• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಎಸ್ ಸಿಎ : ಕುಂಬ್ಳೆ ಒಡೆಯರ್ ನಡುವೆ ಕುಸ್ತಿ

By Mrutyunjaya Kalmat
|

ಬೆಂಗಳೂರು, ನ. 21 : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಈ ಬಾರಿ ನಡೆಯುತ್ತಿರುವ ಚುನಾವಣೆ ಮೇಲೆ ಕೇವಲ ರಾಜ್ಯದ ದೃಷ್ಟಿಯಷ್ಟೇ ನೆಟ್ಟಿಲ್ಲ, ಬದಲಾಗಿ ಇಡಿ ದೇಶದ ಗಮನವೇ ಇಲ್ಲಿ ಕೇಂದ್ರೀಕೃತವಾಗಿದೆ. ಇದಕ್ಕೆ ಕಾರಣ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಮೈ ನಡುಗಿಸಿದ್ದ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಚುನಾವಣೆಗೆ ಸ್ಪಧಿಸಿರುವುದು.

ಭಾನುವಾರ ಹೊಸ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಎರಡು ಬಣಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಅನಿಲ್ ಕುಂಬ್ಳೆ ಬಣ ಒಂದೆಡೆಯಾದರೆ, ಹಾಲಿ ಅಧ್ಯಕ್ಷ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಣ ಮತ್ತೊಂದೆಡೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕುಂಬ್ಳೆ ಪಾಲಿಗೆ ಒಡೆಯರ್ ಅತ್ಯಂತ ಕಠಿಣ ಎದುರಾಳಿಯೇ ಅಗಿದ್ದಾರೆ.

ಈಗಾಗಲೇ ಒಂದು ಅವಧಿ ಪೂರೈಸಿರುವ ಒಡೆಯರ್, ಮಗದೊಮ್ಮೆ ಆಯ್ಕೆ ಬಯಸಿ ಅಧ್ಯಕ್ಷ ಗಾದಿಗೆ ಸ್ಪರ್ಧೆಗಿಳಿದಿದ್ದಾರೆ. ಹೀಗಾಗಿ ಅಧ್ಯಕ್ಷ ಗಾದಿಗೆ ಕುಂಬ್ಳೆ ಮತ್ತು ಒಡೆಯರ್ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದ್ದು ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ. ಉಳಿದಂತೆ ಕಾರ್ಯದರ್ಶಿ ಸ್ಥಾನಕ್ಕೆ ಭಾರತ ತಂಡದ ಮತ್ತೊಬ್ಬ ಮಾಜಿ ಆಟಗಾರ, ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್, ಕುಂಬ್ಳೆ ಬಣದಿಂದ ನಿಂತಿದ್ದಾರೆ. ಇವರಿಗೆ ಪ್ರತಿಸ್ಪಧಿಯಾಗಿರುವುದು ಒಡೆಯರ್ ಬಣದ ಎ.ವಿ. ಜಯಪ್ರಕಾಶ್.

ಜಯಪ್ರಕಾಶ್ ಕೂಡ ಅಂತಾರಾಷ್ಟ್ರೀಯ ಅಂಪೈರ್ ಅಗಿ ಸೇವೆ ಸಲ್ಲಿಸಿದ ಅನುಭವಿ. ಹೀಗಾಗಿ ಈ ಇಬ್ಬರ ಮಧ್ಯೆಯೂ ಕಾರ್ಯದರ್ಶಿ ಸ್ಥಾನಕ್ಕೆ ಉತ್ತಮ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಉಳಿದಂತೆ ಭಾರತ ತಂಡದ ಮಾಜಿ ಆಟಗಾರರಾದ ರೋಜರ್ ಬಿನ್ನಿ, ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್ ಮತ್ತು ಸುಜಿತ್ ಸೋಮ್ ಸುಂದರ್ ಸಹ ಕುಂಬ್ಳೆ ಬಣದಿಂದ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ.

ಅದೇ ರೀತಿ ಮತ್ತೊಬ್ಬ ಮಾಜಿ ಆಟಗಾರ ಸಂಜಯ್ ದೇಸಾಯಿ ಅಲ್ಲದೇ ಡಾ. ಎಸ್. ಕೃಷ್ಣಮೂರ್ತಿ, ಎ.ಪಿ. ಆಚಾರ್ಯ ಒಡೆಯರ್ ಬಣದಲ್ಲಿನ ಇತರೆ ಪ್ರಮುಖರು. ಒಡೆಯರ್ ತಮ್ಮ ಮೂರು ವರ್ಷಗಳ ಮೊದಲ ಅವಧಿಯಲ್ಲಿನ ಸಾಧನೆಗಳನ್ನೇ ಮುಂದಿಟ್ಟುಕೊಂಡು ಚುನಾವಣಾ ಅಖಾಡದಲ್ಲಿ ನಿಂತಿದ್ದರೆ, ಕೆಎಸ್‌ಸಿಎಯನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ಯುವ ಗುರಿಯೊಂದಿಗೆ ಕುಂಬ್ಳೆ ಮತದಾರರ ಬಳಿ ಬಂದಿದ್ದಾರೆ.

ಒಟ್ಟು 24 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಆದರೆ ಈಗಾಗಲೇ ಮಂಗಳೂರು ವಲಯದಿಂದ ದಕ್ಷಿಣ ಕನ್ನಡ ಕ್ರಿಕೆಟ್ ಸಂಸ್ಥೆ ಅವಿರೋಧವಾಗಿ ಆಯ್ಕೆಗೊಂಡಿದೆ. ಹಾಗಾಗಿ ನಾಳೆ ಉಳಿದ 23 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಒಟ್ಟು 1489 ಮತದಾರರು ಮತ ಚಲಾಯಿಸಲಿದ್ದಾರೆ. ಈ ಪೈಕಿ ಆಜೀವ ಸದಸ್ಯರು 1260 ಮಂದಿ ಇದ್ದರೆ, 229 ಕ್ಲಬ್ ಪ್ರತಿನಿಧಿಗಳು ಮತ ಚಲಾವಣೆ ಮಾಡಲಿದ್ದಾರೆ.

English summary
A total of 1480 voters, including 229 clubs, will decide the fate of Anil Kumble and Srikantadatta Narasimharaja Wadiyar groups, who are contesting Sunday’s elections to gain control of the Karnataka State Cricket Association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X