ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ಸೆಕೆಂಡುಗಳಲ್ಲಿ ಸೂಕ್ತ ನೌಕರ ನಿಮ್ಮ ಬಳಿಯಲ್ಲಿ

By Prasad
|
Google Oneindia Kannada News

Corp-Corp.com: Matching the Job and Candidate
ಆರ್ಥಿಕ ಬಿಕ್ಕಟ್ಟು ಅತ್ಯಂತ ವಿಷಮ ಸ್ಥಿತಿ ತಲುಪಿದಾಗಲೂ ಸಾವಿರಾರು ನಿರುದ್ಯೋಗಿಗಳಿಗೆ ಕೆಲಸ ಸಿಗಲು ಸಹಾಯ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ವರ್ಜೀನಿಯಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಾರ್ಪ್-ಕಾರ್ಪ್.ಕಾಂ ಕಂಪನಿ. ಈ ಕಂಪನಿಯ ಮತ್ತೊಂದು ಹೆಗ್ಗಳಿಕೆಯೆಂದರೆ, ಕೇವಲ 30 ಸೆಕೆಂಡುಗಳಲ್ಲಿ 'ಫೆಚ್' ಎಂಬ ತಂತ್ರಜ್ಞಾನದ ಮುಖಾಂತರ ನೌಕರಿ ಹುಡುಕುವವರನ್ನು ಸೂಕ್ತ ಕಂಪನಿ ಜೊತೆಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.

ನೌಕರಿಗಾಗಿ ನಿರುದ್ಯೋಗಿಗಳು ಎಡತಾಕುವ ಅಥವಾ ಸೂಕ್ತ ಅಭ್ಯರ್ಥಿಗಳಿಗಾಗಿ ಕಂಪನಿಗಳು ಶೋಧಿಸುವ ಅಗತ್ಯವೇ ಇಲ್ಲ. ಕಾರ್ಪ್-ಕಾರ್ಪ್ ಕಂಡುಕೊಂಡಿರುವ ಈ ನೂತನ ವ್ಯವಸ್ಥೆಯೇ ಎಲ್ಲ ಮಾಹಿತಿ ಹುಡುಕುವ ಕೆಲಸ ಮಾಡುತ್ತದೆ. ಯಾವುದೇ ಕಂಪನಿ ತನ್ನ ಅಗತ್ಯವನ್ನು ತಿಳಿಸಿದರೆ, 'ಫೆಚ್' ತಂತ್ರಜ್ಞಾನ ಸೂಕ್ತ ಅಭ್ಯರ್ಥಿಯನ್ನು ಹುಡುಕಿ, ಬಯೋಡೇಟಾ ಪರಾಮರ್ಶಿಸಿ, 10 ಅತ್ಯುತ್ತಮ ಅಭ್ಯರ್ಥಿಗಳ ವಿವರಗಳನ್ನು 30 ಸೆಕೆಂಡುಗಳಲ್ಲಿ ನೀಡುತ್ತದೆ.

