ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಫಲಿತಾಂಶ : ಜೆಡಿಯುಗೆ ಸ್ಪಷ್ಟ ಬಹುಮತ

By Mrutyunjaya Kalmat
|
Google Oneindia Kannada News

JD(U)-BJP take huge lead in bihar polls
ಪಾಟ್ನಾ, ನ. 24 : ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಜೆಡಿಯು ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಕಿದ್ದು, ಲಾಲು ಪ್ರಸಾದ್ ಯಾದವ್ ಅವರ ಆರ್ ಜೆಡಿ ಹಾಗೂ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. 162 ಕ್ಷೇತ್ರ ಗೆಲುವು ಸಾಧಿಸಿರುವ ಜೆಡಿಯು, 37 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆರ್ ಜೆಡಿ 14 ಕ್ಷೇತ್ರದಲ್ಲಿ ಗೆಲುವು,18 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 2 ಕ್ಷೇತ್ರದಲ್ಲಿ ಮಾತ್ರ ಗೆಲುವು ಮತ್ತು 3 ರಲ್ಲಿ ಮುನ್ನಡೆ ಕಾಪಾಡಿಕೊಂಡಿದೆ.

ಬಿಹಾರ ವಿಧಾನಸಭೆಯ ಚುನಾವಣೆ ಫಲಿತಾಂಶ ಹೊರಬೀಳತೊಡಗಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತರೂಢ ಜೆಡಿಯು-ಬಿಜೆಪಿ ಭಾರಿ ಬಹುಮತದತ್ತ ಸಾಗಿದೆ. ಇದರೊಂದಿಗೆ ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ತೀವ್ರ ಮುಖಭಂಗ ಅನುಭವಿಸುವಂತಾಗಿದೆ.

ನಿತೀಶ್ ಕುಮಾರ್ ಅವರ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರಿ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ನಿತೀಶ್ ಕುಮಾರ್ ಸಂಪುಟದಲ್ಲಿರುವ ಎಲ್ಲ ಸಚಿವರು ತಮ್ಮ ಪ್ರತಿಸ್ಪರ್ಧಿಗಿಂತ ಭಾರಿ ಮುನ್ನಡೆ ಗಳಿಸಿದ್ದು, ಗೆಲುವು ಬಹುತೇಕ ಖಚಿತ ಎಂದು ಜೆಡಿಯು ತಿಳಿಸಿದೆ. ಇತ್ತೀಚಿನ ಮಾಹಿತಿ ಬಂದಾಗ ಬಿಹಾರದ 245 ವಿಧಾನಸಭೆ ಸದಸ್ಯತ್ವ ಸ್ಥಾನದಲ್ಲಿ ಜೆಡಿಯು 175, ಲಾಲು ನೇತೃತ್ವದ ಆರ್ ಜೆಡಿ ಕೇವಲ 39 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.

English summary
Nitish Kumar led JD(U)-BJP alliance is all set to storm back to power in Bihar and has taken a massive lead over the RJD-LJP combine in Bihar Assembly polls 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X