ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಂಧತಿ ರಾಯ್, ಗಿಲಾನಿ ವಿರುದ್ಧ ಎಫ್ಐಆರ್?

By Prasad
|
Google Oneindia Kannada News

Arundhati Roy and Geelani
ನವದೆಹಲಿ, ನ. 27 : ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಲೇಖಕಿ ಅರುಂಧತಿ ರಾಯ್, ಹುರಿಯತ್ ನಾಯಕ ಸೈಯದ್ ಅಲಿ ಷಾ ಗಿಲಾನಿ ಮತ್ತು ಇತರ ಐವರ ವಿರುದ್ಧ ಎಫ್ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸುವಂತೆ ದೆಹಲಿ ನ್ಯಾಯಾಲಯ ಆದೇಶಿಸಿದೆ.

ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ವಿವಿಧ ನಿಯಮಗಳಡಿ ಎಫ್ಐಆರ್ ದಾಖಲಿಸಿ ಮುಂದಿನ ವಿಚಾರಣೆ ದಿನಾಂಕ ಜನವರಿ 6, 2011ರಂದು ವರದಿ ನೀಡುವಂತೆ ಪೊಲೀಸರಿಗೆ ದಂಡಾಧಿಕಾರಿ ನವಿತಾ ಕುಮಾರಿ ತಾಕೀತುಪಡಿಸಿದ್ದಾರೆ.

ಗಿಲಾನಿ ವಿರುದ್ಧ ದೇಶದ್ರೋಹ ಎಸಗಿರುವ ಯಾವುದೇ ಆರೋಪ ಇಲ್ಲವೆಂದು ಪೊಲೀಸರು ನೀಡಿದ ವರದಿಯನ್ನು ತಿರಸ್ಕರಿಸಿದ ದಂಡಾಧಿಕಾರಿಗಳು ಗಿಲಾನಿ ದೇಶದ್ರೋಹ ಎಸಗಿರುವುದಕ್ಕೆ ಸಾಕ್ಷ್ಯಗಳಿವೆ. ಮತ್ತೆ ತನಿಖೆ ನಡೆಸಿ ವರದಿ ಸಲ್ಲಿಸಬೇಕೆಂದು ಪೊಲೀಸರನ್ನು ನ್ಯಾಯಾಧೀಶರು ಆಗ್ರಹಿಸಿದರು.

ಕಳೆದ ಅಕ್ಟೋಬರ್ ನಲ್ಲಿ ಶ್ರೀನಗರದಲ್ಲಿ ಅರುಂಧತಿ ಮಾಡಿದ ಭಾಷಣದಲ್ಲಿ, "ಕಾಶ್ಮೀರ ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿರಲೇ ಇಲ್ಲ. ಇದು ಐತಿಹಾಸಿಕ ಸತ್ಯ. ಭಾರತದ ಸರಕಾರವೂ ಈ ಸತ್ಯವನ್ನು ಒಪ್ಪಿಕೊಂಡಿದೆ" ಎಂದು ಪ್ರಚೋದನಕಾರಿ ಹೇಳಿಕೆ ನೀಡಿ ಸರಕಾರ ಮತ್ತು ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

English summary
Delhi metropolitan magistrate has ordered police to file FIR against writer Arundhati Roy and Hurriyat hawk Syed Ali Shah Geelani for sedition speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X