ಕಾರ್ಪ್-ಕಾರ್ಪ್ ಕಂಪನಿಯ ಸಿಇಓ ಆಗಿರುವ ಪ್ರಭಾಕರನ್ ಮುರುಗಯ್ಯ ಅವರು, "ನಾವು ಕಂಡುಕೊಂಡಿರುವ ಈ ವ್ಯವಸ್ಥೆಯಿಂದಾಗಿ ಶೇ.30ರಷ್ಟು ಕೆಲಸ ಹುಡುಕುವ ಸಮಯವನ್ನು ಪ್ರತಿದಿನ ಉಳಿಸುತ್ತಿದೆ. ಇಂದಿನ ಲಗುಬಗೆಯ ಜೀವನದಲ್ಲಿ ಸಮಯ ಉಳಿತಾಯ ತೀರ ಅಗತ್ಯಗಳಲ್ಲೊಂದು" ಎಂದು ಫೆಚ್ ತಂತ್ರಜ್ಞಾನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಡಿಮೆ ಸಮಯದಲ್ಲಿ ಸೂಕ್ತ ವ್ಯಕ್ತಿಯನ್ನು ಹುಡುಕಿ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಐಟಿ ಕ್ಷೇತ್ರದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಶೇ.20ರಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯ. ಗ್ರಾಹಕರ ಅಗತ್ಯಗಳು ಶೀಘ್ರವಾಗಿ ಪೂರೈಕೆಯಾದರೆ ಎರಡು ಪ್ರಾಜೆಕ್ಟ್ ಗಳ ನಡುವಿನ ನಿರುತ್ಪಾದನಾ ಅಂತರವನ್ನು ಕೂಡ ಕಡಿಮೆ ಮಾಡಬಹುದು. 50 ನೌಕರರನ್ನು ಹೊಂದಿರುವ ಕಂಪನಿ ತನ್ನ ಉತ್ಪಾದನೆಯನ್ನು ಶೇ.10ರಷ್ಟು ಹೆಚ್ಚಿಸಿಕೊಂಡರೂ ಸಾಕು ಪ್ರತಿವರ್ಷದ ಗಳಿಕೆಯಲ್ಲಿ 5 ಲಕ್ಷ ಡಾಲರ್ ನಷ್ಟು ಏರಿಕೆ ಕಂಡುಬರುತ್ತದೆ ಎಂದು ಮುರುಗಯ್ಯ ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಈ ನೂತನ ತಂತ್ರಜ್ಞಾನದ ಲಾಭ ತರಿಸಿಕೊಡುವ ಉದ್ದೇಶದಿಂದ ಅಮೆರಿಕದಾದ್ಯಂತ 20ಕ್ಕೂ ಹೆಚ್ಚಿನ ಸಮಾವೇಶಗಳನ್ನು ಕಾರ್ಪ್-ಕಾರ್ಪ್.ಕಾಂ ಕಂಪನಿ ನಡೆಸಿದೆ. ಉದ್ಯೋಗ ವಿನಿಮಯ ಅಭಿಯಾನದಲ್ಲಿ ಸಾಕಷ್ಟು ಯಶ ಗಳಿಸಿರುವ ಕಾರ್ಪ್-ಕಾರ್ಪ್.ಕಾಂ ಕಂಪನಿ ಗ್ರಾಹಕರ ಪಟ್ಟಿಯಲ್ಲಿ 6 ಸಾವಿರಕ್ಕೂ ಹೆಚ್ಚಿನ ಕಂಪನಿಗಳು ಸೇರ್ಪಡೆಯಾಗಿದ್ದಾರೆ. ಮತ್ತು ಪ್ರತಿ ತಿಂಗಳು 30 ಸಾವಿರಕ್ಕೂ ಹೆಚ್ಚಿನ ಸಂಪರ್ಕಗಳು ವೆಬ್ ಸೈಟ್ ಮುಖಾಂತರ ಸೇರಿಕೊಳ್ಳುತ್ತಿವೆ. ಆರ್ಥಿಕ ಮುಗ್ಗಟ್ಟು ಸಂಭವಿಸಿದಾಗಲೂ ಕೂಡ ಪ್ರತಿ ತ್ರೈಮಾಸಿಕದಲ್ಲಿ ಕಂಪನಿ ಅಭಿವೃದ್ಧಿಯನ್ನು ಕಂಡಿದೆ.

ಉತ್ತಮ ಫಲಿತಾಂಶ ನೀಡುತ್ತಿರುವ ನೂತನ ತಂತ್ರಜ್ಞಾನ, ಗ್ರಾಹಕರ ಸಂತೋಷ, ಅತ್ಯಂತ ನುರಿತ ನೌಕರರ ತಂಡ ಮತ್ತು ಕಂಪನಿಯ ಗ್ರಾಹಕ ಸಂವೇದನಾ ನೀತಿಯೇ ಎಲ್ಲ ಯಶಸ್ಸಿಗೆ ಮೂಲ ಕಾರಣ ಎಂದು ಮುರುಗಯ್ಯ ವಿಶ್ಲೇಷಿಸಿದ್ದಾರೆ. ಜಾಗತಿಕವಾಗಿಯೂ ತನ್ನ ಬಾಹುಗಳನ್ನು ವಿಸ್ತರಿಸುವ ಮಹತ್ ಯೋಜನೆಯನ್ನು ಕಾರ್ಪ್-ಕಾರ್ಪ್.ಕಾಂ ಕಂಪನಿ ಹಾಕಿಕೊಂಡಿದೆ. ಕಾರ್ಪ್-ಕಾರ್ಪ್ ಕಂಪನಿ ಸ್ಥಾಪಿತವಾಗಿದ್ದು 2007ರಲ್ಲಿ.

English summary
The Virginia headquartered technology firm Corp-Corp.com, founded in 2007, has helped several thousands of candidates to land in a job during the worst economic conditions in the history. Their disruptive unique FETCH technology connects the job seekers with the right recruiters in less than 30 seconds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X