ಸೆಕ್ಸ್ ಜಾಲದಲ್ಲಿ ಸಿಕ್ಕಿಬಿದ್ದ ಬೆಂಗಳೂರು ಟೆಕ್ಕಿ
ಖಚಿತ ಸುಳಿವಿನ ಮೇರೆಗೆ ಮಹಾರಾಜಾ ಜಂಕ್ಷನ್ ಬಳಿಯಿರುವ ಎಲೈಟ್ ಹೊಟೇಲ್ ಮೇಲೆ ದಾಳಿ ಮಾಡಿದ ಕೋರಮಂಗಲ ಪೊಲೀಸರು ಸಾಫ್ಟ್ ವೇರ್ ಇಂಜಿನಿಯರ್ ವಿಜಯ್ ಕುಮಾರ್, 22 ವರ್ಷದ ವೇಶ್ಯೆ ರಿಯಾ ಮತ್ತು ರೂಂ ಬಾಯ್ ಲಾರೆಲ್ ಎಂಬಾತನನ್ನು ಬಂಧಿಸಿದ್ದಾರೆ.
ವಿಚಾರಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಈ ದಂಧೆಯಲ್ಲಿ ಭಾಗಿಯಾಗಿದ್ದನ್ನು ವಿಜಯ್ ಕುಮಾರ್ ಒಪ್ಪಿಕೊಂಡಿದ್ದಾನೆ. ಆತ ಇಂಟರ್ನೆಟ್ ಮೂಲಕ ಮುಂಬೈನ 'ಪಿಂಪ್' ಕಲ್ಪನಾ ಎಂಬಾಕೆಯನ್ನು ಸಂಪರ್ಕಿಸಿ ಇತರ ರಾಜ್ಯಗಳ ಮತ್ತು ಕೆಲ ಬಾರಿ ಇತರ ದೇಶಗಳ ವೇಶ್ಯೆಯರನ್ನು ಬೆಂಗಳೂರಿಗೆ ಕರೆಸಿಕೊಳ್ಳುತ್ತಿದ್ದ. ವಿಜಯ್ ಅಣತಿಯಂತೆ ರಿಯಾಳನ್ನು ಬೆಂಗಳೂರಿಗೆ ರವಾನಿಸಿದ್ದ ಕಲ್ಪನಾ ಎಲೈಟ್ ರೂಮನ್ನು ಬುಕ್ ಮಾಡಿದ್ದಳು.
ಪೊಲೀಸರ ಪ್ರಕಾರ, ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರುಗಳೇ ಪಿಂಪ್ ಗಳ ಸಾಫ್ಟ್ ಟಾರ್ಗೆಟ್ ಆಗುತ್ತಿದ್ದು, ಇಂಥ ಜಾಲದಲ್ಲಿ ಬೀಳುತ್ತಿದ್ದಾರೆ. ಇಂಥವರ ಸಂಗದಿಂದ ವೇಶ್ಯೆಯರು ಏನಿಲ್ಲೆಂದರೂ ದಿನಕ್ಕೆ ಕನಿಷ್ಠ 1 ಲಕ್ಷ ರು. ಗಳಿಸುತ್ತಿದ್ದಾರೆ. ಆನ್ ಲೈನ್ ಸೆಕ್ಸ್ ಜಾಲ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದ್ದು ಕಳೆದ ಕೆಲ ತಿಂಗಳುಗಳಿಂದ ಇಂಥ ಜಾಲ ಭೇದಿಸಲು ಯತ್ನ ನಡೆಸುತ್ತಿದ್ದೆವು ಎಂದು ಪೊಲೀಸರು ತಿಳಿಸಿದ್ದಾರೆ.