ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಮ್ಯಾಕ್ಸ್ ಆಂಡ್ರ್ಯಾಡ್ ಮಾರುಕಟ್ಟೆಗೆ ಎಂಟ್ರಿ

By Mahesh
|
Google Oneindia Kannada News

Micromax android mobile A60 launch
ನವದೆಹಲಿ, ನ. 28: ಮೈಕ್ರೋಮ್ಯಾಕ್ಸ್ ಮೊಬೈಲ್ ಸಂಸ್ಥೆ ಆಂಡ್ರ್ಯಾಡ್ ಫೋನ್ ಮಾರುಕಟ್ಟೆಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಆಂಡ್ರೋ ಎ60 ಸ್ಮಾರ್ಟ್ ಫೋನ್ ಮೂಲಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್ ಸಂಗ್, ಮೊಟೊರೊಲಾ, ಎಚ್ ಟಿಸಿ ಕಂಪೆನಿಗಳ ಜೊತೆ ನೇರ ಪೈಪೋಟಿಗೆ ಇಳಿದಿದೆ. ಇದಲ್ಲದೆ, ಇನ್ನಷ್ಟು ಹೊಸ ವಿನ್ಯಾಸದ ಮೊಬೈಲ್ ಫೋನ್ ಹ್ಯಾಂಡ್ ಸೆಟ್ ಗಳನ್ನು ಹೊರತಂದು ನೋಕಿಯಾಗೆ ಸ್ಪರ್ಧೆ ಒಡ್ಡಲು ಮೈಕ್ರೋಮ್ಯಾಕ್ಸ್ ಸಿದ್ಧತೆ ನಡೆಸಿದೆ.

ಹೊಸ ಮೈಕ್ರೋ ಮ್ಯಾಕ್ಸ್ ಆಂಡ್ರೋ ಎ60 3ಜಿ ಮೊಬೈಲ್ ನಲ್ಲಿ 2.8 ಇಂಚಿನ ಟಿಎಫ್ ಟಿ ಪೂರ್ತಿ ಟಚ್ ಸ್ಕ್ರೀನ್ ಇದೆ. ಫ್ಲಾಶ್ ಸಹಿತ 3.2 ಮೆಗಾ ಪಿಕ್ಸಲ್ ಕೆಮೆರಾಗೆ ಆಟೋ ಫೋಕಸ್ ಸೌಲಭ್ಯವಿದ್ದು, ಆಕರ್ಷಕವಾಗಿದೆ. ಆಂಡ್ರೋ ಎ60 ಮೊಬೈಲ್ ನಲ್ಲಿ ಆಂಡ್ರ್ಯಾಡ್ 2.1 ಎಕ್ಲೇರ್ ಆಪರೇಟಿಂಗ್ ಸಿಸ್ಟಮ್ ಇದ್ದು 600 MHz ಪ್ರೊಸಸರ್ ಸಾಮರ್ಥ್ಯ ಹೊಂದಿದೆ.

ಉಳಿದಂತೆ ಸ್ಮಾರ್ಟ್ ಫೋನ್ ಗಳಲ್ಲಿರುವಂತೆ ವೈಫೈ, ಬ್ಲೂಟೂಥ್, ಎಫ್ ರೇಡಿಯೋ ಅಲ್ಲದೆ ಜಿಪಿಎಸ್ ಸೌಲಭ್ಯವಿದೆ. ಅಂತರಿಕ ಮೆಮೋರಿ 150 ಎಂಬಿಯಷ್ಟಿದ್ದು, ಮೈಕ್ರೋ SD ಕಾರ್ಡು ಮೂಲಕ 32 ಜಿಬಿ ತನಕ ವಿಸ್ತರಿಸಬಹುದಾಗಿದೆ.

ಮೈಕ್ರೋಮ್ಯಾಕ್ಸ್ ಆಂಡ್ರೋ ಎ60ರ ವಿಶೇಷಗಳು:

* 2.8 ಇಂಚು ಟಿಎಫ್ ಟಿ ಟಚ್ ಸ್ಕ್ರೀನ್
* 3.2 ಮೆಗಾ ಪಿಕ್ಸಲ್ ಆಟೋ ಫೋಕಸ್ ಕೆಮೆರಾ [2584x1938 pixels]
* ಆಂಡ್ರ್ಯಾಡ್ 2.1 ಎಕ್ಲೇರ್ ಆಪರೇಟಿಂಗ್ ಸಿಸ್ಟಮ್
* ವೈಫೈ, ಜಿಪಿ ಆರ್ ಎಸ್, 3ಜಿ
* ಸುಮಾರು 105 ಗ್ರಾಂ ತೂಕ.
* 1280 mAh Li-ion ಬ್ಯಾಟರಿ

ಸದ್ಯಕ್ಕೆ ಕಪ್ಪು ಬಣ್ಣದಲ್ಲಿ ಲಭ್ಯವಿರುವ ಮೈಕ್ರೋಮ್ಯಾಕ್ಸ್ ಆಂಡ್ರೋ ಎ60 ಮೊಬೈಲ್ ಫೋನ್ ನ ಬೆಲೆ 8,000 ರು.

English summary
The new Micromax Smart phone Andro A60 has a 2.8-inch resistive full touch screen and a 3.2 megapixel camera at rear. Andro A60 runs on Android 2.1 Eclair and powered with 600MHz microprocessor. The price of Micromax Andro A60 in India is around Rs 8,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X