ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಥ್ಲೀಟ್ ಅಶ್ವಿನಿ ಚಿದಾನಂದಗೆ ಏಷ್ಯಾಡ್ ಚಿನ್ನ

By Mahesh
|
Google Oneindia Kannada News

Athlete Ashwini Chidananda wins Asiad gold
ಗಾಂಗ್ಚೊವ್ ನ.26 : ಮಹಿಳೆಯರ ವಿಭಾಗದ 400 ಮೀಟರ್ ಹರ್ಡಲ್ಸ್ ನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಶ್ವಿನಿ ಶೆಟ್ಟಿ ಕಕ್ಕುಂಜೆ (ಅಶ್ವಿನಿ ಚಿದಾನಂದ) ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿದ್ದಾರೆ. ಅಲ್ಲದೆ ಗುರುವಾರ (ನ 25) ನಡೆದ ಕ್ರೀಡೆಯಲ್ಲಿ ಭಾರತೀಯ ಕ್ರೀಡಾಳುಗಳು ಒಟ್ಟು ಮೂರು ಚಿನ್ನದ ಪದಕ ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ದೇಶ ಎಂಟನೆ ಸ್ಥಾನಕ್ಕೆ ಏರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು

ಪುರುಷರ ವಿಭಾಗದ 400 ಮೀಟರ್ ಹರ್ಡಲ್ಸ್ ನಲ್ಲಿ ಜೋಸೆಫ್ ಅಬ್ರಹಾಂ ಮತ್ತು ಬಾಕ್ಶಿಂಗ್ ವಿಭಾಗದಲ್ಲಿ ವಿಕಾಸ್ ಕೃಷನ್ ಕೂಡ ಚಿನ್ನದ ಪದಕ ಬೇಟೆಯಾಡಿದ್ದಾರೆ. ಭಾರತದ ಪುರುಷರ ಹಾಕಿ ತಂಡ ಮತ್ತು ತಿಂಟು ಲೋಕಾ ಕಂಚಿನ ಪದಕ ಗೆದ್ದಿದ್ದಾರೆ. 96 ಕೆ.ಜಿ ವಿಭಾಗದ ಫ್ರೀಸ್ಟೈಲ್ ನಲ್ಲಿ ಮೊವ್ಸಮ್ ಖಾತ್ರಿ ಕಂಚಿನ ಪದಕ ಗೆದ್ದಿದ್ದಾರೆ.

ರಾಜ್ಯದ ಉಡುಪಿ ಜಿಲ್ಲೆ ಕುಂದಾಪುರದ ತಾಲೂಕಿನ ಸಿದ್ದಾಪುರ ಗ್ರಾಮದ ಚಿದಾನದ ಶೆಟ್ಟಿ ಮತ್ತು ಯಶೋಧ ಶೆಟ್ಟಿಯವರ ಪುತ್ರಿಯಾಗಿರುವ ಅಶ್ವಿನಿ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದಾರೆ. ಒಟ್ಟು 10 ಚಿನ್ನ, 14 ಬೆಳ್ಳಿ ಮತ್ತು 29 ಕಂಚಿನ ಪದಕದೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಸದ್ಯ ಎಂಟನೆ ಸ್ಥಾನಕ್ಕೇರಿದೆ.

English summary
Indian athletes Aswini chidananda akkunji and Joseph Abraham won gold in women"s and men"s 400 metre hurdles last day in Asian Games 2010. Later boxer Vikas Krishan won the boxing gold in lightweight division final. With this third gold india moved further from 9th position to 8th position in 16th Asaid medal tally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X