ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹು ಮಹಡಿ ಕಟ್ಟಡಗಳಿಗೆ ಜಿಂದಾಲ್ ಸ್ಟೀಲ್!

By Mahesh
|
Google Oneindia Kannada News

JSSL to expand Bellary unit
ಬಳ್ಳಾರಿ, ನ.18: ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್(JSW Steel, Mumbai) ಹಾಗೂ ಯುನೈಟೆಡ್ ಕಿಂಗ್‌ಡಂನ ಸೀವರ್‌ಫೀಲ್ಡ್ ರೀವ್ ಸ್ಟ್ರಕ್ಚರ್ಸ್ ಕಂಪೆನಿ(Severfield Reeve Structures)ಗಳ ಸಹಯೋಗದಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಿಸಲು ಬಳಸುವ ಉಕ್ಕು ಉತ್ಪಾದನಾ ಘಟಕ 'ಜೆಎಸ್‌ಎಸ್‌ಎಲ್"ಗೆ ಬುಧವಾರ ಜಿಲ್ಲೆಯ ತೋರಣಗಲ್‌ನಲ್ಲಿ ಚಾಲನೆ ದೊರೆಯಿತು. ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಹಾಗೂ ಜೆಎಸ್‌ಎಸ್‌ಎಲ್‌ನ ಸಿಇಒ ಟಾಮ್ ಹಾಗಿ ಅವರು ಜಂಟಿಯಾಗಿ ನೂತನ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು,

'ಒಟ್ಟು ರೂ. 200 ಕೋಟಿ ಹೂಡಿಕೆಯ ಈ ಘಟಕವು ಭಾರತದಲ್ಲಿ ಬೃಹತ್ ಬಹು ಮಹಡಿ ಕಟ್ಟಡಗಳಿಗೆ ಬೇಕಾಗುವ ಉಕ್ಕಿನ ಸಾಮಗ್ರಿಗಳನ್ನು ಉತ್ಪಾದಿಸಲಿದ್ದು, ವಾರ್ಷಿಕ 35 ಸಾವಿರದಿಂದ 45 ಸಾವಿರ ಟನ್ ಉತ್ಪದನಾ ಗುರಿ ಹೊಂದಿದೆ. ಮುಂದೆ ಇದರ ಪ್ರಮಾಣ 90 ಸಾವಿರ ಟನ್ ತಲುಪಲಿದೆ. ಉತ್ಪಾದನೆಯ ಕೇವಲ ಶೇ. 5ರಷ್ಟನ್ನು ಮಾತ್ರ ರಫ್ತು ಮಾಡುವ ಉದ್ದೇಶ ಹೊಂದಲಾಗಿದ್ದು, ಶೇ. 95ರಷ್ಟನ್ನು ಭಾರತದಲ್ಲೇ ಬಳಸಲಾಗುವುದು" ಎಂದು ಅವರು ಹೇಳಿದರು. ಎಂದು ಸಜ್ಜನ್ ಜಿಂದಾಲ್ ತಿಳಿಸಿದರು.

ಬೃಹತ್ ಕಟ್ಟಡ ನಿರ್ಮಾಣಕ್ಕೆ ಬಳ್ಳಾರಿ ಸ್ಟೀಲ್ : ಭಾರತದ ಕಟ್ಟಡ ನಿರ್ಮಾಣ ವಿನ್ಯಾಸಕಾರರಿಗೆ, ಇಂಜಿನಿಯರ್ ಗಳಿಗೆ ಈ ಉತ್ಪಾದನಾ ಘಟಕದಿಂದ ಸಾಕಷ್ಟು ಉಪಯೋಗವಾಗಲಿದ್ದು, ಬೇಡಿಕೆಗೆ ಅನುಗುಣವಾದ ವಿನ್ಯಾಸದ ಉಕ್ಕನ್ನು ತಯಾರಿಸಿ ಪೂರೈಕೆ ಮಾಡಲಾಗುವುದು. ಮುಂದೆ ಇದೇ ರೀತಿಯ ಘಟಕವನ್ನು ಮುಂಬೈನಲ್ಲೂ ಸ್ಥಾಪಿಸಲಾಗುವುದು.ಆಸ್ಪತ್ರೆ, ಕ್ರೀಡಾಂಗಣ, ಹೋಟೆಲ್‌ಗಳಿರುವ ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ಬೇಕಾಗುವ, ಅದರಲ್ಲೂ ಮುಖ್ಯವಾಗಿ ಶೇ. 90ರಷ್ಟು ಉಕ್ಕನ್ನೇ ಬಳಸಿ ಕಟ್ಟಡ ನಿರ್ಮಿಸಲು ಇದರಿಂದ ಸಾಕಷ್ಟು ಅನುಕೂಲವಾಗಲಿದೆ" ಎಂದು ಟಾಮ್ ಹಾಗಿ ತಿಳಿಸಿದರು.

ಉಕ್ಕು ಬಳಸಿ, ನಿರ್ಮಾಣ ವೆಚ್ಚ ಇಳಿಸಿ: ಭಾರತದಲ್ಲಿ ಪ್ರತಿ ಕಟ್ಟಡದ ಬಹುತೇಕ ಸಾಮಗ್ರಿಗಳ ಒಟ್ಟು ಶೇ. 5ರಷ್ಟು ಉಕ್ಕನ್ನು ಮಾತ್ರ ಬಳಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ಅಧಿಕ ಉಕ್ಕು ಬಳಸುವ ಮೂಲಕ ಉತ್ಪಾದನಾ ವೆಚ್ಚದಲ್ಲೂ ಉಳಿತಾಯ ಮಾಡಬಹುದಾಗಿದೆ" ಎಂದು ಟಾಮ್ ನುಡಿದರು.

'ಸದ್ಯ ಇಂಗ್ಲೆಂಡ್‌ನಲ್ಲಿ ಸಿಮೆಂಟ್ ಕಾಂಕ್ರೀಟ್‌ನಿಂದ ನಿರ್ಮಿಸುವ ಕಟ್ಟಡದ ಪ್ರತಿ ಚದರ ಮೀಟರ್‌ಗೆ 145 ಪೌಂಡ್ ವೆಚ್ಚವಾಗುತ್ತಿದ್ದು, ಉಕ್ಕು ಬಳಸಿ ನಿರ್ಮಿಸುವ ಕಟ್ಟಡಕ್ಕೆ 110 ಪೌಂಡ್ ಖರ್ಚಾಗುತ್ತಿದೆ. ಕಟ್ಟಡ ವಿನ್ಯಾಸದ ರೂಪುರೇಷೆ ಸಿದ್ಧಡಿಸುವುದಕ್ಕೂ ಈ ಕಂಪೆನಿ ನೆರವಾಗುತ್ತಿದ್ದು, ಭಾರತದಲ್ಲೂ ಈ ಸೌಲಭ್ಯ ಇನ್ನು ಮುಂದೆ ದೊರೆಯಲಿದೆ ಎಂದು ಟಾಮ್ ಹೇಳಿದರು.

English summary
JSW Severfield Structures Ltd (JSSL), a joint venture between Mumbai-headquartered JSW Steel and UK-based Severfield Reeve Structures, plans to invest around Rs 300 crore for expanding the capacity of its Vijayanagar unit, Bellary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X