಲ್ಲಿ ತೊಡಗಿಕೊಂಡು, ವಿದೇಶಿ ಕಂಪೆನಿಗಳ ಹುನ್ನಾರವನ್ನು ಬಯಲು ಮಾಡಿ, ಜನತೆಗೆ ಅರಿವು ಮೂಡಿಸಲು ಶ್ರಮಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rajiv Dixit demise last night, He was one of the leaders of Modern swadeshi movement. Currently he was working as National Secretory of Bharat Swabhiman Andolan started by Baba Ramdev. Rajiv was strong believer and preacher of Bharatiyata(Indianism). He was also a scientist, orator lead many movements against corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more