ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಕಾರ್ಗಿಲ್ ವೀರರ ಹೆಸರು ವೆಬ್ ಸೈಟ್ ನಲ್ಲಿ

By Mrutyunjaya Kalmat
|
Google Oneindia Kannada News

Pakistan Flag
ಇಸ್ಲಾಮಾಬಾದ್, ನ. 19 : ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರ ಇಲ್ಲವೆಂದು ಇದುವರೆಗೆ ವಾದಿಸಿಕೊಂಡು ಬಂದಿದ್ದ ಪಾಕಿಸ್ತಾನ, ಕದನದಲ್ಲಿ ಮೃತಪಟ್ಟ 453 ಸೈನಿಕರು ಹಾಗೂ ಅಧಿಕಾರಿಗಳ ಹೆಸರನ್ನು ತನ್ನ ವೆಬ್‌ಸೈಟ್‌ನಲ್ಲಿ ರಹಸ್ಯವಾಗಿ ಪ್ರಕಟಿಸಿದೆ.

1999ರಲ್ಲಿ ನಡೆದ ಕಾರ್ಗಿಲ್ ಕದನದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಟಾಲಿಕ್-ಕಾರ್ಗಿಲ್ ವಲಯ ದಲ್ಲಿ ಹತರಾದ 453 ಸೈನಿಕರನ್ನು ವೆಬ್‌ಸೈಟ್‌ನಲ್ಲಿ ತೋರಿಸಲಾಗಿದೆ. ವೆಬ್‌ ಸೈಟ್‌ನ ಮೊದಲ ಪುಟದಲ್ಲಿ ಹುತಾತ್ಮರಾದವರ ಉದ್ದನೆಯ ಪಟ್ಟಿಯಿದ್ದು ಅದರಲ್ಲಿ ಕ್ಯಾ.ಕರ್ನಲ್ ಶೇರ್ ಮತ್ತು ಹವಾಲ್ದಾರ್ ಲಾಲಕ್ ಜಾನ್ ಹೆಸರು ಸಹ ಇದೆ.

ಇವರಿಬ್ಬರು ಕಾರ್ಗಿಲ್‌ನಲ್ಲಿ 1999 ಜುಲೈ 7ರಂದು ಹತರಾಗಿದ್ದರು. ಇವರಿಬ್ಬರಿಗೆ ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿಯಾದ ನಿಶಾನ್ ಇ ಹೈದರ್ ಅನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಕಡೆಯ ಪರ್ವತ ಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ನಡೆಸಿದ ಕಾರ್ಯಾಚರಣೆಗೆ ನೀಡಿದ್ದ ಕೋಡ್‌ನೇಮ್‌ಗಳನ್ನು ಸಹ ಪಾಕ್ ಸೇನೆ ಬಹಿರಂಗಪಡಿಸಿದೆ.

ಭಾರತೀಯ ಸೇನೆ ಹಲವಾರು ಪಾಕ್ ಸೈನಿಕರನ್ನು ಸೆರೆ ಹಿಡಿಯುವವರೆಗೂ ಕಾರ್ಗಿಲ್ ಯುದ್ಧದ ಕಾರ್ಯಾಚರಣೆಯಲ್ಲಿ ತಮ್ಮ ಸೈನಿಕರು ಭಾಗಿಯಾಗಿಲ್ಲ ಎಂದೇ ಪಾಕ್ ವಾದಿಸಿಕೊಂಡು ಬಂದಿತ್ತು. 2006ರಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ತಮ್ಮ ಜೀವನ ಚರಿತ್ರೆ ಇನ್ ದಿ ಲೈನ್ ಆಫ್ ಫೈರ್ ನಲ್ಲಿ ಕಾರ್ಗಿಲ್ ಯುದ್ಧದಲ್ಲಿ ತಮ್ಮ ಸೈನಿಕರು ಭಾಗಿಯಾಗಿದ್ದನ್ನು ಮೊಟ್ಟ ಮೊದಲ ಬಾರಿಗೆ ಅಧಿಕೃತವಾಗಿ ಬಹಿರಂಗಪಡಿಸಿದರು.

ಯುದ್ಧದಲ್ಲಿ 257 ಪಾಕ್ ಸೈನಿಕರು ಮೃತಪಟ್ಟಿದ್ದು, 660ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ, ರಾಜಕೀಯ ಪಕ್ಷಗಳು ಸಾವಿರಾರು ಸೈನಿಕರು ಮೃತಪಟ್ಟಿರುವುದಾಗಿ ಹೇಳುತ್ತಿವೆ ಎಂದು ಮುಷರ್ರಫ್ ಪುಸ್ತಕದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X