ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿರಾ ಶತಮಾನದ ಪ್ರಭಾವಿ ಮಹಿಳೆ

By Mrutyunjaya Kalmat
|
Google Oneindia Kannada News

Indira Gandhi
ವಾಷಿಂಗ್ ಟನ್, ನ. 21 : ಟೈಮ್ ನಿಯತಕಾಲಿಕ ಗುರುತಿಸಿರುವ ಕಳೆದ ಶತಮಾನದ 25 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ದೀರ್ಘಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಇಂದಿರಾಗಾಂಧಿ 9ನೇ ಸ್ಥಾನ ಪಡೆದಿದ್ದಾರೆ. ಈ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಮದರ್ ತೆರೇಸಾ ಅವರ ಹೆಸರೂ ಸೇರಿದೆ.

ಮಹಿಳೆಯರ ಮತದಾನದ ಹಕ್ಕಿಗಾಗಿ ಹೋರಾಡಿದ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಅಮೆರಿಕದ ಮಹಿಳೆ ಜಾನ್ ಆಡಮ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಹಿಲರಿ ಕ್ಲಿಂಟನ್ ಅವರ ಹೆಸರು ಆರನೇ ಸ್ಥಾನದಲ್ಲಿದೆ. 22ನೇ ಸ್ಥಾನ ಪಡೆದ ತೆರೇಸಾ ಹಾಗೂ 9ನೇ ಸ್ಥಾನ ಪಡೆದ ಇಂದಿರಾಗಾಂಧಿಯ ಹೊರತಾಗಿ ದೇಶದ ಯಾವ ಮಹಿಳೆಯರೂ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ಇಂದಿರಾ ಪ್ರಧಾನಿಯಾದಾಗ ಟೈಮ್ 'ಸಂಕಷ್ಟದಲ್ಲಿರುವ ದೇಶ ಮಹಿಳೆಯ ಕೈಗೆ" ಎಂದು ಉಲ್ಲೇಖಿಸಿತ್ತು ಎಂಬುದಾಗಿ ಟೈಮ್ ನಿಯತಕಾಲಿಕ ತಿಳಿಸಿದೆ. ಇಂದಿರಾ ಯಾವುದೇ ಸಂದಿಗ್ಧ ಸನ್ನಿವೇಶದಲ್ಲೂ ದೇಶವನ್ನು ದೃಢವಾಗಿ ಮುನ್ನಡೆಸುವ ಛಾತಿ ಹೊಂದಿದ್ದರು. ಪಾಕ್ ಜತೆಗಿನ ಯುದ್ಧ, ಭ್ರಷ್ಟಾಚಾರ, ಬಾಂಗ್ಲಾದೇಶದ ಉದಯ ಸಂದರ್ಭಗಳಲ್ಲಿ ಯಾವುದೇ ವಿವಾದಗಳಿಗೆ ಆಸ್ಪದ ನೀಡದೆ ಇಂದಿರಾಗಾಂಧಿ ಕೈಗೊಂಡ ದೃಢ ನಿಲುವುಗಳಿಗೆ ಟೈಮ್ ನಿಯತಕಾಲಿಕ ಪ್ರಶಂಸೆ ವ್ಯಕ್ತಪಡಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X