ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರ ಅಕ್ಕಿ ಕದಿಯುವ ಕಳ್ಳರ ಮೇಲೆ ಡಿಸಿ ದಾಳಿ

By Mahesh
|
Google Oneindia Kannada News

Illegal storage of rice, DC raid
ಹುಬ್ಬಳ್ಳಿ, ನ.19: ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿ ಹಾಗೂ ಗೋಧಿಯನ್ನು ಅಕ್ರಮವಾಗಿ ಸಂಗ್ರಹಿಸಿ, ದಾಸ್ತಾನು ಮಾಡಿ ಸ್ವಸ್ತಿಕ್ ಹೆಸರಿನಲ್ಲಿ ವಿವಿಧೆಡೆ ಮಾರಾಟಕ್ಕೆ ಸಾಗಿಸುತ್ತಿದ್ದ ನಗರದ ಒಂದು ಗೋದಾಮಿನ ಮೇಲೆ ಜಿಲ್ಲಾಧಿಕಾರಿ ದರ್ಪಣ ಜೈನ್ ಗುರುವಾರ ದಾಳಿ ನಡೆಸಿದ್ದಾರೆ. ಒಟ್ಟು 3675 ಅಕ್ಕಿ ಹಾಗೂ 532 ಗೋಧಿ ಚೀಲಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಸುಮಾರು 20 ಲಕ್ಷ ರು ಎಂದು ಅಂದಾಜಿಸಲಾಗಿದೆ.

ಬಂಕಾಪುರ ಚೌಕ ಹತ್ತಿರವಿರುವ ಮಂಜುನಾಥ ಹರ್ಲಾಪುರ ಎಂಬವರಿಗೆ ಸೇರಿದ ರಾಚೋಟೇಶ್ವರ ಟ್ರೇಡರ್ಸ್ ಗೋದಾಮಿನ ಮೇಲೆ ಈ ದಾಳಿ ನಡೆದಿದೆ. ರಾಚೋಟೇಶ್ವರ ಟ್ರೇಡರ್ಸ್ ಗೋದಾಮಿಗೆ ಗವರ್ನ್‌ಮೆಂಟ್ ಆಫ್ ಪಂಜಾಬ್ ಎಂಬ ಹೆಸರಿನ ಚೀಲಗಳಲ್ಲಿ ಅಕ್ಕಿ, ಗೋಧಿಯನ್ನು ತುಂಬಿ ವಿವಿಧೆಡೆ ಕಳಿಸಲಾಗುತ್ತಿತ್ತು. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜೈನ್ ತಿಳಿಸಿದರು.

50 ಕಿಲೋ ತೂಕದ ಅಕ್ಕಿ ಚೀಲಗಳನ್ನು ಮಂಗಳೂರಿಗೆ ಸಾಗಿಸಲು ಹೊರಟ್ಟಿದ್ದ ಲಾರಿಯೊಂದನ್ನು ವಶಪಡಿಸಿಕೊಂಡು, ಚಾಲಕ ಅಬ್ದುಲ್ ಕರೀಂ ಶೇಖ್‌ನನ್ನು ಬಂಧಿಸಲಾಗಿದೆ ಎಂದರು. ದಾಳಿಯ ಸಂದರ್ಭದಲ್ಲಿ ತಹಸೀಲ್ದಾರ್ ಎಸ್.ಎಸ್. ಬಿರಾದಾರ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಹಾಜರಿದ್ದರು.

English summary
Hubli Dharwad DC Darpan Jain along with food and civil supplies authorities and police, raided Rachoteshwara traders godown belonging to Manjunath Harlapur lastday. and seized 3,675 bags of rice and 532 bags of wheat which were illegally stored.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X