ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಡಿಯಾ ಟೇಪ್ ಬಹಿರಂಗ ತನಿಖೆಗೆ : ಕೇಂದ್ರ ಸರ್ಕಾರ

By Mahesh
|
Google Oneindia Kannada News

Centre to Probe Radia Tapes
ನವದೆಹಲಿ, ನ.30: ನೀರಾ ರಾಡಿಯಾ ಮತ್ತು ಆಕೆಯು ತನ್ನ ಗ್ರಾಹಕರೊಂದಿಗೆ ನಡೆಸಿದ ಸಂಭಾಷಣೆಯ ಧ್ವನಿಮುದ್ರಣದ ಕ್ಯಾಸೆಟ್ ಸೋರಿಕೆ ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. ದೇಶದ ಪ್ರತಿಷ್ಠಿತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಈ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ ನಂತರ ಸರ್ಕಾರ ಸೋಮವಾರ ತನಿಖೆಗೆ ಆದೇಶ ಹೊರಡಿಸಿದೆ.

ಗ್ರಾಹಕರು ಹಾಗೂ ಪತ್ರಕರ್ತರ ಜೊತೆ ನೀರಾ ದೂರವಾಣಿ ಸಂಭಾಷಣೆ ನಡೆಸುತ್ತಿರುವ ಈ ಟೇಪ್ ಬಹಿರಂಗ ಮಾಡಿದ್ದು ಯಾರು ಹಾಗೂ ಹೇಗೆ ಬಹಿರಂಗ ಮಾಡಿದರು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ. ಬೇಹುಗಾರಿಕಾ ಸಂಸ್ಥೆ ಮತ್ತು ಕೇಂದ್ರ ನೇರ ತೆರಿಗೆ ಮಂಡಳಿಯು ಈ ಕುರಿತು ತನಿಖೆ ಕೈಗೊಳ್ಳಲಿದೆ ಎಂದು ಗೃಹ ಸಚಿವಾಲಯ ತಿಳಿಸಿವೆ.

2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಸಿಬಿಐ ಪ್ರಕಾರ ಇದುವರೆಗೂ 5000 ಕರೆಗಳನ್ನು ದಾಖಲಿಸಿದ್ದು, ಅದರಲ್ಲಿ ಈಗಾಗಲೇ 104 ಧ್ವನಿ ಮುದ್ರಣಗಳು ಸೋರಿಕೆಯಾಗಿವೆ. ತಮ್ಮ ಮತ್ತು ರಾಡಿಯಾ ಅವರ ನಡುವಿನ ಸಂಭಾಷಣೆ ಮತ್ತೆ ಪ್ರಕಟವಾಗುವುದನ್ನು ತಡೆಯಬೇಕು. ತಮ್ಮ ಜೀವನದ ಹಕ್ಕು ಹಾಗೂ ಖಾಸಗಿತನದ ಹಕ್ಕಿಗೆ ಅಡ್ಡಿಯಾಗಿದೆ.ಈ ಸಂಬಂಧ ಸರ್ಕಾರಕ್ಕೆ ಸ್ಪಷ್ಟ ಆದೇಶವನ್ನು ನೀಡಬೇಕು ಎಂದು ಟಾಟಾ ನ್ಯಾಯಾಲಯವನ್ನು ಕೋರಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X