ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶವಂತಪುರ ಕ್ಷೇತ್ರಾಭಿವೃದ್ಧಿಯಲ್ಲಿ ಶೋಭಾ ನಿರತ

By Mahesh
|
Google Oneindia Kannada News

Minister Shobha Karandlaje
ಬೆಂಗಳೂರು, ನ. 28: ಯಶವಂತಪುರ ಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶದ ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಿ ರೂ 7.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ರಾಜ್ಯದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವೆ ಶೋಭಾ ಚಾಲನೆ ನೀಡಿದರು.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೆಟ್ಟನಪಾಳ್ಯದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ 90 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ರಾಮೋಹಳ್ಳಿ- ಹೊಸಪಾಳ್ಯ, ಬೆಟ್ಟನಪಾಳ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಾವರೆಕೆರೆ-ಕೆಂಗೇರಿ ರಸ್ತೆ ಅಭಿವೃದ್ಧಿ: ಬಹು ದಿನಗಳ ಬೇಡಿಕೆಯಾದ ತಾವರೆಕೆರೆ-ಕೆಂಗೇರಿ ರಸ್ತೆಯನ್ನು ರೂ. 12 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗವುದು ಎಂದು ಇಂಧನ ಸಚಿವೆ ಶೋಭಾ ತಿಳಿಸಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರೆಕೆರೆ, ಕೆಂಗೇರಿ ಮತ್ತು ಉತ್ತರಹಳ್ಳಿ ಹೋಬಳಿಗಳಲ್ಲಿ ರೂ. 5.2 ಕೋಟಿ ವೆಚ್ಚದ 32 ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದ ಅವರು ತಾವರೆಕೆರೆ ಬೆಂಗಳೂರಿಗೆ ಸಮೀಪವಿದ್ದರೂ ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಕಳೆದೆರೆಡು ವರ್ಷಗಳಿಂದ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ತಾವರೆಕೆರೆಗೆ ಇನ್ನು ಮುಂದೆ 24 ಗಂಟೆ ನಿರಂತರವಾಗಿ ವಿದ್ಯುತ್ ನೀಡಲಾಗುವುದು ಎಂದು ಅವರು ಹೇಳಿದರು.

ರೈಲ್ವೆ ಇಲಾಖೆ ಸಹಕಾರದೊಂದಿಗೆ ಕುಂಬಳಗೋಡು ಬಳಿ ರೈಲ್ವೆ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು. ಇದರಿಂದ ದೊಡ್ಡ ಆಲದಮರ, ಮಂಚನಬೆಲೆ ಮುಂತಾದ ಕಡೆಸಂಪರ್ಕಿಸಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಮಸ್ಯೆಗಳಿದ್ದು ಹಂತ ಹಂತವಾಗಿ ಬಗೆ ಹರಿಸುತ್ತೇನೆ" ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಹುಲುವೇನಹಳ್ಳಿ, ಎಸ್.ಗೊಲ್ಲಹಳ್ಳಿ, ಕುರುಬರಪಾಳ್ಯ, ನಾಗನಾಯಕನಹಳ್ಳಿ, ಅಂಚೆಪಾಳ್ಯ, ಹಳೇಭೈರೋಹಳ್ಳಿ, ಸೂಲಿಕೆರೆ, ಕೆಂಚನಪುರ, ತಾವರೆಕೆರೆ, ಚುಂಚನಗುಪ್ಪೆ, ರಾಮೋಹಳ್ಳಿ, ಚನ್ನೆನಹಳ್ಳಿ, ಹೊನ್ನಿಗನಹಟ್ಟಿ ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್, ಶಾಲಾ ಕಟ್ಟಡ, ರಸ್ತೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವರು ಉದ್ಘಾಟಿಸಿದರು.

English summary
Yeshwanthpur Ward to get face lift soon said Energy Minister Shobha Karandlaje last day(Nov.27). Earlier, She inaugurated various rural development projects such as Tavarekeri Kengeri road development, providing drinking water, 24 hrs power supply in Yeshwanthpur ward
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X