ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಡೋಮ್ ಬಳಕೆ ಪೋಪ್ ಸಮರ್ಥನೆ!

By Mahesh
|
Google Oneindia Kannada News

Pope comment on Condoms
ವ್ಯಾಟಿಕನ್‌ ಸಿಟಿ, ನ.23 : ಎಚ್‌ಐವಿ(ಏಡ್ಸ್) ಹರಡುವಿಕೆಯನ್ನು ತಡೆಯಲು ಬಯಸುವ ಪುರುಷ ವ್ಯಭಿಚಾರಿಗಳು ಕೆಲವೊಂದು ಸಂದರ್ಭಗಳಲ್ಲಿ ಕಾಂಡೊಮ್‌ ಬಳಸುವುದು ಸಮರ್ಥನೀಯ ಎಂದು 16ನೇ ಪೋಪ್‌ ಬೆನೆಡಿಕ್ಟ್ ಅವರು ತಮ್ಮ ನೂತನ ಪುಸ್ತಕದಲ್ಲಿ ಹೇಳಿದ್ದಾರೆ. ಅನಾದಿ ಕಾಲದಿಂದಲೂ ಚರ್ಚ್ ನಲ್ಲಿ ನಡೆದುಕೊಂಡು ಬಂದಿರುವ ಕೆಲ ರೀತು ರಿವಾಜುಗಳನ್ನು ದಿಟ್ಟವಾಗಿ ಖಂಡಿಸಿರುವ ಪೋಪ್ ವಿರುದ್ಧ ಈಗಾಗಲೇ ಪರ ವಿರೋಧ ಚರ್ಚೆಗಳು ಸಾಕಷ್ಟು ಕೇಳಿಬರುತ್ತಿವೆ.

ಕೃತಕ ಗರ್ಭಧಾರಣೆಗೆ ಪುರುಷ ವ್ಯಭಿಚಾರಿಗಳು ಸಾಧನವಾಗುತ್ತಿರುವುದು ಹಾಗೂ ಕಾಂಡೋಮ್ ಬಳಕೆ ವಿರುದ್ಧ ರೋಮನ್ ಕ್ಯಾಥೋಲಿಕ್ ಚರ್ಚ್ ಹಲವು ಬಾರಿ ವಿರೋಧ ವ್ಯಕ್ತಪಡಿಸಿತ್ತು.ಗರ್ಭಧಾರಣೆ ಪ್ರಮುಖ ವಿಷಯವಾಗಿ ಪರಿಗಣಿಸದ ಪುರುಷ ವ್ಯಭಿಚಾರಿಗಳಿಗೆ ಕಾಂಡೊಮ್‌ ನೈತಿಕ ಪರಿಹಾರವಲ್ಲ. ಆದರೆ, ಸೋಂಕು ಹರಡುವಿಕೆ ಅಪಾಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅದರ ಬಳಕೆ ಸಮರ್ಥನೀಯ ಎಂದು ಪೋಪ್ ಬೆನೆಡಿಕ್ಟ್ ತಿಳಿಸಿದ್ದಾರೆ.

2009ರಲ್ಲಿ ಆಫ್ರಿಕಾ ಭೇಟಿ ವೇಳೆ, ಏಡ್ಸ್‌ ಸಮಸ್ಯೆಗೆ ಕಾಂಡೊಮ್‌ ಪರಿಹಾರವಲ್ಲ. ಆದರೆ ಅದು ಪ್ರತಿಕೂಲ ಸ್ಥಿತಿಯನ್ನು ಹೆಚ್ಚಿಸುತ್ತದೆ ಎಂಬ ಬೆನೆಡಿಕ್ಟ್ ಹೇಳಿಕೆಗೆ ಯೂರೋಪಿಯನ್‌ ದೇಶಗಳು ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ವಿಜ್ಞಾನಿಗಳಿಂದ ತೀವ್ರ ವಿರೋಧ ವ್ಯಕ್ತಗೊಂಡಿತ್ತು. ಈ ಹೇಳಿಕೆಗೆ ವಿಶ್ವಸಂಸ್ಥೆಯಿಂದಲೂ ಟೀಕೆ ವ್ಯಕ್ತಗೊಂಡಿತ್ತು.

ಬದಲಾದ ನಿಲುವು :
'ಲೈಟ್‌ ಆಫ್‌ ದಿ ವರ್ಲ್ಡ್' ದಿ ಪೋಪ್‌, ದಿ ಚರ್ಚ್‌ ಆಂಡ್‌ ದಿ ಸೈನ್ಸ್‌ ಆಫ್‌ ದಿ ಟೈಮ್ಸ್‌' ಪುಸ್ತಕದಲ್ಲಿ ಜರ್ಮನ್‌ ಪತ್ರಕರ್ತನಿಗೆ ನೀಡಿದ ಸುದೀರ್ಘ‌ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ ನಂತರ ವಿಶ್ವಸಂಸ್ಥೆ ಸೇರಿದಂತೆ ಹಲವಾರು ಸಂಘಟನೆಗಳು ಸ್ವಾಗತಿಸಿದ್ದು, ಏಡ್ಸ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಲಿದೆ ಎಂದು ಹೇಳಿವೆ.

English summary
Pope Benedict XVI frank comment on condoms raising hopes the roman catholic church may start rethink on complete ban and allow condoms usage to battle against AIDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X