ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗಾಯತ ನಾಯಕನಿಗೆ ಬ್ರಾಹ್ಮಣ ಸ್ವಾಮೀಜಿ ಬೆಂಬಲ

By Mrutyunjaya Kalmat
|
Google Oneindia Kannada News

Vishweshatirtha Swamiji
ಬೆಂಗಳೂರು, ನ. 22 : ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಆರೋಪ ಬಂದ ಮಾತ್ರಕ್ಕೆ ಆಪರಾಧಿ ಎಂದು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ತಪ್ಪು. ಇದರ ಬಗ್ಗೆ ಬಿಜೆಪಿ ಹೈಕಮಾಂಡ್ ಕೂಲಂಕಷ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿರುವುದು ರಾಜೀನಾಮೆ ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

ಟಿವಿ9 ಗೆ ಸಂದರ್ಶನ ನೀಡಿದ ಶ್ರೀಗಳು, ಯಡಿಯೂರಪ್ಪ ಅವರ ಮೇಲೆ ಬಂದಿರುವುದು ಕೇವಲ ಆರೋಪ. ಅರೋಪಕ್ಕೆ ರಾಜೀನಾಮೆ ಪಡೆಯುವುದು ಸಮಂಜಸವಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಯಡಿಯೂರಪ್ಪ ತಪ್ಪು ಮಾಡಿದ್ದರೆ ಶಿಕ್ಷೆ ನೀಡಲೇಬೇಕು. ಆರೋಪ ಸಾಬೀತಾಗದೆ ರಾಜೀನಾಮೆ ಪಡೆಯುವುದು ಸರಿಯಲ್ಲ ಎಂದು ಶ್ರೀಗಳು ವಿವರಿಸಿದ್ದಾರೆ.

ಸ್ವಾಮೀಜಿಗಳು ರಾಜಕಾರಣ ಮಾಡಬಾರದು. ರಾಜಕೀಯ ನಾಯಕರಂತೆ ಮಾತನಾಡುವುದು ಸಲ್ಲ. ಮಾಧ್ಯಮಗೋಷ್ಠಿ ನಡೆಸಿ ಯಡಿಯೂರಪ್ಪ ಸಮರ್ಥಿಸಿಕೊಳ್ಳುವುದು ಸ್ವಾಮೀಜಿಗಳಿಗೆ ಹೇಳಿ ಮಾಡಿಸಿದ್ದಲ್ಲ ಎಂದು ದಯಾನಂದ ಸ್ವಾಮೀಜಿಗಳು ಕಿವಿಮಾತು ಹೇಳಿದರು.

ರಂಭಾಪುರ ಶ್ರೀಗಳು : ರಂಭಾಪುರ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಕೂಡಾ ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಆರೋಪ ಬಂದಾಕ್ಷಣ ರಾಜೀನಾಮೆ ಪಡೆಯುವುದು ಸರಿಯಲ್ಲ. ಭಾಗ್ಯಲಕ್ಷ್ಮಿ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲವರ ಕುತಂತ್ರದಿಂದಾಗಿ ಅವರ ರಾಜೀನಾಮೆ ಪಡೆಯುವುದು ಎಷ್ಟು ಸರಿ. ಇದರ ಬಗ್ಗೆ ಹೈಕಮಾಂಡ್ ಕೂಲಂಕಷ ಚರ್ಚೆ ನಡೆಸಬೇಕು ಎಂದು ಶ್ರೀಗಳು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X