ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಅಶ್ಲೀಲ ವೆಬ್‌ಸೈಟ್ ಗಳು ಸ್ಥಗಿತ

By Mahesh
|
Google Oneindia Kannada News

China bans Porn Websites
ಬೀಜಿಂಗ್, ನ.25: ಅಶ್ಲೀಲ ವೆಬ್‌ತಾಣಗಳಿಂದ ವೆಬ್ ಪ್ರಪಂಚವನ್ನು ಮುಕ್ತಗೊಳಿಸಿ ಶುದ್ಧೀಕರಿಸುವ ಕಾರ್ಯವನ್ನು ಚೀನಾ ಸರ್ಕಾರ ಮಾಡಿದೆ. ಪೊರ್ನ್ ಸೈಟ್ ಗಳಿಗೆ ಅಲ್ಲಿನ ಸರ್ಕಾರ 2009ರಿಂದ ನಿಷೇಧ ಹೇರಿದ್ದು, ಈವರೆಗೆ ಇಂಥ 60,000 ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸಿದೆ. ಸುಮಾರು 421 ಮಿಲಿಯನ್ ಗೂ ಅಧಿಕ ಇಂಟರ್ ನೆಟ್ ಬಳಕೆದಾರರನ್ನು ಹೊಂದಿರುವ ಚೀನಾ,

ಆಶ್ಲೀಲ ವೆಬ್‌ಸೈಟ್‌ಗಳು ಹಾಗೂ ಕಾನೂನು ಬಾಹಿರ ಪ್ರಕಟಣೆಗಳನ್ನು ನಿಯಂತ್ರಿಸುವ ರಾಷ್ಟ್ರೀಯ ಸಂಘಟನೆ 17 ಲಕ್ಷ ವೆಬ್‌ತಾಣಗಳನ್ನು ಪರಿಶೀಲಿಸಿ ನಿಯಂತ್ರಣಕ್ಕೆ ಒಳಪಡಿಸಿದೆ. ಸುಮಾರು 2,197ಕ್ಕೂ ಹೆಚ್ಚು ಸೈಬರ್ ಕಾನೂನು ಮೀರಿದ ಪ್ರಕರಣಗಳನ್ನು ಈ ಅವಧಿಯಲ್ಲಿ ಪರಿಶೀಲಿಸಲಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಒಂದು ಹಂತಕ್ಕೆ ಯಶ ಸಾಧಿಸಲಾಗಿದೆ ಎಂದು ಪೊರ್ನ್ಸ್ ನಿಯಂತ್ರಣ ಸಂಸ್ಥೆ ಹೇಳಿದೆ. ಸುಮಾರು

ಇದಕ್ಕೆ ಸಾರ್ವಜನಿಕರ ಸಹಕಾರ ಕೂಡಾ ದೊಡ್ಡದು ಸುಮಾರು 1,60,000ಕ್ಕೂ ಅಧಿಕ ಗೌಪ್ಯ ಮಾಹಿತಿಯನ್ನು ಸಂಗ್ರಹಿಸಿ, ಕಾನೂನು ಬದ್ಧಗೊಳಿಸುವಲ್ಲಿ ಸಾರ್ವಜನಿಕರ ಸಹಾಯ ಬಹಳಷ್ಟು ಉಪಯೋಗಕ್ಕೆ ಬಂದಿದೆ. ಇದರಿಂದಾಗಿ ಪೊರ್ನ್ ಸೈಟ್ ಗಳನನ್ನು ನಾಶ ಮಾಡಿ, ಇಂಟರ್ ನೆಟ್ ಅನ್ನು ಇನ್ನಷ್ಟು ಪರಿಶುದ್ಧಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

English summary
In an effort to curb spread of Pornography in China National Office Against Pornographic and Illegal Publications has checked Nearly 1.785 million websites and more than 60,000 pornographic websites have been shut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X